ಬೆಂಬಲಿಗರು

ಮಂಗಳವಾರ, ಫೆಬ್ರವರಿ 7, 2023

ತಿರುವನಂತ ಪುರ ಪ್ರವಾಸ 1

ಮಾತೃಭೂಮಿ ಎಂಬ ಮಲಯಾಳ ದಿನ ಪತ್ರಿಕೆ ಇದೆ . ಸ್ವಾತಂತ್ರ್ಯ ಹೋರಾಟಗಾರ ದಿ ಕೇಶವ ಮೆನನ್ ಆರಂಭಿಸಿದ ಪತ್ರಿಕೆ .ಈಗಲೂ ಪತ್ರಿಕಾ ಧರ್ಮ ಪಾಲಿಸಿಕೊಂಡು ಬರುತ್ತಿರುವುದು ಗಮನಾರ್ಹ . ದಶಕಗಳಿಂದ ಪ್ರತ್ಯೇಕ  ವಾರ ಪತ್ರಿಕೆ  ನಡೆಸಿಕೊಂಡು ಬರುತ್ತಿದ್ದು ಜ್ಞಾನ ಪೀಠ ಪ್ರಶಸ್ತಿ ವಿಜೇತ ಶ್ರೀ ಎಂ ಟಿ  ವಾಸು ದೇವನ್ ನಾಯರ್ ಇದರ ಸಂಪಾದಕ ರಾಗಿ ಇದ್ದರು ಎಂಬುದು ಇದರ ಹಿರಿಮೆ . ಪತ್ರಾಧಿಪ ರು ಎಂದು ಸಂಪಾದಕರಿಗೆ ಕರೆಯುವರು . ಮೌಲ್ಯಯುತ ಸಾಹಿತ್ಯ ಜನರಿಗೆ ಉಣಿಸಿದ ಪತ್ರಿಕೆ . ಕನ್ನಡವೂ ಸೇರಿದಂತೆ ಜಗತ್ತಿನ ಹಲವು ಭಾಷೆಯ ಕೃತಿಗಳ ಅನುವಾದದ ಮೂಲಕ ಸಾಹಿತ್ಯ ಪ್ರಿಯ ಮಲಯಾಳಿಗಳಿಗೆ ಪರಿಚಯಿದೆ . ಉದಾ ಶ್ರೀಕೃಷ್ಣ ಅಲನಹಳ್ಳಿಯವರ ಭುಜಂಗಯ್ಯನ ದಶಾವತಾರಗಳು ಮಾತೃಭೂಮಿ ವಾರ ಪತ್ರಿಕೆಯಲ್ಲಿ ಭುಜಂಗಯ್ಯಂದೆ ದಶಾವತಾರಂಗಳ್ ಎಂಬ ಹೆಸರಿನಲ್ಲಿ ಧಾರಾವಾಹಿ ಯಾಗಿ ಬಹು ಜನಪ್ರಿಯ ಆಗಿದ್ದ ಕೃತಿ ,ಕನ್ನಡಿಗರಿಂದ ಅಧಿಕ ಮಲಯಾಳಿ ಗಳು ಅದನ್ನು ಓದಿರಬಹುದು ಎಂದು ನನ್ನ ಊಹೆ . 

ಈ ಪತ್ರಿಕೆಯವರು ಕೆಲ ವರ್ಷಗಳಿಂದ ಅಂತರರಾಷ್ಟ್ರೀಯ ಅಕ್ಷರ ಉತ್ಸವ ಎಂಬ ಸಾಹಿತ್ಯ ಸಮ್ಮೇಳನ ಜಯಪುರ ಲಿಟರರಿ ಫೆಸ್ಟಿವಲ್ ಮಾದರಿಯಲ್ಲಿ ನಡೆಸಿ ಕೊಂಡು ಬರುತ್ತಿದ್ದು  ಈ ಬಾರಿ ಭಾಗವಹಿಸುವ ಅವಕಾಶ ಸಿಕ್ಕಿತು . ಕೇರಳದ ರಾಜಧಾನಿ ತಿರುವನಂತ ಪುರಂ ನ ಕನಕ ಕುನ್ನು ಅರಮನೆ (ಕೊಟ್ಟಾರಂ )ಆವರಣದಲ್ಲಿ  2.2.23 ರಿಂದ 5.2.23 ರ ವರೆಗೆ . ತಮಿಳು ಭಾಷೆಯಲ್ಲಿ ಶ್ರೀ ಎಂಬ ಉಪಾಧಿ ತಿರು ಎಂದು  ಎಂದು ಆಗುತ್ತದೆ .ಶ್ರೀ ಅನಂತ ಪುರ ತಿರುವನಂತ ಪುರ .ಹಿಂದೆ ತಿರುವಾಂಕೂರು ಮಹಾರಾಜ ರ  ರಾಜಧಾನಿ ಆಗಿದ್ದು ತಮಿಳರು ಕೂಡಾ ಗಮನಾರ್ಹ ಸಂಖ್ಯೆಯಲ್ಲಿ ಇರುವ ಊರು . 

ದಕ್ಷಿಣದ ರಾಜ್ಯಗಳ ಎಲ್ಲಾ ರಾಜಧಾನಿ ಗಳನ್ನು ಮತ್ತು ಕೇರಳದಮಿಕ್ಕ ಎಲ್ಲಾ ಮಹಾನಗರ ಗಳನ್ನು ಹಿಂದೆ ಕಂಡಿದ್ದು ತಿರುವ ನಂತ ಪುರಕ್ಕೆ ಇದು ಮೊದಲ ಭೇಟಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ