ಬೆಂಬಲಿಗರು

ಶನಿವಾರ, ಫೆಬ್ರವರಿ 11, 2023

ಅಕ್ಷರ ಜಾತ್ರೆಯಲ್ಲಿ ಕಂಡ ಇಬ್ಬರು ಅಪರೂಪದ ರಾಜಕಾರಿಣಿಗಳು

 ಮಾತೃಭೂಮಿ ಅಕ್ಷರ ಜಾತ್ರೆ ೨೩ ರಲ್ಲಿ ನಾವು ಹಾಜರಾದ ಒಂದು ಒಳ್ಳೆಯ ಕಾರ್ಯಕ್ರಮ ಶಶಿ ತರೂರ್ ಮತ್ತು ಪಳನಿವೇಲ್ ತ್ಯಾಗರಾಜನ್ ಭಾಗವಹಿಸಿದ "ಭಾರತ -ಒಕ್ಕೂಟ ವ್ಯವಸ್ಥೆಯ ಪುನರಾವಲೋಕನ " ಎಂಬ ವಿಷಯದ ಮೇಲಿನ ಸಂವಾದ . ಪಳನಿವೇಲು ತ್ಯಾಗರಾಜನ್ ತಿರುಚಿ ಏನ್ ಐ ಟಿಕೆ ಪದವೀಧರ ,ಅಮೇರಿಕಾದ ಬಫೆಲೋ ವಿಶ್ವ ವಿದ್ಯಾಲಯದಿಂದ  (ಇಲ್ಲಿ ನಮ್ಮವರೇ ಆದ ಶಂಭು ಉಪಾಧ್ಯಾಯರು  ಪ್ರಾಧ್ಯಾಪಕರು )ಪಿ ಎಚ್ ಡಿ ಪದವಿ ಪಡೆದವರು . ಅಲ್ಲದೆ ಹಣಕಾಸು ವಿಷಯದಲ್ಲಿಯೂ ತಜ್ಞ . ಬಹುರಾಷ್ಟ್ರೀಯ ಹಣಕಾಸು ಸಂಸ್ಥೆಗಳಲ್ಲಿಯೂ ಸೇವೆ ಮಾಡಿದ ಅನುಭವ .ಪ್ರಸ್ತುತ ತಮಿಳುನಾಡು ರಾಜ್ಯದ ಹಣಕಾಸು ಸಚಿವ .

ಶಶಿ ತರೂರು ತಿರುವನಂತಪುರದ ಸಂಸದ .ಇವರು ತಮ್ಮ ೨೨ ನೇ ವಯಸ್ಸಿನಲ್ಲಿಯೇ ಪಿ ಎಚ್ ಡಿ ಗಳಿಸಿದವರು .ಅನೇಕ ವರ್ಷ ವಿಶ್ವ ಸಂಸ್ಥೆಯಲ್ಲಿ ಸೇವೆ . ಒಳ್ಳೆಯ ಲೇಖಕ ,ಚಿಂತಕ ಮತ್ತು ಭಾಷಣ ಕಾರ . 

ಸಂಶೋಧನೆ ಮಾಡಿ ಪ್ರಸಿದ್ಧ ವಿಶ್ವ ವಿದ್ಯಾಲಯ ಗಳಿಂದ ಡಾಕ್ಟರೇಟ್ ಪಡೆದರೂ ಇವರುಗಳು ಡಾಕ್ಟರ್ ಎಂಬ ಉಪಾಧಿ ತಮ್ಮ ಹೆಸರಿನೊಡನೆ ಸೇರಿಸಿಕೊಳ್ಳುವುದು ಕಡಿಮೆ ಎಂಬುದನ್ನು ಗಮನಿಸಿ . 

ಇಬ್ಬರೂ ಬೇರೆ ಬೇರೆ ರಾಜಕೀಯ ಪಕ್ಷವನ್ನು ಪ್ರತಿನಿಧಿಸುವವರು .ಆದರೂ ರಾಜಕೀಯವನ್ನು ಮೀರಿ ಹೇಗೆ ಒಂದು ಜ್ವಲಂತ ವಿಷಯವನ್ನು ಗಂಭೀರವಾಗಿ ಚರ್ಚಿಸ ಬಹುದು ಎಂದು ತೋರಿಸಿ ಕೊಟ್ಟಿದ್ದಾರೆ . ಇಲ್ಲಿ ಆವೇಶ ವಿಲ್ಲಾ ,ಆಕ್ರೋಶವಿಲ್ಲ ,ತಾನೇ ಎಲ್ಲಾ ತಿಳಿದವನು ಎಂಬ ಜಂಬವಿಲ್ಲ .ನಿಶಾಗಂಧಿ ಸಭಾಗೃಹದಲ್ಲಿ  ತುಂಬಿದ ಸಂಭಾಂಗಣ . ಚರ್ಚೆ ಇಂಗ್ಲಿಷ್ ಭಾಷೆಯಲ್ಲಿ ಇದೆ . . 

https://youtu.be/WU0WALEzDFk

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ