ಬೆಂಬಲಿಗರು

ಮಂಗಳವಾರ, ಮೇ 28, 2013

ನಮ್ಮ ಊರಿನ ಹೆಮ್ಮೆಯ ಸಂಗೀತ ನಕ್ಷತ್ರ - ರಂಜನಿ ಗುರುಪ್ರಸಾದ್

                                                       
 



ಕರ್ನಾಟಕ ಸಂಗೀತ ಕ್ಷೇತ್ರ ದ  ಯುವ ತಲೆ ಮರೆಯ  ಅಗ್ರ ಗಣ್ಯ  ಹಾಡು ಗಾರ್ತಿ  ರಂಜನಿ ಗುರುಪ್ರಸಾದ್ .ತಂದೆ ಅರವಿಂದ


ಹೆಬ್ಬಾರ್ ,ಉಡುಪಿ  ಎಂ ಜಿ ಎಂ ಕಾಲೇಜ್ ನಲ್ಲಿ  ಪ್ರಾಧ್ಯಾಪಕ ರಾಗಿದ್ದವ ರು ಮತ್ತು ತಾಯಿ  ಶ್ರೀಮತಿ ಅನ೦ತ


ಲಕ್ಷ್ಮಿ .ಇಬ್ಬರೂ  ಸಂಗೀತ ದಲ್ಲಿ  ಪರಿಶ್ರಮ  ಇದ್ದವರು .ಆರಂಭದ ಗುರುಗಳೂ ಅವರೇ. ನಂತರ  ವಿದ್ವಾನ್  ಮಧೂರು


ಶ್ರೀ ಬಾಲಸುಬ್ರಹ್ಮಣ್ಯಂ ಅವರಲ್ಲಿ ತರಬೇತಿ. ಖ್ಯಾತ  ಗಾಯಕಿ ಶ್ರೀಮತಿ ಸೌಮ್ಯ  ಅವರ  ಮುಂದಿನ  ಮಾರ್ಗದರ್ಶಿ .


ಕರ್ನಾಟಕ  ಸಂಗೀತ ದ  ಮೇರು  ಶ್ರೀ ಚೆಂಗಲ್ ಪೆಟ್  ರಾಮನಾಥನ್  ಅವರಲ್ಲ್ಲೂ ಶಿಷ್ಯ ವೃತ್ತಿ.


ಸಣ್ಣ ವಯಸ್ಸಿನಲ್ಲಿ  ಇಷ್ಟೆಲ್ಲಾಲ್ಲಾ ಸಾಧನೆ  ಸುಮ್ಮನೆ ಆಗಲಿಲ್ಲ.  ಅದಕ್ಕಾಗಿ ಚೆನೈ ನಲ್ಲಿ  ಹಾಸ್ಟಲ್ ವಾಸ, ಸಾಮಾನ್ಯ 


ವಿದ್ಯಾಭ್ಯಾಸ ಅಲ್ಲಿಯೇ ಮುಂದುವರಿಕೆ . ಮದ್ರಾಸ್ ವಿಶ್ವ ವಿದ್ಯಾಲಯದಿಂದ  ಎಂ ಮ್ಯುಸಿಕ್  ಪದವಿ.


ಚೆನ್ನೈ ನ  ಪ್ರಮುಖ ಸಭಾಗಳಲ್ಲಿ  ಮನ್ನಣೆ.ಆಕಾಶವಾಣಿ ಮತ್ತು ದೂರದರ್ಶನ್  ಎ ಗ್ರೇಡ್ ಕಲಾವಿದೆ .

ಇ೦ಜಿನಿಯರ್ ಗುರುಪ್ರಸಾದ್  (ಸುಳ್ಯ ಪದವಿನರು) ಪತಿ.  ಇವರ ಪ್ರತಿಭೆಗೆ ತುಂಬು ಪ್ರೋತ್ಸಾಹ .ಇವರ

ಹಾಡುಗಾರಿಕೆಯ  ಒಂದು ತುಣುಕು ನೋಡಿರಿ.(ಅಪ್ ಲೋಡರ್ಗೆ ವಂದಿಸುತ)



https://www.youtube.com/watch?v=cQpm547iqpM

ಸೋಮವಾರ, ಮೇ 27, 2013

ಮರೆಯಲಾಗದ ಮಹನೀಯರು -ಕುದ್ಮುಲ್ ರಂಗ ರಾಯರು


                                                                       ೧೮೫೯-೧೯೨೦

ಮಂಗಳೂರಿನಲ್ಲಿ  ಬಂಟ್ಸ್ ಹಾಸ್ಟಲ್ ನಿಂದ  ಪಿ ವಿ ಎಸ  ಸರ್ಕಲ್ ಗೆ  ಹೋಗುವ ರಸ್ತೆಗೆ  ಕುದ್ಮುಲ್ ರಂಗ ರಾವ್  ರಸ್ತೆ  ಎಂದು ಹೆಸರು. ಈ ರೋಡಿನಲ್ಲಿ  ಇವರ ಹೆಸರಿನ ಹಿಂದುಳಿದ ವರ್ಗದವರ  ವಿದ್ಯಾರ್ಥಿ ನಿಲಯ ಇದೆ . ಇವರು

ಸಾರಸ್ವತ ಬ್ರಾಹ್ಮಣ ರು. ವಕೀಲ ವೃತ್ತಿ. ೧೯ನೆ  ಶತಮಾನದಲ್ಲಿ  ಅಸ್ಪೃಶ್ಯತೆ ಯ ವಿರುದ್ದ  ಹೋರಾಟ ನಡೆಸಿದವರು .ಆ ಕಾಲದಲ್ಲಿ ಇವರಿಗೆ  ಭಾರೀ ಪ್ರತಿರೋಧ ಇತ್ತು.   ಡಿಪ್ರೆಸ್ಡ್ ಕ್ಲಾಸ್ ಸೊಸೈಟಿ  ಆರಂಬಿಸಿ  ,ಹಿಂದುಳಿದವರಿಗೆ  ಸೇಡಿಗುಡ್ಡೆಯಲ್ಲಿ

ಶಾಲೆ  ಆರಂಬಿಸಿದರು . ಬಹುಶ  ಅಲ್ಲೇ ಇರುವುದು  ಈಗಿನ   ಹಾಸ್ಟಲ್.ಇವರ  ಕಾರ್ಯಕ್ಕೆ ಕ್ರಮೇಣ  ಒತ್ತಾಸೆಯಾದವರು  ಕಾರ್ನಾಡ್ ಸದಾಶಿವ ರಾಯರು.


೨೪.೨.೧೯೩೫ ರಲ್ಲಿ  ಮಹಾತ್ಮಾ ಗಾಂಧಿಯವರು  ಮಂಗಳೂರಿಗೆ ಬೇಟಿಯಿತ್ತಾಗ  ಹೇಳಿದ ಮಾತು ,'ಹಿಂದುಳಿದವರನ್ನು ಮೇಲೆತ್ತುವ  ಮತ್ತು ಅಸ್ಪೃಶ್ಯತಾ ನಿರ್ಮೂಲನೆಯ ನನ್ನ  ಪ್ರಯತ್ನಗಳಿಗೆ  ಕುದ್ಮುಲ್ ರಂಗ ರಾಯರು  ಮಾರ್ಗ ದರ್ಶಿ
ಮತ್ತು  ಸ್ಪೂರ್ತಿ'


ಕುದ್ಮುಲ್ ಅವರು ಸ್ತ್ರೀ ಶಿಕ್ಷಣ ಕ್ಕೂ  ಪ್ರೋತ್ಸಾಹ ನೀಡಿದರು.ಇವರ ಮಗಳು  ರಾಧಾಭಾಯ್ ಕುದ್ಮುಲ್  ಮದ್ರಾಸಿನ ಮಾಜಿ ಮುಖ್ಯ ಮಂತ್ರಿ ಶ್ರೀ  ಸುಬ್ಬರಾಯನ್ ಅವರನ್ನು ವಿವಾಹ  ಆದರು (ಅಂತರ್ಜಾತಿ). ಇವರ ಮಕ್ಕಳೇ  ಪ್ರಸಿದ್ದ ರಾದ  ಕುಮಾರಮಂಗಲಂ  ಸಹೋದರರು .ಒಬ್ಬರು ಸಶಸ್ತ್ರ ಪಡೆ ಯ  ಮಹಾ ದಂಡ ನಾಯಕ ನಾದರೆ ,ಇನ್ನೊಬ್ಬರು  ರಾಜಕಾರಿಣಿ ಯಾಗಿ  ಕೇಂದ್ರ ಸಚಿವರಾದರು.
ಮಗಳು  ಪಾರ್ವತೀ ಕೃಷ್ಣನ್  ಸಂಸತ್ ಸದಸ್ಯರಾಗಿದ್ದರು .ಮೊಮ್ಮಗ  ರಂಗ ರಾಜ ಕುಮಾರ ಮಂಗಳಂ  ನರಸಿಂಹ ರಾವ್ ಮತ್ತು ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದರು. ರಂಗ ರಾಜಮ್ ಗೆ ಪ್ರತಿಜ್ಞಾ ವಿಧಿ ಬೋಧಿಸಿದ ರಾಷ್ಟ್ರಪತಿ  ಆರ್
ವೆಂಕಟರಾಮನ್  ನಿಮ್ಮ ಮೂರು ತಲೆ ಮಾರಿನವರೊಡನೆ ಕೆಲಸ ಮಾಡಿದ ಅನುಭವಿ ನಾನು ಎಂದು  ಹೇಳಿದರು .

ಮರೆಯಲಾಗದ ಮಹನೀಯರು -ಕಾರ್ನಾಡ್ ಸದಾಶಿವ ರಾವ್

                                             

1881-1937

ಮಂಗಳೂರಿನಲ್ಲಿ  ಕೆ ಎಸ ರಾವ್ ರೋಡ್ ಎಂದರೆ  ಬೆಂಗಳೂರಿನ  ಕೆಂಪೇಗೌಡ ರಸ್ತೆಯಂತೆ .ಹಂಪನಕಟ್ಟೆಯಿಂದ 

ಕೊಡಿಯಾಲ್ ಬೈಲಿಗೆ  ಹೋಗುವ ಮುಖ್ಯ ರಸ್ತೆ . ಸ್ವಾತಂತ್ರ್ಯ ಹೋರಾಟ ಗಾರ  ತ್ಯಾಗ ವೀರ  ಕಾರ್ನಾಡ ಸದಾಶಿವ 

ರಾವ್ ಅವರ ಹೆಸರು ಈ ರಸ್ತೆಗೆ ಇಡಲಾಗಿದೆ .ಬೆಂಗಳೂರಿನಲ್ಲಿಯೂ ಸದಾಶಿವ ಬಡಾವಣೆ ಗೆ ಇವರ ಹೆಸರು .

ಕೆ ಎಸ ರಾವ್ ರಸ್ತೆರ ಕೇಂದ್ರ ಸಹಕಾರಿ ಬ್ಯಾಂಕ್ ಇರುವ ಜಾಗದಲ್ಲಿ ಅವರ ಮನೆ ಇತ್ತು.

ಹುಟ್ಟು ಶ್ರೀಮಂತ ರಾಗಿದ್ದ ಇವರು ಪ್ರಸಿದ್ದ್ದ ವಕೀಲ ರಾಗಿದ್ದರು .ಸ್ವಾತಂತ್ರ್ಯ ಹೋರಾಟ ದಲ್ಲಿ ಭಾಗವಹಿಸುವ 

ಸಲುವಾಗಿ  ವೃತ್ತಿ ಬಿಟ್ಟು ಪೂರ್ಣ ಕಾಲ ದೇಶ ಸೇವೆಗೆ ತೊಡಗಿಸಿ ಕೊಂಡರು. ಮಹಾತ್ಮಾ ಗಾಂಧಿ 

ಅವರಿಗೆ  ಆಪ್ತ ರಾಗಿದ್ದರು .ದಿಪ್ರ್ರೆಸ್ದ್ ಕ್ಲಾಸ್ ಸೊಸೈಟಿ ,ತಿಲಕ್ ವಿದ್ಯಾಲಯ ಇವರು ನಡೆಸಿ ಕೊಂಡು ಬಂದ 

ಸಂಸ್ತೆಗಳು .ಅಸ್ಪ್ರುಶ್ಯತೆ ವಿರುದ್ಧ ಕುದ್ಮಲ್ ರಂಗರಾಯರು ಆರಂಭಿಸಿದ ಹೋರಾಟ ಮುಂದುವರಿಸಿದರು.


ಇವರು ದೇಶ ಸೇವೆ ಗಾಗಿ ಮಾಡಿದ ಸಾಲಕ್ಕೆ ಇವರ ಮನೆಯನ್ನು ಇವರ ಅನುಪಸ್ತಿತಿಯಲ್ಲಿ  ಹರಾಜು ಹಾಕಲಾಯಿತು.


ಹೋರಾಟ ಕಾರಣಕ್ಕೆ ಕಡಲೂರು ಜೈಲಿನಲ್ಲಿ  ಶಿಕ್ಷೆ  ಅನುಭವಿಸಿದರು.

ಈ ನಡುವೆ ಅವರ ಪತ್ನಿ ಹಾಗು ಇದ್ದ ಓರ್ವ ಮಗ ಅನಾರೋಗ್ಯದಿಂದ ಸಾವನ್ನಪ್ಪಿದರು .

ಕರ್ನಾಟಕ  ಕೊಂಗ್ರೆಸ್ಸ್ ನ ಅಧ್ಯಕ್ಷರಾಗಿ ರಾಜ್ಯದಾದ್ಯಂತ ಸಂಚರಿಸಿ ಸಂಘಟನೆ ಮಾಡಿದರು .

೧೯೩೫ ರಲ್ಲಿ ಫೆಡರಲ್ ಆಕ್ಟ್ ನಂತೆ ಪ್ರಾಂತೀಯ ವಿಧಾನ ಸಭೆಗಳಿಗೆ  ಚುನಾವಣೆ ನಡೆಯಿತು .ಕೈಯ್ಯಲ್ಲಿ 

ಏನೂ ಹಣವಿಲ್ಲದ ಸದಾಶಿವ ರಾಯರಿಗೆ ಟಿಕೆಟ್ ನಿರಾಕರಿಸಲಾಯಿತು.

ಶಿವರಾಮ ಕಾರಂತರ  ಮಾತುಗಳಲ್ಲಿ ಕೇಳಿ .' ಇಂಥ ನೋವುಗಳ ಜೊತೆಗೆ ಅವರೇ ದುಡಿದು ಬೆಳೆಸಿದ ಮಂಗಳೂರು 

ಜಿಲ್ಲಾ ಕೊಂಗ್ರೆಸ್ನಲ್ಲಿ  ಧೂಮಕೆತುವಿನಂತೆ ಕಾಲಿರಿಸಿದ ಪುಢಾರಿ ಗಳೊಬ್ಬರು  -ಹೆಸರು ಹೇಳಿದರೂ ಭಾಧಕವಿಲ್ಲ ,ಶ್ರೀನಿವಾಸ

 ಮಲ್ಯ ರಂತವರು ಶ್ರೀ ಕಾರ್ನಾಡರ ಸ್ಥಾನವನ್ನು ಇಳಿಸಲು ಯತ್ನಿಸಿದ್ದನ್ನು ಬಲ್ಲೆ.'

ಚಿನ್ನದ ಚಮಚೆ  ಬಾಯಲ್ಲಿಟ್ಟು ಹುಟ್ಟಿ ,ದೇಶಕ್ಕಾಗಿ ಎಲ್ಲವನ್ನೂ ಕಳೆದು ಕೊಂಡು ದೈನ್ಯಾವಸ್ತೆ ಯಲ್ಲಿ ಕೊನೆಯ 

ದಿನಗಳನ್ನು ಕಳೆದ ಇಂತಹ ಮಹನೀಯರನ್ನು ಮರೆಯ ಬಾರದು.

ಬುಧವಾರ, ಮೇ 22, 2013

ಸಕ್ಕರೆ ಕಾಯಿಲೆ ಮತ್ತು ಗ್ಲೈಕೊಸಿಲೇಟೆಡ್ ಹಿಮೊಗ್ಲೋಬಿನ್ (HbA1c)

 ಇತ್ತೀಚಿಗೆ  ಸಕ್ಕರೆ ಕಾಯಿಲೆಗೆ  HBA1c ಎಂಬ ರಕ್ತ ಪರೀಕ್ಷೆ ಮಾಡುವುದನ್ನು ನೀವು ಗಮನಿಸಿರ ಬಹುದು. ಇದೇನು?


Hb ಎಂದರೆ ಕೆಂಪು ರಕ್ತ ಕಣದಲ್ಲಿ ಇರುವ ಆಮ್ಲಜನಕ ವಾಹಕ ಅಂಶ .ಇದು ಕಬ್ಬಿಣ ಹಾಗೂ ಸಸಾರ ಜನಕ ಗಳಿಂದ 


ಮಾಡಲ್ಪಟ್ಟಿದೆ.ಕೆಂಪು ರಕ್ತ  ಕಣದ ಸರಾಸರಿ ಆಯುಸ್ಸು ೧೨೦ ದಿನಗಳು. ರಕ್ತದಲ್ಲಿ  ಗ್ಲುಕೋಸ್ (ಸಕ್ಕರೆ) ಹಿಮೊಗ್ಲೋಬಿನ್


ನ ಸಸಾರ ಜನಕದ  ಅಂಶದೊಡನೆ ಸೇರಿ  ಗ್ಲೈಕೊಸಿಲೇಟೆಡ್ ಹಿಮೊಗ್ಲೋಬಿನ್  ಉಂಟಾಗುತ್ತದೆ.          ಇದರ


ಪ್ರಮಾಣವನ್ನು  ಅಳೆಯ ಬಹುದು .ಮತ್ತು  ಅದು  ಎರಡರಿಂದ  ನಾಲ್ಕು ವಾರದ ಸರಾಸರಿ  ರ ಕ್ತದ  ಸಕ್ಕರೆಯ


ಅಂಶವನ್ನು ವಿಶ್ವಸನೀಯ ವಾಗಿ  ಹೇಳುತ್ತದೆ.


ಇದನ್ನು  ಹಿಮೊಗ್ಲೋಬಿನ್ ನ  ಶೇಕಡಾ ಇ೦ತಿಸ್ಟು ಎಂದು  ರಿಪೋರ್ಟ್ ಮಾಡುತ್ತಾರೆ.


HBA1C    ಪ್ರಮಾಣ  ೬.೫% ಗಿಂತ  ಜಾಸ್ತಿ ಇದ್ದರೆ  ಸಕ್ಕರೆ ಕಾಯಿಲೆ  ಇದೆ ಎಂದು  ಹೇಳುತ್ತಾರೆ.ಇದನ್ನು  ಖಾಲಿ


ಹೊಟ್ಟೆಗೆ  ಮಾಡ ಬೇಕೆಂದು ಇಲ್ಲ. ಸಕ್ಕರೆ  ಕಾಯಿಲೆ ಇರುವವರಲ್ಲಿ  ಇದು  ೭% ಗಿಂತ  ಕಡಿಮೆ ಇರುವಂತೆ  ವೈದ್ಯರು


ಚಿಕಿತ್ಸೆ  ನೀಡುತ್ತಾರೆ.


ಕೆಲವು ರೋಗಿಗಳು  ವೈದ್ಯರಲ್ಲಿ  ಪರಿಶೀಲನೆ ಗೆ  ಹೋಗುವ೦ದಿನ  ಹಿಂದಿನ ಎರಡು ದಿನ ಸರಿಯಾಗಿ  ಪಥ್ಯ  ಮಾಡುತ್ತಾರೆ.


ಉಳಿದ ದಿನಗಳಲ್ಲಿ  ಪಥ್ಯಕ್ಕೆ  ಸ್ವಲ್ಪ ವಿರಾಮ .ಅಂತಹವರ  ರಕ್ತದ  ಗ್ಲುಕೋಸ್ ಟೆಸ್ಟ್ ಮಾಡಿದರೆ  ನಾರ್ಮಲ್ ಇರುತ್ತದೆ


ಆದರೆ  ಗ್ಲೈಕೊಸಿಲೇಟೆಡ್ ಹಿಮೊಗ್ಲೋಬಿನ್ ಟೆಸ್ಟ್ ನಲ್ಲಿ ಅವರು ತಪ್ಪಿಸಿ  ಕೊಳ್ಳಲಾರರು.ಏಕೆಂದರೆ  ಅದು  ವಾರಗಳ



ಸರಾಸರಿ  ಪ್ರಮಾಣ ನೀಡುತ್ತದೆ.ಸಕ್ಕರೆ ಪ್ರಮಾಣ  ನಿರಂತರ  ಹತೋಟಿಯಲ್ಲಿ ಇದ್ದರೆ  ಮೂತ್ರ ಪಿಂಡ ,ಕಣ್ಣು ,ಹೃದಯ


ಮತ್ತು ಮೆದುಳಿಗೆ  ಆಗುವ  ಹಾನಿ  ತಡೆಗಟ್ಟ  ಬಹುದು.


ಎಚ್ ಬಿ ಎ ೧ ಸಿ  ಪ್ರಮಾಣ ವನ್ನು  ರಕ್ತದ  ಗ್ಲುಕೋಸ್ ಗೆ  ಪರಿವರ್ರ್ತಿಸುವ   ಕೋಸ್ಟಕ  ಕೆಳಗಿದೆ.






ಮಂಗಳವಾರ, ಮೇ 21, 2013

ವೇದ ಮೂರ್ತಿ ದಿ . ಅಮೈ ನಾರಾಯಣ ಭಟ್ರು (ಹವ್ಯಕ ಭಾಷೆ )

                                                    
 
ಪುರೋಹಿತರು   ಎಂದರೆ  ಮುಂದೆ  ನಮ್ಮ ಪರವಾಗಿ ನಿಂದು ನಡೆಸಿ ಕೊಡುವವರು ಹೇಳಿ ಅರ್ಥ .ನಮ್ಮ   ಪುರೋಹಿತರು
 
 
ಅಮೈ ಮನೆತನದವರು . ಅದರಲ್ಲೂ  ನನಗೆ  ತಟ್ಟನೆ ನೆನಪಿಗೆ ಬರುವುದು   ನಗು ಮುಖದ  ದಿ.ನಾರಾಯಣ ಭಟ್ರು. ಈ
 
ಪುರೋಹಿತರು ,ವೈದಿಕರು ದೇವ ಸೇವೆ ಮಾಡಿ ಕೊಂಡು ಇರುವ ಕಾರಣ ಅವರಿಗೆ ಶಾಂತ ಮನಸ್ಥಿತಿ ಇರ ಬೇಕು . ಶೀಘ್ರ ಕೋಪಿ
 
ಗಳಾದರೆ  ಅವು ಇನ್ನು ದೇವೆರಿಗೆ ಹತ್ತಿರ ಆಗಿಲ್ಲ ಎಂದು ಅರ್ಥ . ಕೆಲವು ದೇವಲಯಗಳಲ್ಲಿ   ದೂರ್ವಾಸ
 
ರ ಹಾಗೆ ಕೋಪಿಷ್ಟ   ಪೂಜಾರಿಗಳು ಇರುವರು . ದೂರದಿಂದ ಬಂದ  ಭಕ್ತ ಜನನ್ನು ಕಂಡರೆ  ಕೋಪದಲ್ಲಿ ಹರಿ ಹಾಯುವರು .
 
 
ದೇವರ  ಸೇವಿಸುವಗೆ  ಕ್ರೋಧ ತರವೇ ? ಅದಕ್ಕೇ ಅಂತಹ   ದೇವಸ್ಥಾನಕ್ಕೆ  ಪುರೋಹಿತರು ಬಂದ ಕೂಡಲೇ ದೇವರು
 
ಹೊರ ತೆರಳಿ ಅವರು   ಮನೆಗೆ ಹೋದ ಮೇಲೆ ಬರುವರಂತೆ .
 
ನಾರಾಯಣ ಭಟ್ರು ಯಾವಾಗಲೂ ಹಸನ್ಮುಖಿ.  ಬರುವಾಗಲೇ ನಗುವಿನ ತಂಗಾಳಿ ತರುವರು ಅವರ  ಕಂಡು ನಾಯಿ
 
ಬೊಗಳಿದರೆ  ' ಯಾನತ್ತ ನಾಯಿ ಈ ದಾಯೆ ಕೊರೆಪ್ಪುನೆ' ಎಂದು  ಜೋಕ್  ಮಾಡುವರು .  ಆ  ಮೇಲೆ  ಮದುವೆ ಸಾಮಾನು  ಪಟ್ಟಿಯಲ್ಲಿ ಮದುಮಗಳು   ಮದುಮಗನ ಹೆಸರು ಬರೆಯಲು ಬಿಟ್ಟು ಹೋಗಿದೆ ,ಅವರು ಇದ್ದಾರಲ್ಲ  ಎಂದು ನಗುವರು .
 
ಅವರಿಗೆ ನಶ್ಯ ಸೇದುವ ಆಭ್ಯಾಸ ಇತ್ತು.' ಇಂದು ವಿಟ್ಲ ಪೇಟೆಯ ಹೊಡಿ ತೆಗೆದೆ 'ಎಂದು ಹೇಳಿ ಪನ್ ಮಾಡುವರು . ಸರ್ವಿಸ್
 
ಕಾರಿನಲ್ಲಿ   ಉಪ್ಪಿನ ಕಾಯಿ ಹಾಕಿದ ಹಾಂಗೆ ಜನ ಹಾಕುವರು . ಸ್ವಲ್ಪ ಹೊತ್ತು ಕಳೆದಾಗ ಮರಗಟ್ಟಿ ನಮ್ಮ ಕಾಲು  ಯಾವದು ಇನ್ನೊಬ್ಬರದ್ದು ಯಾವದು ಎಂದು ತಿಳಿಯುವುದಿಲ್ಲ . ಒಮ್ಮೆ   ಕಾಲು  ತುರಿಸುತ್ತದೆ ಎಂದು ತುರಿಸಿದ್ದು ಪಕ್ಕದವರ   ಕಾಲು ಆಗಿತ್ತು ಮಹಾರಾಯರೇ  ಎಂದು ನಗೆಯಾಡುವರು .'  
ಇನ್ನು ಅವರ  ಕೆಲವು  ಮಾತುಗಳು ಹವ್ಯಕ ಭಾಷೆಯಲ್ಲಿಯೇ ಬರೆಯುವೆನು
 
'ಕುಡಿವಲೆ ಕಾಪಿಯೋ  ಚಾವೋ ಹೇಳಿ ಕೇಳಿದರೆ ಮಕ್ಕೊಗೆ  ಹೆದರಿಕೆ ಆವುತ್ತು (ಚಾವಿನ ಭಯ)
 
 ಎನಗೆ ಈಗ ಮರವದು ಜಾಸ್ತಿ , ಆನು ಕೂದ  ಮಣೆಯೇ ಮರದ್ದು .(ಪನ್)
 
ಈ ಮದುವೆಲಿ ಅಗ್ನಿ ಶಾಕ್ಷಿಗೆ ಬೇರೆ ಕಿಚ್ಚ್ಚು ಬೇಡ  ಇಷ್ಟು ಒಳ್ಳೆ ಪೊದು ಸಿಕ್ಕಿತ್ತನ್ನೆ ಹೇಳಿ ಕೆಲವರ  ಹೊಟ್ಟೆ ಕಿಚ್ಚು ಇಕ್ಕು ಅದು ಸಾಕು .
 
ಎನ್ನ ಜಡೆಯ ಹಿಂದಂದ (ಅವಕ್ಕೆ ಉದ್ದ ಜಡೆ ಇತ್ತು ) ಕೆಲವು ಹೆಮ್ಮಕ್ಕ ಏನಕ್ಕ ಹೆಂಗಿದ್ದಿ  ಹೇಳಿ ,ಮೋರೆ ನೋಡಿದ
 
 
ಮೇಲೆ ಪೆಚ್ಚಾದ್ದರ  ಸ್ವಾರಸ್ಯವಾಗಿ ಹೇಳುಗು.
 
ಸುಶ್ರಾವ್ಯ ವಾಗಿ  ಮಂತ್ರ  ಹೇಳುವರು.
 
ಅವರು   ಇಂದು ಇಲ್ಲದ್ದರೂ ಅವರ  ಹಸನ್ಮುಖ  ಕಣ್ಣೆದುರು ಇದೆ.
 
 

ಶನಿವಾರ, ಮೇ 18, 2013

ಭಾಷಾ ಪ್ರಭೇದಗಳು

ನಿನ್ನೆ ಒಬ್ಬ ರೋಗಿ  ಬಂದಿದ್ದರು. ಏನು ತೊಂದರೆ ಎಂದು ಕೇಳಿದ್ದಕ್ಕೆ ಮೂರು ದಿನಗಳಿಂದ ಉರಿ ಒಂದಕ್ಕೆ  ಡಾಕ್ಟ್ರೆ ಎಂದರು.


ನನಗೆ ಸೋಜಿಗ,ಈ ಶಬ್ಧ ನಾನು ಮೊದಲ ಬಾರಿ ಕೇಳುತ್ತಿರುವುದು.ಎಲ್ಲರೂ ಉರಿ  ಮೂತ್ರ  ,ಇಲ್ಲವೇ ತುಳು ಮಲಯಾಳಂ


ನಲ್ಲಿ ಅದಕ್ಕೆ ಸಮಾನಾದ ವಾಕ್ಯ ಬಳಸುತ್ತಾರೆ. ನಾನು ಮೆಡಿಕಲ್ ಓದಿದ್ದು ಹುಬ್ಬಳ್ಳಿಯಲ್ಲಿ. ಅಲ್ಲಿ ರೋಗಿಗಳು  ಕಾಲ್ಮಡಿ


ಬೆಂಕಿ ಬೆಂಕಿ ಹತ್ದಾಂಗಿ ಉರೀತೈತರಿ ಎಂದು ಹೇಳುತ್ತಿದ್ದರು.ದಕ್ಷಿಣ ಕನ್ನಡ ಜಿಲ್ಲೆಯ ವೈಶಿಷ್ಟ್ಯವೆಂದರೆ ಇಲ್ಲಿ ಕನ್ನಡ  ಮಾತೃ


ಭಾಷೆ ಇರುವವರು ಬಹಳ ಕಮ್ಮಿ.ತುಳು, ಬ್ಯಾರಿ ಭಾಷೆ , ಹವ್ಯಕ ,ಕೋಟ  ಕನ್ನಡ ,ಮರಾಟಿ,ಕೊಂಕಣಿ  ಮಾತೃಭಾಷೆ


ಇರುವವರು  ಶಾಲೆಗಳಲ್ಲಿ ಕನ್ನಡ ಅಧ್ಯಯನ ಮಾಡುವರು. ಆದ್ದರಿಂದಲೇ ಇಲ್ಲಿಯ ಬರವಣಿಗೆಯ  ಕನ್ನಡ  ಗ್ರಾಂಥಿಕ


ವಾಗಿಯೂ ಸಂಭಾಷಣೆ ಕನ್ನಡ ಮಾತೃ ಭಾಷೆಯ ಮಿಶ್ರಣ ವೂ ಆಗಿರುವುದು. ಹೆಸರು ತಿಳಿಯಲು  ಇಲ್ಲಿ ನಿಮ್ಮ ಹೆಸರು

ಹೇಗೆ ಎಂದು ಕೇಳುವರು ,ಇದು ತುಳುವಿನ ಪುದರ್ ಇಂಚಿನ ಎಂಬುದಕ್ಕೆ  ಸರಿಯಾದ ಅನುವಾದ, ಕರ್ನಾಟಕದ


ಬೇರೆ ಭಾಗ ಗಳಲ್ಲಿ  ಹೆಸರು ಹೇಗೆ  ಎಂದರೆ  ತಮಾಷೆಗೆ  ನನ್ನ ಹೆಸರು ಹೀಗೆ ಎಂದು ಕೈ ಭಾಷೆ ಮಾಡುವರು .ಪಂಜೆ


ಕಾರಂತ ರ  ಸಾಹಿತ್ಯದಲ್ಲಿ ಕರಾವಳಿ ಕನ್ನಡದ  ಸೊಗಡು ಕಾಣ ಬಹುದು. ಪಂಜೆಯವರು ಚಿಕ್ಕಪ್ಪ ನಿಗೆ  ಚಿಕ್ಕ ತಂದೆ


ಚಿಕ್ಕಮ್ಮನಿಗೆ ಚಿಕ್ಕ ತಾಯಿ ಎಂದು ಬರೆಯುವರು. ಪ್ರಶಸ್ತಿ ವಿಜೇತ ಸಾಹಿತಿ ಶ್ರೀನಿವಾಸ ವೈದ್ಯರು ( ಮೂಲತಃ

ಧಾರವಾಡದವರು ,ಈಗ ಬೆಂಗಳೂರಲ್ಲಿ ನೆಲಸಿದ್ದಾರೆ) ತನಗೆ ಕಾರಂತರ ಕಾದಂಬರಿಗಳು ಅರ್ಥವಾಗುವುದಿಲ್ಲ


ಎಂದಿದ್ದಾರೆ. ಈ  ಪುಸ್ತಕಗಳಲ್ಲಿ ಬರುವ ಸಂಕ ದಾಟುವುದು ,ತಡಮ್ಮ್ಮೆ ಹಾರುವುದು ಇತ್ಯಾದಿ ಅವರಿಗೆ  ಗ್ರೀಕ್ ಅಂಡ್


ಲ್ಯಾಟಿನ್  .ಅದೇ ರೀತಿ  ವೈದ್ಯರ ಹಳ್ಳ ಬಂತು ಹಳ್ಳ , ರಾವ್ ಬಹಾದ್ದೂರ್ ಅವರ ಗ್ರಾಮಾಯಣ ಕರಾವಳಿ ಜನರಿಗೆ


ಕಬ್ಬಿಣದ ಕಡಲೆ ಎನಿಸೀತು.

ಒಮ್ಮೆ ಎರಡು ಸಣ್ಣ ಹುಡುಗಿಯರು ಶಾಲೆಗೆ ಹೋಗುತ್ತಾ ಮಾತನಾಡುತ್ತಿದ್ದರು .' ಇಕೊಳ್ಳ ಸಾರದ   ವಸಂತಿ ಇದ್ದಾಳಲ್ಲ

ಅವಳಿಗೆ  ನಾನು ಚಂದ ಅಂತ ಜಂಬವಾ ,ಅವಳು ಎಂತ ಚಂದವಾ  ,ಮುಸುಂಟು ನೋಡಿದರೆ  ಮುಜುವಿನ

ಹಾಗೆ ಉಂಟು ,ಅವಳಿಗೆ ಜಂಬ ಇದ್ದರೆ ಅವಳಿಗೇ ಆಯಿತಾ ಅಲ್ಲವಾ ' ನನಗೆ ಈ ಭಾಷೆ ಕೇಳಿ  ನಾವು ಸಣ್ಣವರಾಗಿದ್ದಾಗ


ಮಾತನಾಡುತ್ತಿದ್ದ  ಭಾಷೆ ನೆನಪಾಯಿತು.

 ತಮಿಲ್ನಾಡಿನಲ್ಲೂ ಚೆನ್ನೈ ತಮಿಳ್ ,ಕೋವೈ ತಮಿಳ್ ,ಮದುರೈ ತಮಿಳ್ ಎಂಬ ಪ್ರಬೇಧಗಳಿವೆ.ಕೇರಳದಲ್ಲಿ  ತಿರುವನಂತಪುರ


ತ್ರಿಶೂರ್  ಮತ್ತು ಮಲಬಾರ್ ಮಲಯಾಳ ಎಂಬ  ಪ್ರಬೇಧಗಳಿವೆ..


ಬಾಲಂಗೋಚಿ ;  ಹಾಸ್ಯ ಪ್ರಜ್ಞೆಗೆ ಹೆಸರಾಗಿದ್ದ  ಖ್ಯಾತ ಸಾಹಿತಿ ಪ್ರಾದ್ಯಾಪಕ ಎಸ್ ವಿ ಪರಮೇಶ್ವರ ಭಟ್ ಅವರ ಒಬ್ಬ

ವಿದ್ಯಾರ್ಥಿ  ತಾನು ಜಿಲ್ಲ ಪಂಚಾಯತ್ ಮತ್ತು ಶಾಸನ ಸಭೆ ಗೆ ಸ್ಪರ್ದಿಸಬೇಕೆ೦ದಿರುವೆ.ಒಂದಕ್ಕೆ ನಿಲ್ಲಲೋ ಎರಡಕ್ಕೂ

ನಿಲ್ಲಲೋ ಸರ್ ಎಂದು ಸಲಹೆ ಕೇಳಿದ್ದಕ್ಕೆ  ಭಟ್ಟರು ಥಟ್ಟನೆ ಒಂದಕ್ಕಾದ್ರೆ ನಿಲ್ಲಬಹುದು  ಎರಡಕ್ಕೆ ಕುಳಿತುಕೊಳ್ಳಲೇ ಬೇಕು

ಎಂದರಂತೆ.

ಟಿ ಪಿ ಕೈಲಾಸಂ  ಅವರ ಸಂಸ್ಕೃತ  ಅಧ್ಯಾಪಕರು  ತನ್ನ ತರಗತಿಯಲ್ಲಿ ಎಲ್ಲರೂ ಸಂಸ್ಕೃತದಲ್ಲಿ ಕಡ್ಡಾಯವಾಗಿ  ಮಾತನಾಡ

ಬೇಕು ,ಎಂದು ತಾಕೀತು ಮಾಡಿದರಂತೆ . ಆಗ ಕೈಲಾಸಂ ತಮ್ಮ ಒಂದು ಬೆರಳು ಎತ್ತಿ ಮೂತ್ರ ವಿಸರ್ಜನಾರ್ತ್ಹಾಯ

ಬಹಿರ್ದೇಶಂ ಗಚ್ಚಾಮಿ ಎಂದರಂತೆ .ಅಧ್ಯಾಪಕರು ಸಿಟ್ಟಾಗಿ ದೇವ ಭಾಷೆಯನ್ನು ಹಾಗೆಲ್ಲ ಅಪವಿತ್ರ ಮಾಡ ಬಾರದು

ಎಂದರಂತೆ

ಪ್ಲೇಟಿಲೆಟ್ ಎಂಬ ರಕ್ತ ಸ್ಥಂಭಕ


ರಕ್ತದಲ್ಲಿರುವ ಕೆಂಪು ಮತ್ತು ಬಿಳಿ ರಕ್ತ  ಕಣಗಳ ಬಗ್ಗೆ ನಾವೆಲ್ಲಾ ಕೇಳಿದ್ದೇವೆ. ಕೆಂಪು ರಕ್ತ ಕಣಗಳು  ಶ್ವಾಸಕೋಶದಿಂದ  ಆಮ್ಲ


ಜನಕ ವನ್ನು ದೇಹದ ಕಣ ಕಣ ಗಳಿಗೂ ಸಾಗಿಸುವ ವಾಹಕ ವಾದರೆ ಬಿಳಿ ರಕ್ತ ಕಣ ಗಳು  ರೋಗಾಣುಗಳನ್ನು ನಾಶ ಪಡಿಶುವ


ಸೈನಿಕರು. ಇವುಗಳೆರದೊಡನೆ ಪ್ಲಾಟಿಲೆಟ್  ಎಂಬ ಇನ್ನೊಂದು ಮುಖ್ಯ ರಕ್ತ ಕಣ ಎಲೆಯ ಮರೆಯ ಕಾಯಿಯಂತೆ ಇದ್ದು


ರಕ್ತ ಸ್ರಾವ ದಿಂದ ನಮ್ಮನ್ನು ಕಾಯುತ್ತದೆ.

                                               

ಮೇಲಿನ ಚಿತ್ರದಲ್ಲಿ ನೀಲಿ ಚುಕ್ಕೆಗಳಂತೆ ಕಾಣುವ ಕಣಗಳೇ ಪ್ಲಾಟಿಲೆಟ್ ಅಥವಾ ತ್ರೋ೦ಬೋಸೈಟ್ಗಳು .ಎಲ್ಲಿಯಾದರೂ ಸಣ್ಣ 



ಗಾಯ ವಾದೊಡನೆ  ಈ ಕಣ ಗಳು   ಸ್ಥಳಕ್ಕೆ ತೆರಳಿ  ಉದ್ದಾಲಕ ನ೦ತೆ ರಕ್ತನಾಳದಲ್ಲಿ ಆದ ರಂದ್ರ ವನ್ನು ಮುಚ್ಚಲು 


ಶ್ರಮಿಸುತ್ತವೆ .ಮುಂದೆ ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಗೆ ಅನುವು ಮಾಡಿಕೊಟ್ಟು ರಕ್ತಸ್ರಾವ ತಡೆಯವಲ್ಲಿ ಪ್ರಮುಖ 


ಪಾತ್ರ ವಹಿಸುತ್ತವೆ. ನಾವು ಬಹಳ ಮಂದಿ ಈ ಕಣಗಳ ಬಗ್ಗೆ ಕೇಳಿಯೇ ಇಲ್ಲ


ಇತ್ತೀಚಿಗೆ  ಡೆಂಗು ಜ್ವರದ ವ್ಯಾಪಕ ಹಾವಳಿಯಿಂದ ಈ ಕಣಗಳೂ ಸ್ವಲ್ಪ ಪ್ರಸಿದ್ದ್ದಿ ಗೆ ಬಂದಿವೆ .ಈ ಜ್ವರದಲ್ಲಿ  



ಪ್ಲಾಟಿಲೆಟ್ ಕಣಗಳು ಗಣನೀಯವಾಗಿ  ಇಳಿಕೆಯಾಗುತ್ತವೆ.ತಮ್ಮನ್ನು ಪ್ರಸಿದ್ದಿಗೆ ತಂದ ಈ ಜ್ವರಕ್ಕೆ ಪ್ಲಾಟಿ ಲೆಟ್ ಗಳು ಚಿರ ಋಣಿ 

ಗಳಾಗಿರಬೇಕು . ಸಾಮಾನ್ಯವಾಗಿ  ಒಂದು ಘನ ಮಿಲಿ ಲೀಟರ್ ರಕ್ತ 


ದಲ್ಲಿ  ೧೫೦೦೦೦ ದಿಂದ  ೪೫೦೦೦೦ ರ ಷ್ಟು ಈ  ಕಣಗಳ ಸಂಖ್ಯೆ ಇರುತ್ತದೆ. ಇದು  ೫೦೦೦ ಕ್ಕಿಂತ  ಕಮ್ಮಿಯಾದರೆ 


ಯಾವುದೇ  ಪ್ರಚೋದನೆಯಿಲ್ಲದೆ ರಕ್ತ ಸ್ರಾವ ವಾಗುವುದು . ಆದರೆ ಬಹುತೇಕ  ಡೆಂಗು ಜ್ವರ ರೋಗಿಗಳಲ್ಲಿ  ಈ ಕಣಗಳ  


ಸಂಖ್ಯೆ ಒಮ್ಮೆ ಕಮ್ಮಿಯಾದರೂ   ತಾನೇ ಸರಿಯಾಗುವುದು .ವಿಶ್ವ ಆರೋಗ್ಯ ಸಂಸ್ಥೆ ಡೆಂಗು ಜ್ವರದಲ್ಲಿ  ಮುಂಗಾಮಿ ಯಾಗಿ 


 ಪ್ಲಾಟಿಲೆಟ್ ಕೊಡುವಂತೆ ಶಿಫಾರಸ್ ಮಾಡಿಲ್ಲ . 


ಈ ಕಾರಣವಲ್ಲದೆ  ಹಲವು ಔಷಧಿಗಳ ಅಡ್ಡ ಪರಿಣಾಮ ದಿಂದ . ಇನ್ನು ಹಲವು ವೈರಲ್ ಜ್ವರಗಳಲ್ಲಿ  ಮತ್ತು 


ಸ್ವಯಂ ವಿರೋಧಿ (ಅಟೋ ಇಮ್ಯೂನ್) ಕಾರಣ ಗಳಿಂದ  ಈ ಕಣಗಳ ಕೊರತೆ ಕಾಣಿಸ ಬಹುದು.



ಇಸ್ಟೆಲ್ಲಾ  ಪ್ಲಾಟಿ ಲೆಟ್ ಗಳ ಗುಣ ಗಾನ ದ ನಂತರ ಅವುಗಳ  ನ್ಯೂನತೆಗಳನ್ನೂ ಹೇಳದಿದ್ದರೆ ನನ್ನನ್ನು  ಪಕ್ಷಪಾತಿ ಎಂದು 


ಹಳಿದೀರಿ . ಈ ಕಣಗಳ ಅಧಿಕ ಪ್ರಸಂಗ ತನ ದಿಂದ  ಹೃದಯ ದ  ರಕ್ತ ನಾಳ ಗಳಲ್ಲಿ  ಅನಾವಶ್ಯಕ  ರಕ್ತ  ಹೆಪ್ಪು ಗಟ್ಟಿ 



ಹೃದಯಾಘಾತ ಉಂಟಾಗ ಬಹುದು .ಅದಕ್ಕೆಂದೇ ಹೃದಯ ಕಾಯಿಲೆ ಇರುವವರಿಗೆ  ಪ್ಲಾಟಿ ಲೆಟ್  ವಿರೋಧಿ  ಔಷಧಿಗಳಾದ


ಆಸ್ಪಿರಿನ್  ,ಕ್ಲೋಪಿಡೋಗ್ರೆಲ್ ಗಳನ್ನು ಕೊಡುವರು .ಯಾವುದೂ ಅತಿಯಾದರೆ ರೋಗವಲ್ಲವೇ?