ಬೆಂಬಲಿಗರು

ಮಂಗಳವಾರ, ನವೆಂಬರ್ 26, 2019

ಗಟ್ಟಿ ಸಾಹಿತ್ಯದ ಕೆ ಟಿ ಗಟ್ಟಿ ಭೇಟಿ

ನಮ್ಮ ದೇಶದಿಂದ ಸಾವಿರಾರು ಮಂದಿ ಉದ್ಯೋಗಾರ್ಥಿ ಗಳಾಗಿ ವಿದೇಶಗಳಿಗೆ 

ತೆರಳುತ್ತಾರೆ .ಅದರಲ್ಲೂ ಮಧ್ಯ ಪ್ರಾಚ್ಯ ಮತ್ತು ಆಫ್ರಿಕಾ ಖಂಡದ ದೇಶಗಳಿಗೆ 

ತಜ್ನರು ಕುಶಲ ಕರ್ಮಿಗಳು ಮತ್ತು ಸಾಮಾನ್ಯ ಕೆಲಸ ಗಾರರು ಹೋಗುವುದು ಹೆಚ್ಚು .
ಮೊದಲು ಹೋಗುವಾಗ  ಒಂದಿಷ್ಟು ಹಣ ಮಾಡಿ ಹಿಂತಿರುಗುವ  ಗುರಿ ಇರುತ್ತದೆ .

ದಿನ ಕಳೆದಂತೆ  ಬೇಕುಗಳು ಮತ್ತು ಗುರಿಗಳ ಮಟ್ಟ ಏರುತ್ತದೆ .ಊರಿಗೆ ರಜೆಯಲ್ಲಿ 

ತೆರಳುವಾಗ ಅಲ್ಲಿಯ  ತಮ್ಮ ಕಲಿಕೆಗೆ ಅನುಗುಣವಾದ ಕೆಲಸ ,ಗೌರವ ಯುತ 

ವಾದ ಸಂಬಳ  ಮರೀಚಿಕೆ ಎನಿಸುತ್ತದೆ .ಕುಟುಂಬದವರೂ  ವಿದೇಶದ ಸಂಪಾದನೆ 

ಯ ಮಟ್ಟಕ್ಕೆ ತಮ್ಮ ಜೀವನ ಶೈಲಿ ಏರಿಸಿರುತ್ತಾರೆ .ಇದರಿಂದ ಮರಳಿ ನಾಡಿಗೆ  

ಬರುವ ಗಡುವು ಮುಂದಕ್ಕೆ ಹೋಗುತ್ತದೆ.

ವಿದೇಶದಲ್ಲಿ  ನಮ್ಮ ನಾಡಿಗೆ ಹೋಲಿಸಿದರೆ ಅಧಿಕ ಸಂಬಳ ಬರುವುದು .ಕೆಲವು 

ಕಡೆ  ಕೆಲಸದ ವಾತಾವರಣ ಹಿತವಾಗಿರುವುದು .ಆದರೆ  ಆ ನಾಡಿನವರಿಗೆ ವಲಸೆ 

ಉದ್ಯೋಗಿಗಳ  ಬಗ್ಗೆ   ಪ್ರೀತಿ ,ಅಸೂಯೆ  ಮತ್ತು ದ್ವೇಷ  ಏಕ ಕಾಲಕ್ಕೆ ಬೇರೆ ಬೇರೆ 

ಪ್ರಮಾಣಗಳಲ್ಲಿ ಇರುವುದು .ಅದಕ್ಕೆ  ಆನುಗುಣವಾಗಿ ಆಗಾಗ್ಗೆ  ಊರಿಗೆ ಮರಳುವ 

ಆಲೋಚನೆ ಬರುವುದು .

ಇದು ಒಂದು ಸಂಕೀರ್ಣ ವಿಚಾರ .ಇದನ್ನು ಆದರಿಸಿ  ಕನ್ನಡದಲ್ಲಿ ಬಹಳ  ಕೃತಿಗಳು 

ಬಂದಿಲ್ಲ .ನನ್ನ ಮೇಲೆ ಪ್ರಭಾವ ಬೀರಿದ ಎರಡು ಕಾದಂಬರಿಗಳು , ಒಂದು 

ಕೆ ಟಿ ಗಟ್ಟಿ ಯವರ  ಅರಗಿನ ಮನೆ , ಎರಡು  ಮಲಯಾಳಿ ಲೇಖಕ  ಬೆನ್ಯಾಮೀನ್ 

ಅವರ  ಆಡು ಜೀವಿತಮ್ ಇದರ ಕನ್ನಡ ಅನುವಾದ ಡಾ ಅಶೋಕ್ ಕುಮಾರ್ 

.ಇದರಲ್ಲಿ  ಎರಡನೆಯದು ಗಲ್ಫ್  ರಾಷ್ಟ್ರದಲ್ಲಿ ನಡೆದ ಕತೆಯಾದರೆ ,ಕೆ ಟಿ 

ಗಟ್ಟಿಯವರ ಕಾದಂಬರಿ ಯ  ಆಫ್ರಿಕಾ ಖಂಡದ ಇತಿಯೋಪಿಯ ದೇಶಕ್ಕೆ ಶಿಕ್ಷಕ 

ನಾಗಿ ತೆರಳಿದ  ಕನ್ನಡಿಗನ ಕಥೆ .ಸ್ವತಃ  ಗಟ್ಟಿಯವರೇ  ಅಲ್ಲಿ ಅಧ್ಯಾಪಕನಾಗಿ 

ಇದ್ದ ಕಾರಣ ಇದರಲ್ಲಿ  ಭಾಗಶಃ ಆತ್ಮ ಚರಿತ್ರೆಯ ಛಾಯೆ ಇದೆ.

         ಬಹು ಮುಖ ಸಂಸ್ಕೃತಿ ಮತ್ತು ಬಹು ಭಾಷೆಗಳ  ಇತಿಯೋಪಿಯ  ಇತಿಹಾಸ 

ಇರುವ  ದೇಶ .ವರ್ಣ ರಂಜಿತ  ಚಕ್ರವರ್ತಿ ಹ್ಯಾಲಿ ಸಲಾಸೆ ಪದಚ್ಯುತಿ ಗೊಂಡು

ಕಮ್ಯೂನಿಸ್ಟ್ ಆಢಳಿತ ಇದ್ದ ಕಾಲದ ಚಿತ್ರಣ ಅರಗಿನ ಮನೆಯಲ್ಲಿ ಇದೆ.ಈ ಪುಸ್ತಕ 

ನನ್ನಲ್ಲಿ ಆಫ್ರಿಕಾ ದ ಮೇಲಿನ  ಕುತೂಹಲ ಬೆಳೆಸಿತು .ಉಗಾಂಡ ,ಕೀನ್ಯ ,ದಕ್ಷಿಣ 

ಆಫ್ರಿಕಾ  ,ಜಿಂಬಾಬ್ವೆ ಗಳ  ಸಂಸ್ಕೃತಿ  ಜೀವನ ಮತ್ತು ಸಾಹಿತ್ಯ  ಓದುವ ಪ್ರೇರಕ 

ಆಯಿತು .ಅದರಲ್ಲೂ ಭಾರತ ಮೂಲದ   ಎಂ ಜಿ ವಾಸಂಜಿ,ಅಹ್ಮದ್ ಕತ್ರಡ ಮತ್ತು 

ಮಯೂರ್ ಮಧ್ವಾನಿ ಅವರ  ಕೃತಿಗಳು  ತಮ್ಮ ತಮ್ಮ ನಾಡಿನ ಬದುಕು ಮತ್ತು 

ಇತಿಹಾಸದ  ಮೇಲೆ ಒಳನೋಟ  ಒದಗಿಸಿದವು .

             ಕೆ ಟಿ ಗಟ್ಟಿ ಯವರು  ಹಲವು ಒಳ್ಳೆಯ ಕಾದಂಬರಿಗಳ ಜತೆಗೆ  ಶಿಕ್ಷಣಕ್ಕೆ 

ಸಂಬಂದಿಸಿದ ಮೌಲಿಕ ಕೃತಿಗಳನ್ನೂ ಕೊಟ್ಟಿರುವರು .ಈ ಹಿರಿಯರು ದಕ್ಷಿಣ 

ಕನ್ನಡ ಜಿಲ್ಲೆಯ ಉಜಿರೆಯಲ್ಲಿ  ಎಲ್ಲಾ ಗೌಜಿ ಗೊಂದಲ ಪ್ರಚಾರ ಗಳಿಂದ  ದೂರ 

ಇದ್ದು   ಸಾಹಿತ್ಯ ಶಿಕ್ಷಣ ಸೇವೆ ಮಾಡುತ್ತ  ಬಂದಿದ್ದಾರೆ .ಕಾರಂತರು  ಪುತ್ತೂರು 

ಮತ್ತು ತೇಜ್ಜಸ್ವಿ  ಮೂಡಿಗೆರೆ ಯ  ಮೂಲೆಯಲ್ಲಿ ನೆಲಸಿ ಮೌಲಿಕ  ಕೃತಿಗಳನ್ನು

 ನೀಡಿದಂತೆ .

  ಕೆ ಟಿ ಗಟ್ಟಿ ಯವರನ್ನು ಕಂಡು ಮಾತನಾಡಿಸಲು  ಹೋದ ವಾರ ಅವರ 

ಮಂಗಳೂರು ನಿವಾಸಕ್ಕೆ ಮಿತ್ರ ವರದರಾಜ ಚಂದ್ರಗಿರಿ ಜತೆ ಹೋದಾಗ ,

ಬರಹ ಗಾರನನ್ನು  ಅವನ ಬರವಣಿಗೆಯ  ಏರು ಕಾಲದಲ್ಲಿ ,ಚಿತ್ರ ನಟಿ ಯನ್ನು 

ಅವಳ ಯೌವನ ಕಾಲದಲ್ಲಿ ನೋಡ ಬೇಕು .ಎಲ್ಲಾ ಬಿಟ್ಟು  ನನ್ನನ್ನು ನೋಡಲು 

ಬಂದಿದ್ದೀರಲ್ಲ ಎಂದು ನಗೆಯಾಡಿದರು .



              










                  


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ