ಬೆಂಬಲಿಗರು

ಸೋಮವಾರ, ನವೆಂಬರ್ 18, 2019

ಎಕ್ಸ್ಛೇಂಜ್ ರೇಟ್ ಮನೋಭಾವ

ನಮ್ಮ ದೇಶದಲ್ಲಿ ಎಷ್ಟು ದುಡಿದರೂ ಸಾಲದು , ಇನ್ಕಮ್ ಟಾಕ್ಸ್ ಬೇರೆ ಕಟ್ಟಬೇಕು 

ಎಂದು ಲಕ್ಷಾಂತರ ಮಂದಿ  ಉದ್ಯೋಗ ಅರಸಿ  ಮಧ್ಯ ಪ್ರಾಚ್ಯದ ದೇಶಗಳಿಗೆ  

ಕನಸುಗಳನ್ನು ಹೊತ್ತು ಹೋಗುವರು .ಅಲ್ಲಿಯ ಕೆಲಸದ ವೀಸಾ ಕ್ಕಾಗಿ  ಸಾಲ 

ಸೋಲ ಮಾಡುವವರು ಹಲವರು. ಸಾವಿರ ದಿರ್ಹಮ್ ಸಂಬಳ ಎಂದರೆ  ಅಬ್ಬಬ್ಬಾ 

ನಮ್ಮ ಇಪ್ಪತ್ತು ಸಾವಿರ ರೂಪಾಯಿ .ಟಾಕ್ಸ್ ಏನೂ ಇಲ್ಲ .ಐನೂರು ಸಾವಿರ 

ರೂಪಾಯಿ ಯಲ್ಲಿ  ಊಟ ಉಪಚಾರ ಕಳೆದರೆ ಉಳಿದ ಹಣ ಮನೆಗೆ ಕಳುಹಿಸ 

ಬಹುದು ಎಂದೆಲ್ಲಾ ಆಲೋಚನೆ .

                  ಹೊಟೇಲ್ ನಲ್ಲಿ  ಚಹಾ ಸೇವಿಸುವಾ ಎಂದು ಹೋದರೆ  ಅದಕ್ಕೆ 

ಎರಡು ದಿರ್ಹಮ್ .ಕೂಡಲೇ ಲೆಕ್ಕ ಮಾಡುವೆವು ,ಅಂದರೆ  ಇಂಡಿಯಾದ  

ನಲುವತ್ತು ರೂಪಾಯಿ ,ಮನಸ್ಸು ಅಳುವುದು .ಚಹದ ರುಚಿ ಕೆಡುವುದು .

ತಿಂಗಳು ತಿಂಗಳು ಹೇರ್ ಕಟ್ ಗೆ ಹೋದರೆ ನಾಪಿತ  ಹದಿನೈದು ದಿರ್ಹಮ್ 

ಎಂದು ಬರೆದಿರುವನು .ಅಬ್ಬಬ್ಬಾ  ಮುನ್ನೂರು ರೂಪಾಯಿ , ಕೂದಲೇ ಕಿತ್ತು 

ಬರುವುದು .ತಿಂಗಳ ಕೊನೆಗೆ ನಮ್ಮ ಲೆಕ್ಕಾಚಾರ ತಪ್ಪುವುದು.

           ಕೆಲ ವರ್ಷಗಳ ಹಿಂದೆ ಊರಿಗೆ ಪತ್ರವನ್ನು  ಸ್ಟಾಂಪ್ ವೆಚ್ಚ ಉಳಿಸಲೆಂದು 

ರಜೆಯಲ್ಲಿ ಊರಿಗೆ ತೆರಳುವ ಮಿತ್ರರಲ್ಲಿ ಇಂಡಿಯಾದಿಂದ ಬರುವಾಗ ತಂದ 

ಸ್ಟಾಂಪ್ ಹಚ್ಚಿ  ಕೊಡುವುದು .ಅವರು ಊರಿಗೆ ತಲುಪಿದೊಡನೆ ಅದನ್ನು ಪೋಸ್ಟ್

 ಮಾಡುವ ಪದ್ದತಿ ಇತ್ತು .ಒಬ್ಬೊಬ್ಬ  ದೇಶಾಗಾಮನಿ ಯೂ ಒಬ್ಬ ಮಿನಿ ಪೋಸ್ಟ್ 

ಮ್ಯಾನ್.ಈಗ ಮೊಬೈಲ್ ವ್ಹಾಟ್ಟ್ಶಪ್ಪ್ ಬಂದ ಮೇಲೆ ಅದು ಕಡಿಮೆ ಆಗಿದೆ .

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ