ಬೆಂಬಲಿಗರು

ಬುಧವಾರ, ನವೆಂಬರ್ 6, 2019

ಒಳಗೊಂದು ಹೊರಗೊಂದು

ರೋಗಿ ಪತ್ನಿ ಸಮೇತ ಬರುತ್ತಾನೆ .ಕಾಯಿಲೆಯ ಮಾಹಿತಿ ಕೇಳುತ್ತೀರಿ .ಮದ್ಯಪಾನ 

ದಿಂದ ಉಂಟಾದ ಕಾಯಿಲೆ ಹಾಗೆ ಕಾಣಿಸುತ್ತದೆ .ರೋಗಿಯ ಬಳಿ ಕೇಳಿದರೆ 

 ಇಲ್ಲಾ ಎನ್ನುವನು .ಪತ್ನಿಯೂ ಗೋಣು ಆಡಿಸುವಳು .ಮತ್ತೆ ಗಂಡ ನ ಕಣ್ಣು ತಪ್ಪಿಸಿ 

ಬಂದು ಇಲ್ಲಾ ಡಾಕ್ತ್ರೆ ಅವ್ರು ಸಿಕ್ಕಾ ಬಟ್ಟೆ ಕುಡಿಯುತ್ತಾರೆ ,ಅವರ ಎದುರು ಹೇಳಿದರೆ 

ಬೈಯ್ಯುತ್ತಾರೆ ಎನ್ನುವರು .

                ಇನ್ನು ಕೆಲವರು ತಮ್ಮ ಹಿರಿಯರನ್ನು ಕರೆ ತರುವ ಮೊದಲೇ 

ಒಂಟಿಯಾಗಿ ಬಂದು "ನೋಡಿ ಡಾಕ್ತ್ರೆ ನಮ್ಮ ತಂದೆಯನ್ನು ಮತ್ತೆ ಕರೆ ತರುತ್ತೇನೆ 

ಅವರಿಗೆ ಏನೂ ಕಾಯಿಲೆ ಇಲ್ಲ ,ಆದರೆ ಇಲ್ಲಿ ನೋವು ಅಲ್ಲಿ ನೋವು ,ನಿದ್ದೆ ಇಲ್ಲಾ 

ಎಂದು ಗೊಣಗುವರು .ನೀವು ಸುಮ್ಮನೆ ನೋಡಿದ ಹಾಗೆ ಮಾಡಿ ಒಂದು ಟಾನಿಕ್ 

ಬರೆದು ನಿಮಗೆ ಏನೂ ಇಲ್ಲ ಎಂದು ಹೇಳಿ ,ಜಾಸ್ತಿ ಟೆಸ್ಟ್ ಎಲ್ಲ ಮಾಡಿಸುವುದು 

ಬೇಡ ಎಂದು ಪೂರ್ವ ಸೂಚನೆ ಕೊಟ್ಟು ನಾವು ರೋಗಿಯ ಬಗ್ಗೆ ಪೂರ್ವಾಗ್ರಹ

ಪೀಡಿತರಾಗುವಂತೆ ಮಾಡುವರು .ತೋರಿಸಿದ ಹಾಗೆ ಮಾಡ ಬೇಕು ,ಸರಿಯಾಗಿ 

ತೋರಿಸಲೂ ಮನಸ್ಸಿಲ್ಲ .

         ಇನ್ನು ಕೆಲವರು ಹಿರಿಯರು ಜಾಸ್ತಿ ಮಾತನಾಡುವರು .ಯಾವಾಗಲೂ 

ಕಿರಿ ಕಿರಿ ಎಂದು ಹೇಳುವರು .ಇದು ಸಾಪೇಕ್ಷ ಅಥವಾ relative . ಹಿರಿಯರ ಸಹಜ 

ಮಾತು ಅಥವಾ ಬೇಡಿಕೆ ಈಗ ಕಿರಿಯರಿಗೆ ಹೆಚ್ಚ್ಕು ಎನಿಸುವುದು .ನಾವು 

ವೈದ್ಯರು ಇದನ್ನು ಅಳೆದು ತೂಗಿ ನೋಡ ಬೇಕಾಗುವುದು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ