ಬೆಂಬಲಿಗರು

ಬುಧವಾರ, ನವೆಂಬರ್ 6, 2019

ಅನೈಚ್ಛಿಕ ನಿಯಂತ್ರಿತ ಕ್ರಿಯೆ

ಕಾರ್ಕಳದಲ್ಲಿ ಎಂ ರಾಮಚಂದ್ರ ಎಂಬ ನಿವೃತ್ತ ಪ್ರಾಧ್ಯಾಪಕ ಲೇಖಕ ಮತ್ತು ಕನ್ನಡ 

ಪರಿಚಾರಕಾರಿದ್ದಾರೆ .ಮೂರು ಉಪಾಧಿಗಳಲಲ್ಲಿ ಕೊನೆಯದು ಅವರಿಗೆ ಹೆಚ್ಚು 

ಸಲ್ಲುತ್ತದೆ. ಸಾಹಿತಿಗಳ ವ್ಯಕ್ತಿ ಚಿತ್ರಗಳ ಪುಸ್ತಕ  ಚಿತ್ರ ಚರಿತ್ರ ಅವರ ಒಂದು  

ಉತ್ತಮ ಕೃತಿ.ಅದರಲ್ಲಿ  ಕನ್ನಡದ ದಂತ ಕತೆ ಕೋಟ ಶಿವರಾಮ ಕಾರಂತರ  ಬಗ್ಗೆ 

ಒಂದು ಲೇಖನ ಇದೆ .ಅದರಲ್ಲಿ ಒಂದು ಘಟನೆ ಇದೆ.

     "ಒಮ್ಮೆ ಮಧ್ಯಾಹ್ನದ ಹೊತ್ತಿಗೆ  ಪುತ್ತೂರಿಗೆ ಬರುವುದಾಗಿ ತಿಳಿಸಿದ್ದೆ .ಮಧ್ಯಾಹ್ನದ 

ಹೊತ್ತಿಗೆ ಹೋದರೆ ಊಟ ಮಾಡಿಯೇ ಹಿಂದಿರುಗುವುದು ಕ್ರಮ .ಹಾಗೆ ನಾನು ಆ 

ಸಲ ಹೋದಾಗ ಸ್ವಲ್ಪ ತಡವಾಯಿತು .ಬಾಲವನದಲ್ಲಿ ,ಅವರ ಮನೆಯ ಸುತ್ತ 

ಕಾಗೆಗಳ ಗದ್ದಲವೇ ಗದ್ದಲ .'ಇದೇಕೆ ಹೀಗೆ 'ಎಂದು ಕೇಳಿದೆ;ಅದಕ್ಕೆ ಕಾರಂತರ 

ಉತ್ತರ ಕೇಳಿ ನಾನು ಒಂದು ಕ್ಷಣ ಮೂಕನಾದೆ; "ನೀವು ಮಧ್ಯಾಹ್ನದ ಹೊತ್ತಿಗೆ 

ಬರುವುದಾಗಿ ತಿಳಿಸಿದ್ದಿರಿ.ಒಟ್ಟಿಗೆ ಊಟ ಮಾಡೋಣ ಎಂದು ಕಾದೆ.ನಾನು 

ಸಾಮಾನ್ಯವಾಗಿ ಮಧ್ಯಾಹ್ನ ಹನ್ನೊಂದು ಮುಕ್ಕಾಲರ ಹೊತ್ತಿಗೆ ಊಟ ಮಾಡಿ ,

ಒಂದು ಹಿಡಿ ಅನ್ನ ಕಾಗೆಗಳಿಗೆ ಹಾಕುತ್ತೇನೆ ಇಂದು  ತಡವಾಯಿತು .ಅವುಗಳು 

ಹೊತ್ತಿಗೆ ಸರಿಯಾಗಿ ಬಂದಿವೆ .ತಡವಾದ್ದಕ್ಕೆ ಗದ್ದಲ."ಎಂದರು .ಇದು ಖಾರ ಎನ್ನಿಸಿ 

ಕೊಂಡಿರುವ ಕಾರಂತರ ಹೃದಯವಂತಿಗೆಗೆ ,ಪ್ರಾಣಿ ಪಕ್ಷಿಗಳ ಮೇಲಿನ ಪ್ರೀತಿಗೆ 

ಒಂದು ಮಾರ್ಮಿಕ ನಿದರ್ಶನ.
                    
                         ಮೊನ್ನೆ  ಹೆಗ್ಗೊಡು ಸಂಸ್ಕೃತಿ ಶಿಬಿರಕ್ಕೆ ಹೋದವನು  ಸಾಗರ 

ದಲ್ಲಿ ಮುಂಜಾನೆ ಚಹಾ ಸೇವನೆಗೆ ಹೋಟೆಲ್ಲಿಗೆ ಹೋಗಿದ್ದೆ .ಹೊಟೇಲ್ ಮಾಣಿ 

ಹಿಂದಿನ ದಿನದ ಉಳಿಕೆಯದ  ವಡೆ ಬನ್ಸ್ ಇತ್ಯಾದಿಗಳನ್ನು ಪುಡಿ ಮಾಡುತ್ತಿದ್ದ 

.ಅದನ್ನೇ ರೀಸೈಕಲ್ ಮಾಡಿ ಇಂದಿನ ತಿಂಡಿಗೆ ಸೇರಿಸುವರೋ ಎಂದು ಕೊಂಡೆ .

ಆದರೆ ಹಾಗೆ ಆಗಲಿಲ್ಲ .ಆತ ಪುಡಿ ಮಾಡಿದ ತಿಂಡಿಯನ್ನು ರಸ್ತೆಯಾಚೆ ಉದ್ಯಾನದ 

ಬಳಿ ಕಲರವ ಮಾಡುತ್ತಿದ್ದ ಹಕ್ಕಿಗಳಿಗೆ  ಹಂಚಿ ಸ್ವಲ್ಪ ಹೊತ್ತು ನಾಯಿ ಬಾರದಂತೆ 

ಅಲ್ಲೇ ಕಾವಲು ಮಾಡಿದ.ಹಕ್ಕಿಗಳ ಮತ್ತು ಹೊಟೇಲ್ ಮಾಣಿಯ ನಿತ್ಯ ಕಜ್ಜ .

                                  ಪ್ರಾಣಿ ಪಕ್ಷಿಗಳ ಶರೀರದಲ್ಲಿ ಒಂದು ಜೈವಿಕ ಗಡಿಯಾರ 

ಇದೆ. ಜೀವ ಶಾಸ್ತ್ರ ದಲ್ಲಿ  ಪೌಲೋವನ ನಾಯಿ ಪ್ರಯೋಗ ಎಂದು ಇದೆ .ದಿನಾಲೂ 

 ಒಂದೇ ಹೊತ್ತಿಗೆ  ಆತ ಒಂದು ಗಂಟೆ ಬಾರಿಸಿ ನಾಯಿಗೆ ಆಹಾರ ಹಾಕುವನು .

ಒಂದು ದಿನ  ಗಂಟೆ ಬಾರಿದರೂ ಆಹಾರ ಹಾಕಲಿಲ್ಲ .ಆದರೂ ನಾಯಿಯ 

ಬಾಯಿಯಿಂದ ಜೊಲ್ಲು ಯೆಥೇಚ್ಚ ಸುರಿಯಿತು .ಇದನ್ನೇ ಅನ್ನೈಚ್ಛಿಕ  ನಿಯಂತ್ರಿತ 

ಕ್ರಿಯೆ ಎನ್ನುವರು .(Conditioned Reflex).

      ನಿಮ್ಮ ಶರೀರದಲ್ಲಿ ಕೆಲವು ಜೈವಿಕ ಕ್ರಿಯೆಗಳು ಇದೇ ತರಹ ಇವೆಯೇ?



 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ