ಬೆಂಬಲಿಗರು

ಶನಿವಾರ, ಅಕ್ಟೋಬರ್ 19, 2019

ಅಧುನಿಕ ಮುದ್ದಣನ ವ್ಯಥೆ

 
 
ಮುದ್ದಣ  ಮನೋರಮೆಯರ ಕತೆ ನೀವೆಲ್ಲಾ ಕೇಳಿರುವಿರಿ .ದಿನವಿಡೀ ಜಿಟಿಗುಟ್ಟುವ ಮಳೆ ಮನೆಯಲಿ ಏಕಾಂತ ಬಚ್ಚಲಿನ ಹೊಗೆ ಯಲ್ಲಿ ಒಣಗಿ ಅದರ ಕಂಪು ಸೋಸುವ ಸೀರೆ ಉಟ್ಟು ಇದ್ದ ಸಾಂತಣಿ ಪುಳಿಂಕೊಟ್ಟೆ ತಿಂದು ಮುಗಿಸಿ ಸಮಯ ಕೊಳ್ಳುವುದು ಹೇಗೆ ಎಂದು ಗಂಡ ಬರುವಿಕೆಯನ್ನೆ ಕಾಡು ಕುಳಿತ ಮನೋರಮೆ ಮುದ್ದಣ ಆಗಮನವಾದಂತೆ ಚಿಗರೆಯಂತೆ ಓಡಿ ಅವನನ್ನು ಉಪಚರಿಸಿ ಸಮಯ ಕಳೆಯಲು ಒಂದು ಕತೆ ಹೆಳೆಂದು ಪೀಡಿಸುವಳು .ಮೀಡಿಯಂ ಸಂಸ್ಕೃತವೊ ಕನ್ನಡವೋ ಎಂಬುದಕ್ಕೆ ನೀರು (ಕನ್ನಡ ) ಇಳಿಯದ ಗಂಟಲೋಲ್ ಕಡುಬು (ಸಂಸ್ಕೃತ )ತುರುಕಿದಂತೆ ಆಯ್ತು ಎಂದು ನಮ್ಮ ನಿಮ್ಮಂತೆ ಕನ್ನಡ ವನ್ನೇ ಆಯ್ಕೆ ಮಾಡುತ್ತಾಳೆ .ಪದ್ಯವೋ ಗದ್ಯವೋ ಎಂಬ ಮಲ್ಟಿಪಲ ಚಾಯಿಸ್ ಗೆ ಪದ್ಯಮ್ ವದ್ಯಮ್ ಗದ್ಯಮ್ ಹೃದ್ಯಮ್ ಎಂದು ಎರಡನೆಯದನ್ನು ಆಯ್ಕೆ ಮಾಡುವಳು .ಹಾಗೆ ಹುಟ್ಟಿತು ಮುದ್ದಣನ ರಾಮಾಶ್ವ ಮೇಧ ಕತೆ .ಮನೋರೋರಮೆಯಲ್ಲಿ ಸದಭಿರುಚಿ ಮನೋ ವ್ಯಾಪಾರದ ನಿರ್ವಾತ  ಮುದ್ದಣನ ಕಲ್ಪನಾ ಒತ್ತಡ ಕೃತಿ ರೂಪದಲ್ಲಿ ಹೀರಿಕೊಳ್ಳುತ್ತದೆ     
                          ಅದುನಿಕ ಮುದ್ದಣನ ವ್ಯಥೆ .
                                               ವರ್ಷಾಕಾಲದೊಲ್  ಒರು ದಿವಸಂ ಬೈಗುಂ  ಬೋಲ್ಥಿನೋಲ್  ಎಂದಿನಂತೆ  ಬಸವಳಿದು
ಮನೆಗೆ  ಬರೆ  ಬಾಗಿಲು ಮುಚ್ಚಿತ್ತು .ಹಿಂದಿನಂತೆ ನಗುಮೊಗದ ಮನದನ್ನೆಯ ಸ್ವಾಗತ ಬಾಗಿಲಲ್ಲಿ
ಕಾಣದು .ತಾನೇ  ಮನೆಯ ಮಾಡಿನ ಸೋನೆಯ ನೀರಲ್ಲಿ ಕಾಲು ಮೊಗ ತೊಳೆದು " ಮನೋರಮೆ
ಮನೋರಮೇ "ಎಂದು ಯಕ್ಷಗಾನದ  ರಕ್ಕಸ ದನಿಯಲ್ಲಿ  ಕೂಗೆ  ಒಳಗಿಂದಲೇ  " ಬಾಗಿಲು ತೆರೆದಿದೆ
ದೂಡಿ ಬನ್ನಿರಿ " ಎಂಬ ಉತ್ತರ ಬಂದಿತು .ತಾನೇ ಬಾಗಿಲು ತೆರದು  ಒಳ ಪೊಗಲು  ಮಡದಿ
ಶು!  ಸ್ವಲ್ಪ ಮೌನವಾಗಿರಿ  ಆಮ್  ಟಿ ವಿ ಯಲ್ಲಿ"  ಸೊಸೆ ತಾಟಕಿ" ಧಾರವಾಹಿ  ರೋಚಕ ಘಟ್ಟ
ನೋಡುತ್ತಿರ್ಪೆ .ಒಲೆಯ  ಮೇಲೆ ಪಾಲ್ ಇರ್ಪುದು  ಬೇಕಾದಂತೆ  ಚಹವೋ ಕಾಫಿಯೋ  ಮಾಡಿ
ಕುಡಿಯುವುದು ."


      ರಸಿಕ ಕವಿ ಮುದ್ದಣ  ತಾನು  ಪತ್ನಿಯ  ಏಕತಾನತೆ  ದೂರ ಮಾಡಲು ರಾಮಾಶ್ವಮೇಧ
ವಿಕ್ರಮಾದಿತ್ಯ ವಿಜಯ  ,ಕೃಷ್ನಾರ್ಜುನಕಾಳಗ  ಯಾವುದಂ  ಪೇಳಲಿ  ಎಂದು ಹಿಂದಿನಂತೆ
ಯೋಚನನಾಕ್ರಾಂತನಾಗಿರ್ಪನ್ .ಧಾರವಾಹಿ  ಬೇಗ  ಮುಗಿವದೇ?ಜಾಹಿರಾತಿನೋಲ್ 
ಧಾರವಾಹಿಯೋ  ಧಾರವಾಹಿಯೋಲ್  ಜಾಹಿರಾತೋ  ಎಂಬಂತೆ  ಘಳಿಗೆ ಘಳಿಗೆಗಲ್  ಜಾರಿ
ಕೊನೆಗೊಮ್ಮೆ  ಮುಗಿಯೆ  ನಿಸುಡೊಯ್ದು ಮನೋರಮೆ  ಎಂತಹ  ಮಳೆ ಎಂದಳು .


     ಒಡನೆ  ಮುದ್ದಣ ನು ಯಾವುದಾದರೂ ಕತೆಯಂ  ಪೇಳಲೇ ಎಂದು  ತನ್ನ  ಮನದಲ್ಲಿ
ಇರುವ   ಕತೆಗಳ  ಪಟ್ಟಿ ಒಪ್ಪಿಸೆ   ಆಕೆ  " ಇಸ್ಸಿ  ಇದೆಂತ  ಪಳೆಯ  ಕತೆ  ನಿಮಗೆ  ವರ್ತಮಾನ  ಕಾಲದ
ನಟ ನಟಿಯರ  ಪ್ರೇಮ ಕತೆಯೋ  ,ಇಂದಿನ sಶಾಲಾ ಮಕ್ಕಳ  ಸಾಹಸ  ಕತೆಯೋ ನಿಮಗೆ   ಅರಿಯದು
ನೀವು ಸುಮ್ಮನಿರಿ   ಅಂ   ಟಿ ವಿ ಯೋಲ್  ಚಲಚಿತ್ರ ವೇನಾದರೂ ಇರ್ಪುದೋ  ನೋಲ್ಪೆ "


ಎಂದು   ಚಾನೆಲ್ ಚರ್ವಣ  ಕಾರ್ಯದಲ್ಲ್ಲಿ  ಪ್ರವೃತ್ತ ಳಾದಳ್.",ನಿನಗೆ ಬೇಕಾದರೆ ಸರಳ ಗದ್ಯದಲ್ ಪೇಳುವೆನು ಎಂದು ಮುದ್ದಣನು ಮರು ಪೇಳಲು ಪದ್ಯಮ್ ಗದ್ಯಮ್ ದೃಶ್ಯಮ್ ನೃತ್ಯಮ್ ಇಲ್ಲಾ ಟಿ ವಿ ಮೊಬೈಲ್ ನಲ್ಲಿ ಇರ್ಕೆ ,ನೀವು ಸುಮ್ಮನಿರಿ ಸದ್ಯಮ್ . ಮುದ್ದಣನು ಇಂಗು ತಿಂದ ಮಂಗನಂತೆ (ನಿಜವಾಗಿಯೂ ಇಂಗು ತಿಂದ ಮಂಗನನ್ನು ಯಾರಾದರೂ ನೋಡಿರುವರೇ ಅಲ್ಲ ಪ್ರಾಸಕ್ಕೆ ಬೇಕಾಗಿ ಆದ ಸೃಷ್ಟಿಯೋ) ಪೆಂಗನಾಗಿ ಕುಳಿತನು .( ಈ ಪೆಂಗ ,ಪಿರ್ಕಿ ,ಎರೆಪ್ಪು ಎಂಬ ಸುಂದರ ಬೈಗಳು ಶಬ್ದಗಳು ನಮ್ಮ ವ್ಯಾವಹಾರಿಕ ನಿಘಂಟುವಿನಿಂದ ಮಾಯವಾಗುತ್ತಿರುದನ್ನು ಭಾಷಾ ಕೋವಿದರು ಗಮನಿಸ ಬೇಕು ).ಅವನ ರಾಮಾಶ್ವ ಮೇಧ ಕುದುರೆ ಏರಲೆ ಇಲ್ಲ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ