ಬೆಂಬಲಿಗರು

ಶನಿವಾರ, ನವೆಂಬರ್ 16, 2019

ಅಮೆರಿಕ ದೇಶದ ಟ್ಯಾಕ್ಸಿ ಚಾಲಕರು

ಕೆಲವು ವರ್ಷಗಳ ಹಿಂದೆ ಅಮೆರಿಕ ಪ್ರವಾಸ ಮಾಡುತ್ತಿದ್ದ ಸಂದರ್ಭ ಅಲ್ಲಿಯ 

ನಿವಾಸಿಗಳು ಬಂದ ಪ್ರವಾಸಿ ಗಳೊಡನೆ  ಬೆರೆಯಲು ಮತ್ತು ಮಾತನಾಡಲು 

ನಿರಾಸಕ್ತಿ ಎದ್ದು ಕಂಡಿತು .ಅಕ್ಕ ಪಕ್ಕದ ಮನೆಯವರು ಪರಸ್ಪರ ಮಾತುಕತೆ ಕಡಿಮೆ .
ಆದರೆ  ನಾವು ಕಂಡ ಹೆಚ್ಚಿನ ಟ್ಯಾಕ್ಸಿ ಚಾಲಕರು ವಾಚಾಳಿಗಳು. ದೊಡ್ಡ ಹುದ್ದೆಗಳಲ್ಲಿ 

ಇದ್ದು ನಿವೃತ್ತ ರಾದವರೂ  ಈ ಉದ್ಯೋಗ ದಲ್ಲಿ ಇದ್ದಾರೆ .ಕಾಯಕದಲ್ಲಿ ಪ್ರತಿಸ್ಟ್ಟೆ 

ಯ ವಿಚಾರ ಇಲ್ಲ .ಮೆಕ್ಸಿಕೊ ,ಭಾರತ ,ಬಾಂಗ್ಲಾದೇಶ ,ಅಮೆರಿಕ ಮತ್ತು 

ಇತಿಯೋಪಿಯ ಮೂಲದ ಚಾಲಕರೊಡನೆ ಮಾತನಾಡುವ ಅವಕಾಶ ಸಿಕ್ಕಿತು .

                           ವಾಷಿಂಗ್ಟನ್  ನಗರದಲ್ಲಿ  ಓರ್ವ ಅಮೆರಿಕನ್ ಡ್ರೈವರ್ .ಆತನ 

ಟ್ಯಾಕ್ಸಿ  ಬೆಂಜ್ ಕಾರ್ .ಜಿ ಪಿ ಎಸ್ ಬಂದ ಮೇಲೆ ಹೋಗುವ ಜಾಗದ ಜಾಡು 

ಹಿಡಿಯುವುದು ಎಷ್ಟು ಸುಲಭ ಆಗಿದೆ ಎಂದು ವಿವರಿಸಿದ .ತಾನು ಭಾರತಕ್ಕೆ ಅದೂ 

ಮೈಸೂರಿಗೆ ಬಂದಿದ್ದೆ ಎಂದೂ ಮೈಸೂರು ಊಟಿ ರಸ್ತೆ ತುಂಬಾ ಹೊಂಡಗಳು 

ಇದ್ದು ಗುಡು ಗುಡು ಎಂದು ವಾಹನ ಅಲುಗಾಡುತ್ತಿತ್ತು ಎಂದು ನೆನಪಿಸಿದ .

                             ನ್ಯೂಯೋರ್ಕ್ ನಗರದಲ್ಲಿ  ಬಂಧುಗಳ ಮನೆಯಿಂದ 

ವಿಮಾನ ನಿಲ್ದಾಣಕ್ಕೆ ಬರುವಾಗ ಟಾಕ್ಸಿಯಲ್ಲಿ ಇತಿಯೋಪಿಯ ಮೂಲದ ಚಾಲಕ .

ತಮ್ಮ ದೇಶದಲ್ಲಿ ಕ್ರಾಂತಿ ಸಮಯ ಪಕ್ಕದ ಸುಡಾನ್ ದೇಶಕ್ಕೆ ಪರಾರಿಯಾಗಿ 

ಮುಂದೆ ಹೇಗೋ ರಾಜಕೀಯ ನಿರಾಶ್ರಿತ ಎಂದು ಅಮೆರಿಕಾ ದೇಶಕ್ಕೆ ಬಂದು ಸಣ್ಣ 

ಪುಟ್ಟ ಉದ್ಯೋಗ ಮಾಡಿ ಮುಂದೆ ವಿಶ್ವ ಸಂಸ್ಥೆ ಯಲ್ಲಿ ಉದ್ಯೋಗಿಯಾಗಿ ನಿವೃತ್ತ 

ನಾದ ಮೇಲೆ ಟ್ಯಾಕ್ಸಿ ಓಡಿಸುವ ಪ್ರವೃತ್ತಿ .ತನ್ನ ಮೂಲ ದೇಶದ ಬಗ್ಗೆ ಹೆಮ್ಮೆ .ತಮ್ಮ 

ದೇಶದಲ್ಲಿ ಭಾರತೀಯರು ಅಧ್ಯಾಪನ ಮತ್ತು ನರ್ಸಿಂಗ್ ವೃತ್ತಿಯಲ್ಲಿ ಗಣನೀಯ 

ಸೇವೆ ಸಲ್ಲಿಸಿದ್ದಾರೆ ಎಂದು ಕೃತಜ್ನತೆಯಿಂದ  ಹೇಳಿ ಕೊಂಡ.


 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ