ಬೆಂಬಲಿಗರು

ಬುಧವಾರ, ನವೆಂಬರ್ 20, 2019

ಕೆಮ್ಮು

ಕೆಮ್ಮು ಶರೀರದ ರಕ್ಷಣಾತ್ಮಕ ಸಂಕೀರ್ಣ ಕ್ರಿಯೆ .ಶ್ವಾಸ ವಾಯು ಸಾಗುವ 

ದಾರಿಯಲ್ಲಿ ಅನಾಪೇಕ್ಷಣೀಯ ವಸ್ತುಗಳನ್ನು (ರೋಗಾಣುಗಳನ್ನು ಸೇರಿ )ಹೊರ 

ಹಾಕುವುದೇ ಇದರ ಉದ್ದೇಶ .
                              Image result for respiratory system diagramಉದಾಹರಣೆಗೆ  ಬೇಡದ ವಸ್ತು ಗಂಟಲ ಒಳ ಚರ್ಮದ ಸಂಪರ್ಕಕ್ಕೆ  ಬಂದೊಡನೇ  ಅದರ ಮೈಯಲ್ಲಿ ಇರುವ ಸಿಲಿಯಾ ಎಂಬ ಪೊರಕೆ ಅದನ್ನು ಸಾರಿಸಿ ಹೊರ ಹಾಕಲು 

ಯತ್ನಿಸುವುದು .ಒಡನೆಯೇ  ಮೆದುಳಿಗೆ ಸಂದೇಶ ರವಾನೆ ಆಗುವುದು .

ಮೆದುಳಿನಿಂದ  ವಪೆ ಮತ್ತು  ಎದೆಯ  ನಿಶ್ವಾಸ  ಮಾಂಸಖಂಡ ಗಳು ಸಂಕುಚ 

ಗೊಳ್ಳುವಂತೆ  ಆದೇಶ ಬರುವುದು .ಇದರಿಂದ  ಶ್ವಾಸ ಕೋಶ ಗಳು ಹಿಗ್ಗಿ ಗಾಳಿ 

ಎಳೆದು ಕೊಳ್ಳುವವು .ತತ್ಸಮಯ  ಧ್ವನಿ ಪೆಟ್ಟಿಗೆ ಯ  ಕವಾಟ ಮುಚ್ಚುವುದು .ಶ್ವಾಸ 

ಕೋಶ ಮತ್ತು ನಾಳಗಳಲ್ಲಿ ಗಾಳಿ ತುಂಬಿದೆ .ಹೊರ ಹೋಗುವ ದಾರಿ ಮುಚ್ಚಿದೆ .ಆಗ 

ಮೆದುಳಿನ ಆದೇಶದಂತೆ  ಉದರದ ಮಾಂಸಖಂಡ ಮತ್ತು  ಎದೆಯ ನಿಶ್ವಾಸದ 

ಸ್ನಾಯುಗಳು ಬಲವಾಗಿ ಸಂಕುಚಿತ ಗೊಂಡು ಮುಚ್ಚಿದ ಧ್ವನಿ ಪೆಟ್ಟಿಗೆ ಕವಾಟ ವನ್ನು 

ತೆರೆದು ವೇಗ ಮತ್ತು ಬಲದಿಂದ ನಿಶ್ವಾಸ ವಾಯು ಬೇಡದ ವಸ್ತುವನ್ನು ಹೊರ 

ಹಾಕಲು ನಮ್ಮ ಅರಿವಿಲ್ಲದಂತೆ ಸಹಾಯ ಮಾಡುವವು .ಇದೇ ಕೆಮ್ಮು .

              ಗಂಟಲು ಶ್ವಾಸ  ನಾಳ ಮತ್ತು ಶ್ವಾಸ ಕೋಶಗಳ ಸೋಂಕು ,

ಗಾಳಿಯಲ್ಲಿನ  ಕಲ್ಮಶ ,ಶ್ವಾಸ ದಾರಿಯಲ್ಲಿ ಗಡ್ಡೆಗಳು ,ಎಲರ್ಜಿ ಉಂಟು ಮಾಡುವ 

ವಸ್ತುಗಳು ಕೆಮ್ಮಿಗೆ ಸಾಮಾನ್ಯ ಕಾರಣ .

                    ಸಣ್ಣ ಮಕ್ಕಳಲ್ಲಿ ವೈರಸ್ ಸೋಂಕು ಕೆಮ್ಮಿಗೆ ಸಾಮಾನ್ಯ ಕಾರಣ .

ಇಂತಹ ಕೆಮ್ಮಿಗೆ ಆಂಟಿ ಬಯೊಟಿಕ್ ಬೇಡ .ನಾಲ್ಕು ವರ್ಷದಿಂದ ಕೆಳಗಿನ 

ಮಕ್ಕಳಿಗೆ  ಕೆಮ್ಮು ಅದುಮಿಸುವಂತಹ  ಶಿರಪ್ ಕೊಡದಿರುವುದೇ ಲೇಸು .ಇಂತಹ 

ಔಷಧಿಗಳು ಮೆದುಳಿನ ಕೆಮ್ಮು  ಜನಕ ಕೋಶಗಳನ್ನು ನಿಷ್ಕ್ರಿಯ ಮಾಡುತ್ತವೆ 

.ಇವುಗಳ ಉಪಯೋಗಕ್ಕಿಂತ ಅಡ್ಡ ಪರಿಣಾಮಗಳೆ ಅಧಿಕ ಎಂದು ತಜ್ನನರು 

ಹೇಳುವರು .

        ಇನ್ನೂ  ಎಲರ್ಜಿ ಆಸ್ತಮಾ ದಂತ ಕಾಯಿಲೆಗಳಲ್ಲಿ  ಶ್ವಾಸ ನಳಿಕೆ ಗಳು 

ಸಂಕುಚಿತಗೊಂಡು  ನಿಶ್ವಾಸ ಕಷ್ಟ ವಾಗುವುದು .ಅಲ್ಲದೆ  ಶ್ವಾಸ ಮಾರ್ಗ ದಿಂದ 

ಸುಯಿನ್ ಸುಯಿನ್ ಎಂಬ ಸದ್ದು ಮತ್ತು ಕೆಮ್ಮು ಬರುವುದು .ಇದಕ್ಕೆ  ಶ್ವಾಸ ನಳಿಕೆ 

ಗಳನ್ನು ಹಿಗ್ಗಿಸುವ ಮತ್ತು ಎಲರ್ಜಿ ನಿವಾರಕ  ಔಷಧಿ ಗಳನ್ನು  ಸೇದುವ ರೂಪದಲ್ಲಿ 

ಅಥವಾ ಮಾತ್ರೆ ,ಶಿರಪ್ ರೂಪದಲ್ಲಿ ಕೊಡುವರು .ಅದನ್ನು ಮಕ್ಕಳೂ ಸೇವಿಸ 

ವೈದ್ಯರ  ಸಲಹೆ ಮೇರೆಗೆ ಸೇವಿಸ ಬಹುದು .

            ಶ್ವಾಸ ಕೋಶದ ಸೋಂಕಿಗೆ  ನ್ಯೂಮೋನಿಯ ಎನ್ನುವರು .ಶ್ವಾಸ ನಾಳದ 

ಇನ್ಫೆಕ್ಷನ್  ಗೆ  ಬ್ರೊಂಕೈಟೀಸ್ ಎಂದೂ  ಕರೆಯುವರು .ಇವುಗಳಿಂದಲೂ ಕೆಮ್ಮು 

ಬರುವುದು .ಎರಡು ವಾರಗಳಿಗಿಂತ  ಮೀರಿದ ಕೆಮ್ಮು ಇದ್ದರೆ ಕಫ ಪರೀಕ್ಷೆ ಮಾಡಿ  

ಕ್ಷಯ  ರೋಗ  ಇದೆಯೋ ಎಂದು ಪತ್ತೆ ಹಚ್ಚ ಬೇಕು .

            ಬೀಡಿ ಸಿಗರೇಟ್ ಸೇವನೆ ಯಿಂದ  ಕೆಮ್ಮು ಬರುವುದು .ಯಾಕೆಂದರೆ 

ಹೊಗೆ ,ತಂಬಾಕು ಎರಡೂ  ಶರೀರಕ್ಕೆ ಹಾನಿಕರ.

ಕೆಲವು ಔಷಧಿ ಗಳು  ( ಉದಾ ಬಿ ಪಿ ಗೆ ಉಪಯೋಗಿಸುವ ಎನಾಲಾಪ್ರಿಲ್  )

,ಕೆಲವರಲ್ಲಿ  ಅಸಾಧ್ಯ ಕೆಮ್ಮು ಉಂಟು ಮಾಡಬಹುದು .

                     ಕೆಮ್ಮುವವರು ಬಾಯಿ ಮೂಗಿಗೆ ಬಟ್ಟೆ ಇಟ್ಟರೆ  ಉಳಿತು .ಇದರಿಂದ 

ಕಫದ ಕಣಗಳ ಮೂಲಕ ರೋಗಾಣುಗಳು ಹರಡುವುದು  ಕಡಿಮೆ ಆಗುವುದು .







1 ಕಾಮೆಂಟ್‌: