ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ,
ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ.
ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ.
ನಿಮ್ಮ ಶರಣರ ಪಾದವಲ್ಲದೆ ಅನ್ಯವಿಷಯಕ್ಕೆಳಸದಂತೆ ಇರಿಸು ಕೂಡಲಸಂಗಮದೇವ.
ಇದು ಬಸವಣ್ಣ ನವರ ಜನಪ್ರಿಯ ವಚನ . ಇಲ್ಲಿ ನಾವು ಋಣಾತ್ಮಕ ಬೇಡಿಕೆಗಳನ್ನು ಕಾಣುತ್ತೇವೆ . ಗುರಿ ಮಾತ್ರ ಒಳ್ಳೆಯದು .
ವೈದ್ಯ ಶಾಸ್ತ್ರದಲ್ಲಿ ಹಚಿಸನನ ಪ್ರಾರ್ಥನೆ ಎಂದು ಇದೆ .
ತಾನಾಗಿಯೇ ಗುಣವಾಗುವುದು ಖಾತರಿ ಇರುವ ಕಾಯಿಲೆಗಳನ್ನು ಹಾಗೆಯೇ ಬಿಡಲು ಬಿಡದ ಮನಸ್ಥಿತಿ(ಸುಮ್ಮನೇ ಔಷಧಿ ಕೊಡುವುದು ) ,ಹೊಸತಕ್ಕೆಲ್ಲಾ ಅಂಧ ಪುರಸ್ಕಾರ ಮತ್ತು ಹಳೆಯದೆಲ್ಲವೂ ಗೌಣ ಎಂಬ ತಿರಸ್ಕಾರ :ವಿವೇಕವನ್ನು ಜ್ಞಾನದ ಮುಂದೆ ,ಅಂತೆಯೇ ವಿಜ್ಞಾನವನ್ನು ಕಲೆಯ ಮುಂದೆ ,ಬುದ್ದಿವಂತಿಗೆಯನ್ನು ಸಾಮಾನ್ಯ ಜ್ಞಾನದ ಮೇಲೆ ಇಡುವುದು :ರೋಗಿಗಳನ್ನು ಕೇಸ್ ಎಂದು ನೋಡುವದು , ನಮ್ಮ ಚಿಕಿತ್ಸೆಯು ರೋಗದ ಬಳಲುವಿಕೆಗಿಂತ ಹೆಚ್ಚು ಅಸಹನೀಯವಾಗುವಂತೆ ಮಾಡುವುದು --ದೇವರೇ ಇಂತಹುಗಳಿಂದ ನನ್ನನ್ನು ದೂರವಿಡು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ