ಹಿರಣ್ಯಕಶಿಪು ಪ್ರಹ್ಲಾದನನ್ನು ತೋರಿಸು ನಿನ್ನ ದೇವರನು , ಅಲ್ಲಿರುವನೋ ಇಲ್ಲಿರುವನೋ ,ಕಂಬದಲ್ಲಿ ಇರುವನೋ ಎಂದು
ಕೇಳಿದಾಗ ಬಾಲಕನ ಮನದಲ್ಲಿ ಯಾವ ಉತ್ತರಗಳು ಹೊಳೆದವೋ ತಿಳಿದಿಲ್ಲ .ಆದರೆ ನಮ್ಮ ಜೀವನದಲ್ಲಿ ಹಲವು ಬಾರಿ
ನಮ್ಮ ಮನಸಿನಲ್ಲಿ ಹಿರಣ್ಯಕಶಿಪು ಹಾದು ಹೋಗುವುದುಂಟು .
ಮುಂಜಾವು ,ಹಕ್ಕಿಗಳ ಇಂಚರ ,ಮಂದ ಮಾರುತ ಕೆಲವೊಮ್ಮೆ ನಮಗೆ ದೈವೀ ಶಕ್ತಿಯ ಸಾಕಾರ ಎಂದೆನಿಸುವುದು .
ಗಾಳಿಯಲ್ಲಿ ತೇಲಿ ಬರುತ್ತಿರುವ ಸುಮಧುರ ಶ್ರುತಿ ಬದ್ಧ ಸಂಗೀತ ಹಲವು ಬಾರಿ ಭಗವಂತನ ಸ್ವರೂಪ . .
ತ್ಯಾಗರಾಜರು ನಾದಾ ತನುಮನಿಸಂ ಶಂಕರಂ ಎಂದಿದ್ದಾರೆ .ಎಂದರೆ ಶಿವನ ತನು ಮನ ಎಲ್ಲಾ ಸಂಗೀತವೆ .ಭಕ್ತಿಯಿಂದ
ಸಂಗೀತವನ್ನು ಹಾಡಬೇಕು.ಎಂದರೆ ಸಂಗೀತದ ಮೇಲೆ ಭಕ್ತಿ .ಸಂಗೀತ ಜ್ಞಾನಮು ಭಕ್ತಿ ವಿನಾ ಎಂದಿದ್ದಾರೆ ತ್ಯಾಗರಾಜರು .
ಇಲ್ಲಿ ಭಕ್ತಿಯಿಲ್ಲದೆ ಡಂಬಾಚಾರ ದ ಸಂಗೀತದಲ್ಲಿ ದೈವ ಶಕ್ತಿ ಇಲ್ಲಾ ಎಂದು ಅರ್ಥ .ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ
ಕೇಳನೋ ಹರಿ ತಾಳನೋ ಎಂದು ಪುರಂದರದಾಸರು ಹೇಳಿದ್ದಾರೆ.
ತನ್ಮಯತೆ ಮತ್ತು ಭಕ್ತಿ ಕೂಡಿದ ಗಾನ ದೇವರು .
ಅಂತೆಯೇ ತನ್ಮಯತೆಯಿಂದ ಮೈಮುರಿದು ಮಾಡುವ ಕೆಲಸದಲ್ಲಿಯೂ ದೇವರು ಇರುವನು .ಬಸವಣ್ಣ ಕಾಯಕವೇ
ಕೈಲಾಸ ಎಂದದ್ದೂ ಇದನ್ನೇ .ದುಡಿಮೆಯಿಲ್ಲದೆ ಉಂಡು ಕಂಡ ದೇವರನು ಗುಡಿಯಲ್ಲಿ ಹುಡುಕಿದರೆ ಎಲ್ಲಿ ಸಿಗುವನು ?

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ