ಮೂತ್ರಪಿಂಡಗಳ ಕೆಲಸ ಏನು ?ಎಂದು ಕೇಳಿದರೆ ದೇಹಕ್ಕೆ ಅವಶ್ಯವಿಲ್ಲದ
ವಸ್ತುಗಳ ವಿಸರ್ಜನೆ ಎಂದು ಎಲ್ಲರೂ ಹೇಳುವರು .ಆದರೆ ಇನ್ನೂ ಮುಖ್ಯವಾದ
ಪಾತ್ರಗಳನ್ನೂ ಅವು ನಿರ್ವಹಿಸುವವು .
ವಸ್ತುಗಳ ವಿಸರ್ಜನೆ ಎಂದು ಎಲ್ಲರೂ ಹೇಳುವರು .ಆದರೆ ಇನ್ನೂ ಮುಖ್ಯವಾದ
ಪಾತ್ರಗಳನ್ನೂ ಅವು ನಿರ್ವಹಿಸುವವು .
ಮೂತ್ರಪಿಂಡಗಳು ನಿರ್ನಾಳ ಗ್ರಂಥಿಗಳಾಗಿ ಚೋದಕ(ಹಾರ್ಮೋನ್) ಗಳನ್ನೂ
ಸ್ರವಿಸುತ್ತವೆ .ಅವು ನೇರ ವಾಗಿ ರಕ್ತಕ್ಕೆ ಸೇರಿ ತಮ್ಮ ಗುರಿಯತ್ತ ಸಾಗುತ್ತವೆ .
೧ ರೆನಿನ್ . ಇದು ಕಿಡ್ನಿಗಳಿಂದ ಉತ್ಪತ್ತಿಯಾಗುವ ಹಾರ್ಮೋನ್ .ಇದು ಅಂಜಿಯೋತೆನ್ಸಿನ್
ಎಂಬ ವಸ್ತುವನ್ನು ಕ್ರಿಯಾಶೀಲವಾಗಿ ಮಾಡಿ ರಕ್ತದ ಒತ್ತಡವನ್ನು ಕಾಯುತ್ತದೆ .
ಅಲ್ಲದೆ ಅಡ್ರಿನಲ್ ಗ್ರಂಥಿಗಳನ್ನು ಪ್ರಚೋದಿಸಿ ರಕ್ತದ ಉಪ್ಪಿನ ಅಂಶವನ್ನು
ಕಾಯುವ ಹೊರ್ಮೊನ್ ಸ್ರಾವವನ್ನು ನಿಯಂತ್ರಿಸುತ್ತದೆ .
೨ಕ್ಯಾಲ್ಸಿಟ್ರಯೊಲ್
ಇದು ವಿಟಮಿನ್ ಡಿ ಯ ಕ್ರಿಯಾಶೀಲ ರೂಪ .ವಿಟಮಿನ್ ಡಿ ಯು ಲಿವರ್ ಮತ್ತು
ಮೂತ್ರಪಿಂಡಗಳಲ್ಲಿ ತಲಾ ಒಂದು OH ಗುಂಪನ್ನು ಸೇರಿಸಿಕೊಂಡ ಮೇಲೆಯೇ
ತನ್ನ ಉದ್ದೇಶಿತ ಕಾರ್ಯ ನಿರ್ವಹಿಸಲು ಸಮರ್ಥವಾಗುವುದು .ಅಂದರೆ
ಕರುಳಿನಿಂದ ಕ್ಯಾಲ್ಸಿಯಂ ರಕ್ತಕ್ಕೆ ಸೇರ್ಪಡೆ ,ಮೂ ತ್ರಪಿಂಡದಿಂದ ಕ್ಯಾಲ್ಸಿಯಂನ
ವಿಸರ್ಜನೆ ತಡೆ .ಇತ್ಯಾದಿ .
೩.ಏರಿಥ್ರೋ ಪೋಯಿಟಿನ್
ಇದು ಅಸ್ಥಿಮಜ್ಜೆ ಯನ್ನು ಚೋದಿಸಿ ಕೆಂಪು ರಕ್ತ ಕಣಗಳ ಉತ್ಪತ್ತಿ ಹೆಚ್ಚಿಸುವ
ಹಾರ್ಮೋನ್ .ರಕ್ತದಲ್ಲಿ ಆಮ್ಲಜನಕದ ಕೊರತೆಯಾದರೆ ಇದರ ಉತ್ಪತ್ತಿ
ಏರುತ್ತದೆ .ಕೆಂಪು ರಕ್ತ ಕಣಗಳು ಆಮ್ಲಜನಕದ ವಾಹಕಗಳಷ್ಟೇ .
ಮೂತ್ರಪಿಂಡಗಳ ವೈಫಲ್ಯ (kidney Failure)ನಲ್ಲಿ ರಕ್ತ ಹೀನತೆ ಉಂಟಾಗುವುದು .
ಮತ್ತು ಎಲುಬುಗಳು ಕ್ಷೀಣಿಸುವವು .ಅದಕ್ಕೇ ವೈದ್ಯರು ಕೃತಕ ಏರಿತ್ರೋ
ಪೊಯಿಟಿನ್ ಹಾರ್ಮೋನ್ (ಚುಚ್ಚುಮದ್ದು ರೂಪದಲ್ಲಿ ) ಮತ್ತು ಕ್ರಿಯಾಶೀಲ
ಡಿ ಅನ್ನಾಂಗ (ಕ್ಯಾಲ್ಸಿ ಟ್ರಯೋಲ್ ) ಮಾತ್ರೆ ರೂಪದಲ್ಲಿ ಕೊಡುವರು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ