ನಿಮ್ಮ ತಲೆ ಖಾಲಿಯೋ ಮೆದುಳನ್ನು ಏನಾದರೂ ದೇವರು ಇಟ್ಟಿದ್ದಾನೋ ಎಂದು
ಬೈಗಳು ತಿಂದಿರ ಬಹುದು .ಆದರೆ ಸೃಷ್ಟಿಕರ್ತ ನು ತಲೆ ಬುರುಡೆಯಲ್ಲಿ ಖಾಲಿ
ಪ್ರದೇಶಗಳನ್ನೂ ಇಟ್ಟಿರುವನು. ಅವುಗಳನ್ನು ಸೈನಸ್ ಗಳು ಎಂದು ಕರೆಯುವರು .
ಈ ಖಾಲಿ ಖೋಲಿಗಳು ಮೂಗಿನ ಸಂಪರ್ಕದಲ್ಲಿ ಇರುವವು .ಇವಗಳಲ್ಲಿ ಗಾಳಿ
ತುಂಬಿದ್ದು ಮೂಗಿನ ಮೂಲಕ ಹೊಸ ವಾಯು ತುಂಬುವುದು . ಇವುಗಳು ತಲೆಯ
ಭಾರ ಕಡಿಮೆ ಮಾಡುವವಲ್ಲದೆ ,ನಮ್ಮ ಸ್ವರಕ್ಕೆ ಅದರ ನಾದವನ್ನು ಕೊಡುವುವು.

ಇದರಲ್ಲಿ ಕಣ್ಣುಗಳ ಮೇಲೆ ಇಬ್ಬದಿಯಲ್ಲಿ ಮುಂಬಾಗದ ಸೈನಸ್ ಗಳು ,ಕೆಳಗೆ
ಎರಡು ಮೇಲ್ದವಡೆಯ ಸೈನಸ್ಗಳು ಮತ್ತು ಕಣ್ಣಿನ ಹಿಂದೆ ಅಡಗಿರುವ ಸ್ಪಿನೋಯಿಡ
ಸೈನ್ಸ್ ಮತ್ತು ಎತ್ಹ್ಮೊಯ್ದಲ್ ಸೈನಸ್ ಸೇರಿವೆ .
ಕೆಲವೊಮ್ಮೆ ಶೀತ ಉಂಟು ಮಾಡುವ ವೈರಸ್ ಗಳು ಮೂಗಿನ ಮೂಲಕ
ಇಲ್ಲಿಗೂ ಧಾಳಿ ಮಾಡಿ ಗಾಳಿಯ ಬದಲು ನೆಗಡಿ ತುಂಬುವಂತೆ ಮಾಡುವುವು .
ಇದರಿಂದ ವಿಪರೀತ ತಲೆನೋವು ಉಂಟಾಗುವುದು .ಅದನ್ನು ಸೈನುಸೈಟಿಸ್
ಎಂದು ಕರೆಯುವರು .
ಇದಕ್ಕೆ ನೋವು ನಿವಾರಕ ,ಮತ್ತು ಶೀತ ಲಕ್ಷಣ ನಿರೋಧಕ ಆಂಟಿ ಹಿಸ್ಟಮಿನ್
ಗುಳಿಗೆಗಳನ್ನು ಕೊಡುವರು .ಬಿಸಿ ನೀರ ಆವಿ ಸೇವನೆ ಮೂಗು ಮತ್ತು
ಸೈನಸ್ ನಡುವಿನ ದ್ವಾರವನ್ನು ತೆರೆದಿಡುವಲ್ಲಿ ಸಹಾಯಕ .ಸಾರಾ ಸಗಟು
ಆಂಟಿ ಬಯೋಟಿಕ್ ಬಳಕೆ ಅನಾವಶ್ಯಕ .
ಈ ಸೈನಸ್ ಗಳಲ್ಲದೆ ಮೂಗಿಗೆ ಕಣ್ಣುಗಳಿಂದಲೂ ಒಂದು ನಾಳ (ನೇತ್ರ ನಾಸಿಕ
ನಳಿಕೆ) ಇರುವುದು .ಕಣ್ಣೀರನ್ನು ಹೊರಗೆ ಕಾಣದಂತೆ ವಿಸರ್ಜಿಸುವ ಮಾರ್ಗ ,ಅದಕ್ಕೆ
ಜೋರಾಗಿ ಅತ್ತರೆ ನೆಗಡಿ ಬರುವುದು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ