ಧಾರವಾಡ ನಗರದ ಹೃದಯ ಭಾಗದಲ್ಲಿ ಮೇಲೆ ಕಾಣಿಸಿದ ಹಳೇ ಕಟ್ಟಡ
ಮೊದಲು ಕಂಡವರಿಗೆ ಅದರ ಭವ್ಯ ಇತಿಹಾಸ ಮನವರಿಕೆ ಆಗದು .ಅದುವೇ
ಕರ್ನಾಟಕ ವಿದ್ಯಾವರ್ಧಕ ಸಂಘ .೧೮೯೦ ಜುಲೈ ೨೦ ರಂದು ಕನ್ನಡ ಕುಲ
ತಿಲಕ ರಾವ್ ಬಹದೂರ್ ಆರ್ ಎಚ್ ದೇಶಪಾಂಡೆಯವರಿಂದ ಸ್ಥಾಪಿತವಾದ ಸಂಸ್ಥೆ .
ವಿವಿದ ಪ್ರಾಂತ್ಯಗಳಲ್ಲಿ ಹಂಚಿ ಹೋಗಿದ್ದ ಕನ್ನಡ ನಾಡಿನ ಏಕೀಕರಣಕ್ಕೆ ನಾಂದಿ
ಹಾಕಿದ ತಾಣ .ಸಿರಿ ಗನ್ನಡಂ ಗೆಲ್ಗೆ . ಎಂಬ ನುಡಿ ಗಟ್ಟನ್ನು ಹುಟ್ಟು
ಹಾಕಿದವರೇ ಪ್ರಾತಃ ಸ್ಮರಣೀಯ ದೇಶಪಾಂಡೆಯವರು .ಮುಂದೆ ಜನ್ಮ ತಾಳಿದ
ಕನ್ನಡ ಸಾಹಿತ್ಯ ಪರಿಷತ್ತಿಗೂ ಇದುವೇ ಸ್ಪೂರ್ತಿ .
೧೯೭೬ ರಿಂದ ೧೯೮೧ ರ ವರೆಗೆ ಹುಬ್ಬಳ್ಳಿ ಕೆ ಎಂ ಸಿ ರಲ್ಲಿ ಓದುತ್ತಿದ್ದಾಗ
ಈ ಸಂಘದ ಸಭೆಗಳಿಗೆ ಹಾಜರಾಗುತ್ತಿದ್ದೆ.ಆಗ ಕವಿ ಚಂದ್ರಶೇಖರ ಪಾಟೀಲ್
ಕಾರ್ಯದರ್ಶಿ ಯಾಗಿದ್ದರು .ಕನ್ನಡದ ಘಟಾನುಘಟಿ ಸಾಹಿತಿಗಳಾದ ಗೋಪಾಲಕೃಷ್ಣ
ಅಡಿಗ ,ಲಂಕೇಶ್ ,ಅನಂತಮೂರ್ತಿ ಮುಂತಾದವರನ್ನು ಹತ್ತಿರದಿಂದ ನೋಡುವ
ಮತ್ತು ಕೇಳುವ ಭಾಗ್ಯ .ಚಂಪಾ ಅವರು ದಿಗ್ಗಜರಿಗೆ ಹಾಕುತ್ತಿದ್ದ ಹರಿತ ಪ್ರಶ್ನೆಗಳು
ರೋಚಕ ಚರ್ಚೆ .ಸಭೆಯ ನಂತರ ಹತ್ತಿರದ ವಿದ್ಯಾರ್ಥಿ ಭವನ ಕ್ಯಾಂಟೀನ್ ನಲ್ಲಿ
ಬಾಳೆಹಣ್ಣು ಶಿರಾ ಮತ್ತು ಟೀ ಸೇವನೆ .
ಇತ್ತೀಚಿಗೆ ಅರ್ ಎಚ್ ದೇಶಪಾಂಡೆಯವರ ಬಗ್ಗೆ ಸಂಘವು ಒಂದು ಪುಸ್ತಕ
ತಂದಿದೆ.ಸಂಘದ ಅಧ್ಯಕ್ಷ ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮ ಭೀಷ್ಮ
ಶ್ರೀ ಪಾಟೀಲ ಪುಟ್ಟಪ್ಪ ಅದನ್ನು ಬಿಡುಗಡೆ ಮಾಡಿದರು .ಕನ್ನಡ ಕ್ಕಾಗಿ
ಪ್ರಾಮಾಣಿಕ ಕೆಲಸ ಮಾಡುತ್ತಿರುವ ನನ್ನ ಮಿತ್ರ ವೈದ್ಯ ಡಾ ಸಂಜೀವ ಕುಲಕರ್ಣಿ
ವಿದ್ಯಾ ವರ್ಧಕ ಸಂಘ ದ ಓರ್ವ ಕ್ರಿಯಾಶೀಲ ಪಧಾಧಿಕಾರಿ ಎಂಬುದು ಹೆಮ್ಮೆಯ
ವಿಷಯ
ಅರ್ ಎಚ್ ದೇಶಪಾಂಡೆ
ಪಾಟೀಲ ಪುಟ್ಟಪ್ಪರಿಂದ ಪುಸ್ತಕ ಬಿಡುಗಡೆ (ಎಡ ತುದಿಯಲ್ಲಿ ಡಾ ಕುಲಕರ್ಣಿ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ