ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿರುವ ಕಾಯಿಲೆ ಜಿಕಾ ವೈರಸ್ ಕಾಯಿಲೆ .
ಡೆಂಗು ,ಚಿಕನ್ ಗುನ್ಯಾ ಗುಂಪಿಗೆ ಸೇರಿದ ವೈರಸ್ ರೋಗಾಣು ವಿನಿಂದ
ಉಂಟಾಗುವುದು ,ಇದರ ವಾಹಕವೂ ಡೆಂಗು ಹರಡುವ ಇಡಿಸ್ ಇಜಿಪ್ತೀ ಸೊಳ್ಳೆ .
ಇದು ಸಾಯಂ ಸಂಧ್ಯಾ ಸಮಯದಲ್ಲಿ ಕಾಡುವ ಸೊಳ್ಳೆ .ಲೈಂಗಿಕ ಸಂಬಂಧ ದಿಂದಲೂ ಈ ರೋಗ ಹರಡುವುದು
ಜಿಕಾ ಕಾಯಿಲೆ ಮೊದಲು ಉಗಾಂಡಾ ದೇಶದಲ್ಲಿ 1947 ರಲ್ಲಿ ಹಳದಿ ಜ್ವರ
ಅಧ್ಯಯನ ಮಾಡುವ ತಂಡದಿಂದ ಕಂಡು ಹಿಡಿಯಲ್ಪಟ್ಟಿತು.ಆ ಮೇಲೆ ಆಗಾಗ್ಗೆ
ಆಫ್ರಿಕಾ ದೇಶಗಳಲ್ಲಿ ತಲೆ ಎತ್ತುತ್ತಿತ್ತಾದರೂ ಪ್ರಾಣಾಂತಿಕ ಕಾಯಿಲೆ ಅಲ್ಲದ ಕಾರಣ
ಅಷ್ಟು ಗಮನ ಸೆಳೆಯಲಿಲ್ಲ .
ಮನುಷ್ಯನ ಶರೀರ ದೊಳಗೆ ಸೇರಿದ ರೋಗಾಣು ಜ್ವರ ತಲೆನೋವು,ಕೀಲುನೋವು , ಕೆಂಗಣ್ಣು ಮತ್ತು ಮೈಮೇಲೆ ಧಡಾರ ದಂತಹ ಕೆಂಪು ಬೀಳುವುದು ಇತ್ಯಾದಿ ಲಕ್ಷಣಗಳುಳ್ಳ ಕಾಯಿಲೆ ಹುಟ್ಟು ಹಾಕುವುದು ,
ಸಾಮಾನ್ಯ 2 ರಿಂದ 7 ದಿನಗಳ ವರೆಗೆ ಮೇಲೆ ಹೇಳಿದ ಸಮಸ್ಯೆಗಳು ಕಾಡ
ಬಹುದು ,ಈ ಕಾಯಿಲೆ ಪ್ರಾಣಾಂತಕ ಅಲ್ಲ , ವಿಶ್ರಾಂತಿ ಮತ್ತು ಸಾಧಾರಣ ಜ್ವರ ಶಾಮಕ ಮಾತ್ರೆ ಸೇವನೆ ಸಾಕು.
ಈ ಮೊದಲೇ ಡೆಂಗ್ಯೂ ಕಾಯಿಲೆ ಬಂದು ಗುಣಮುಖರಾದವರಲ್ಲಿ ಜಿಕಾ ಕಾಯಿಲೆ ಸೌಮ್ಯ ಸ್ವರೂಪದಲ್ಲಿ ಇದ್ದರೆ ,ಜಿಕಾದಿಂದ ಬಳಲಿದವರಿಗೆ ಡೆಂಗ್ಯೂ ಬಂದರೆ ತೀವ್ರ ವಾಗಿ ಇರುವುದು ಎಂದು ಅಧ್ಯಯನಗಳಿಂದ ಕಂಡು ಬಂದಿದೆ.
ಹಾಗಾದರೆ ಈಗ ಯಾಕೆ ಈ ಭೀತಿ ? ಬ್ರೆಜಿಲ್ ದೇಶದಲ್ಲಿ ಈ ರೋಗದ ಹಾವಳಿ
ಇದ್ದ ಸಮಯದಲ್ಲಿ ಜನಿಸಿದ ಮಕ್ಕಳು ಕಿರು ತಲೆ ಯವರಾಗಿ ಹುಟ್ಟಿದ್ದು ಕಂಡು ಬಂತು . .ಗರ್ಭಿಣಿಯರಿಗೆ ಜಿಕಾ ಬಂದರೆ ಗರ್ಭಸ್ಥ ಶಿಶುವಿಗೆ ಹಾನಿ ಮಾಡುವುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ