ಬೆಂಬಲಿಗರು

ಸೋಮವಾರ, ಜುಲೈ 27, 2015

ರೈತರ ಆತ್ಮಹತ್ಯೆ

                  


ಪ್ರಾಣೇಶಾಚಾರ್ಯರು ಒಂದು ಜೋಕ್ ಹೇಳುತ್ತಿದ್ದರು .ಎಸ್ ಎಸ್ ಎಲ್ ಸಿ  ಪರೀಕ್ಷೆ 

ಫಲಿತಾಂಶ ಸಮಯದಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಆತ್ಮಹತ್ಯೆ 

ಮಾಡುವುದನ್ನು ತಪ್ಪಿಸಲು ಉಣಕಲ್ ಕೆರೆ ಬಳಿ ಕಾವಲಿದ್ದ ಪೊಲೀಸರಿಗೆ ಒಬ್ಬ 

ಹುಡುಗ ಕಾಣಿಸುತ್ತಾನೆ .ಯಾಕೋ ಇಲ್ಲಿ ಬಂದೆ ?."ಪರೀಕ್ಷೇಲಿ ಫೈಲ್ ಸಾರ್ 

,ಆತ್ಮಹತ್ಯೆ ಮಾಡೋಣ ಎಂದು ಬಂದೆ. " ಯಾವ ಪರೀಕ್ಷೆ ? "ಪಿ ಯು ಸಿ ಸಾರ್."

ಪರವಾಗಿಲ್ಲ ಹಾರ್ಕೋ? ನಾವು ಎಸ್ ಎಸ್ ಎಲ್ ಸಿ ಯವರನ್ನು ಕಾಯೋಕೆ 

ಬಂದಿದ್ದೇವೆ "

 ರೈತರ ಆತ್ಮಹತ್ಯೆ ವಿಚಾರಿಸಲು ಹೋದ ಅಧಿಕಾರಿಗಳು ಅವನು ರೈತನೇ ಅಣ್ಣ 

ಅವನ ಹೆಸರಿನಲ್ಲಿ ಪಹಣಿ ಪತ್ರವೇ ಇಲ್ಲ ಎಂದು ಕೊಟ್ಟ ಹೇಳಿಕೆ ನೋಡಿದಾಗ 

ಮೇಲಿನ ಜೋಕ್ ನೆನಪಾಯಿತು .ಕೃಷಿ ಮೂಲವಾಗಿರುವ ನಮ್ಮ ಆರ್ಥಿಕತೆ 

ಯಲ್ಲಿ ಕೃಷಿ ಉತ್ಪನ್ನಗಳಿಗೆ ಬೆಲೆ  ಹಠಾತ್ ಕಮ್ಮಿಯಾದರೆ ಅದರ ಪರಿಣಾಮ 

ಜಮೀನು ಇರುವ ಕೃಷಿಕನಲ್ಲದೆ ಕೃಷಿ ಕಾರ್ಮಿಕ ,ಹಳ್ಳಿಯ ಗುಡಿಗಾರಿಕೆ ,ಸಣ್ಣ 

ವ್ಯಾಪಾರಿಗಳು ಎಲ್ಲರೂ ಸಂಕಷ್ಟ ಕ್ಕೆ ಈಡಾಗುತ್ತಾರೆ .ನಮ್ಮ ಊರಿನಲ್ಲಿ ಅಡಿಕೆಗೆ 

ಬೆಲೆ ಇಳಿದಾಗ ಮದ್ಯದ ಅಂಗಡಿ ಮಾಲೀಕರು ಧರ್ಮಸ್ಥಳಕ್ಕೆ ಹರಿಕೆ ಹಾಕಿ ಬೆಲೆ 

ಏರಲೆಂದು ಮೊರೆಯಿಡುತ್ತಿದರು ಎಂದು ಅಲ್ಲಿನ ಧರ್ಮಾಧಿಕಾರಿ ಒಂದು ಸಭೆಯಲ್ಲಿ 

ಹೇಳಿದ ನೆನಪು .

ರೈತನ ಕಾರ್ಪಣ್ಯ ಗಳಿಗೆ ಸಾಲ ಕೊಟ್ಟ ಬ್ಯಾಂಕ್ ಗಳನ್ನು ದೂಷಿಸುವುದು ಸರಿಯಲ್ಲ 

ಬ್ಯಾಂಕ್ ಗಳು ಇದ್ದ ಕಾರಣ ಅವರು ಇಷ್ಟು ಕಾಲ ಬದುಕುವಂತಾಯಿತು .ರೈತರ 

ಆತ್ಮಾಭಿಮಾನ ಅವರನ್ನು ಆತ್ಮಹತ್ಯೆಗೆ ದೂಡುವುದು.

  ರೈತರಿಗೆ  ಸರ್ಕಾರಿ ಕಛೇರಿಗಳಲ್ಲಿ ಗೌರವ ಸಿಗುವಂತೆ ಆಗ ಬೇಕು .ಅವರನ್ನು 

ಕುರಿಗಳಂತೆ ಕಾಣ ಬಾರದು .ಆಧಾರ್ ಕಾರ್ಡ್ ,ರೇಶನ್ ಕಾರ್ಡ್ ಮತ್ತು ಜಾತಿ 

ಸರ್ಟಿಫಿಕೇಟ್ ಗೆಂದು ಅವರನ್ನು ಅಲೆಸ ಬಾರದು .ಕಛೇರಿಗಳಲ್ಲಿ ಅವರಿಗೆ 

ಗೌರವ ಕೊಟ್ಟು ಮಾತನಾಡಿಸದೆ ಅವರು ತಮ್ಮ ಕಷ್ಟ ಹೇಳಿಕೊಂಡಾರು.ಆತ್ಮಹತ್ಯೆ

ಮಾಡಿದ ಮೇಲೆ ಯಾರನ್ನು ಕೇಳಿ ಏನು ಪ್ರಯೋಜನ ?

ಇದಕ್ಕೆ ಸರಕಾರೀ ಕಚೇರಿಗಳಲ್ಲ್ಲಿ ನೇಮಕ ಮಾಡುವಾಗ  ಲಂಚ ತೆಗೆದು ಕೊಳ್ಳದೆ

ಅರ್ಹರಿಗೆ (ಮೀಸಲಾತಿ ಇರಲಿ ,ಅವರಲ್ಲೂ ಅರ್ಹರಿದ್ದಾರೆ)ಕೆಲಸ ಕೊಡಬೇಕು .

ಅದರಲ್ಲಿ ಅಂಕ ಮಾತ್ರವಲ್ಲದೆ ಸೇವಾ ಮನೋಭಾವ ಇದೆಯೋ ಎಂದು ವೈಜಾನಿಕ 

ವಾಗಿ ನಿರ್ಧರಿಸಿ ನೇಮಕ ಮಾಡ ಬೇಕು .

ಸರಕಾರೀ ಕಛೇರಿಗಳಲ್ಲಿ ಅದೂ ಕೃಷಿ ಇಲಾಖೆಯಲ್ಲಿ  ಸಲಹಾ ಕೊಟಡಿ ಇರಬೇಕು .

ಅಲ್ಲಿ ರೈತರಿಗೆ ಗೌರವ ಕೊಟ್ಟು ಪ್ರೀತಿಯಿಂದ ಮಾತನಾಡಿಸುವವರು ಬೇಕು .ಕೃಷಿ 

ಮಾರುಕಟ್ಟೆಯ ಏರು ಪೇರು ನಿರೀಕ್ಷಣಾ ಮಾಹಿತಿ ಕಾಲ ಕಾಲಕ್ಕೆ ರೈತರಿಗೆ ಸಿಗ 

ಬೇಕು .

ಇದಕ್ಕೆಲ್ಲಾ ಹಣ ಎಲ್ಲಿಂದಾ ಎಂದು ಕೇಳುವಿರಾ .ನಮ್ಮ ಜನ ಪ್ರತಿನಿಧಿಗಳು ತಮಗೆ 

ತಾವೇ ಕೊಡಿಸಿ ಕೊಳ್ಳುವ ಸವಲಿತ್ತಿನ ಒಂದು ಭಾಗ ಸಾಕು .ಐಶರಾಮಿ ಹೋಟೆಲ್ 

ಗಳಲ್ಲಿ ಸಭೆ ನಡೆಸಿ ರೈತರ ತಮ್ಮ ರೈತ ಪ್ರೇಮದ ಬಗ್ಗೆ ಭಾಷಣ ಬಿಗಿಯುವ 

ರಾಜಕೀಯ ನೇತಾರರು ಸ್ವಲ್ಪ ಸರಳತೆ ಅನುಸರಿಸಿ .ಗಾಂಧೀಜಿ ಬಟ್ಟೆ ಹಾಕಿ 

ಕೊಳ್ಳದೆ ಇದ್ದುದು ಹಣ ಇಲ್ಲದ ಕಾರಣ ಅಲ್ಲ .ನಮ್ಮ ದೇಶದ ಕೊನೆಯ ವ್ಯಕ್ತಿಯೂ 

ಸರಿಯಾದ ಉಡುಪು ಕೊಳ್ಳುವ ಶಕ್ತಿ ಬರುವ ವರೆಗೆ ತಾವು ಕನಿಷ್ಠ ವಸನ ರಾಗಿ 

ಇರುವುದು ಎಂಬ ಆತ್ಮಸಾಕ್ಷಿಯ ಮಾತಿನ ಕರೆಯಿಂದ .ನಮ್ಮ ನೇತಾರರು ಇದನ್ನು 

ಗಮನಿಸ ಬೇಕು .ಮಂತ್ರಿಗಳಾಗಿರುವವರು  ಆದಷ್ಟು ಸ್ವಯಂ ಭಾರಿ ಉದ್ದಿಮೆ 

(ಶಿಕ್ಷಣ ಸಂಸ್ಥೆ ಸೇರಿ -ಯಾಕೆಂದರೆ ಈಗ ಅದೂ ಉದ್ದಿಮೆ ತಾನೇ ) ಹೊಂದಿರ 

ಬಾರದು .ಯಾಕೆಂದರೆ ಅವರಿಗೆ ಜನರ ಗೋಳು ಕೇಳುವ ವ್ಯವಧಾನ ಇರದು 

ಅಲ್ಲದೆ ಸ್ವಯಂ ಹಿತಾಸಕ್ತಿಗೂ ,ಸಾರ್ವಜನಿಕ ಹಿತಾಸಕ್ತಿಗೂ ಹೊಂದಿ ಬಾರದು .


(ಚಿತ್ರದ ಮೂಲಕ್ಕೆ ಆಭಾರಿ )

1 ಕಾಮೆಂಟ್‌: