ಬೆಂಬಲಿಗರು

ಬುಧವಾರ, ಜುಲೈ 22, 2015

ಕ್ಷಯ ರೋಗ ಅಕ್ಷಯವೇ?

ಕ್ಷಯ ರೋಗ ದ ಅಸ್ತಿತ್ವ  ಬಹಳ ಹಿಂದಿನಿಂದಲೂ ಇತ್ತು .ರಾಬರ್ಟ್ ಕೊಕ್ ಎಂಬ  

ಜರ್ಮನ್  ಇದನ್ನು ಉಂಟು ಮಾಡುವ ಬ್ಯಾಕ್ಟೀರಿಯಾ ಕಂಡು ಹಿಡಿದನು (೧೮೮೨).

ಈ ಕಾಯಿಲೆಗೆ ಕೋಕ್ಸ್ ಡಿಸೀಸ್ ಎಂದೂ ವೈದ್ಯರು ಕರೆಯುವರು .ಇದೇ ವಿಜ್ಞಾನಿ 

ಆಂಥ್ರಾಕ್ಸ್ ಮತ್ತು ಕಾಲರಾ ರೋಗಾಣುಗಳನ್ನೂ ಪತ್ತೆ ಹಚ್ಚಿರುವರು 



     ಈ ರೋಗಾಣುಗಳು  ವಾಯು ಸ್ನೇಹಿ ಮತ್ತು ನಿಧಾನವಾಗಿ ವ್ರುದ್ದಿಸುವಂತವು.

ಶ್ವಾಸ ಕೋಶ ಇವುಗಳ ಮೊದಲ ಗುರಿ .ರೋಗಿಯ ಕಫವು ಗಾಳಿಯ ಮೂಲಕ 

ರೋಗಾಣು ಪಸರಿಸುವವು .

ಆರಂಭದಲ್ಲಿ ಸಣ್ಣ ಜ್ವರ(ಸಂಧ್ಯಾ ಕಾಲದ ಏರುವಿಕೆ),ರಾತ್ರಿ ಬೆವರುವುದು ,ತೂಕ

ಕಡಿಮೆಯಾಗುವುದು ,ಕೆಮ್ಮು ಇದರ ಲಕ್ಷಣಗಳು

                


ಇನ್ನು ಈ ಕಾಯಿಲೆ  ಮೆದುಳಿನಿಂದ ಕಾಲಿನ ವರೆಗೆ ಯಾವ ಅಂಗವನ್ನೂ 

ಭಾದಿಸ ಬಲ್ಲದು .ಮೆದುಳಿನ ಕ್ಷಯ ,ಎಲುಬಿನ ಕ್ಷಯ ,ಗರ್ಭ ಕೋಶದ ಕ್ಷಯ ,

ಮೂತ್ರಪಿಂಡದ ಕ್ಷಯ ಇತ್ಯಾದಿ .

ಕ್ಷಯ ಉಂಟು ಮಾಡುವ ರೋಗಾಣುವಿಗೆ ಮೈಕೋಬ್ಯಾಕ್ಟೀರಿಯಮ್ 

ಟ್ಯೂಬರ್ಕ್ಯುಲೋಸಿಸ್ ಎನ್ನುವರು .ಇದಕ್ಕೆ ಬಣ್ಣ ಹಾಕಿ ಆಮ್ಲದಿಂದ ತೊಳೆದರೂ 

ಅದು ವಿವರ್ಣವಾಗದು.ಅದಕ್ಕೆ  ಆಸಿಡ್ ಫಾಸ್ಟ್ ಬಾ ಸಿಲ್ಲೈ (A F B)ಎನ್ನುವರು .

ಮೇಲಿನ ಚಿತ್ರದಲ್ಲಿ ಕೆಂಪು ತುಣುಕುಗಳಾಗಿ ಕಾಣುವುದು ಕ್ಷಯದ  ರೋಗಾಣು .

ಕ್ಷಯ ರೋಗಕ್ಕೆ ಒಳ್ಳೆಯ ಔಷಧಗಳಿವೆ .ಉಚಿತವಾಗಿ ಸಿಗುತ್ತವೆ ,ಸರಕಾರದ

ಡಾಟ್ಸ್ (Directly observed treatment short course ) ಜಾಗತಿಕ 

ಅರೋಗ್ಯ ಸಂಸ್ಥೆ ಹಮ್ಮಿಕೊಂಡ  ಮಹತ್ವಾಕಾಂಕ್ಷೆಯ ಕಾರ್ಯಕ್ರಮ.ಇದರ 

ಮೂಲಕ  ಉಚಿತ ಕಫ ಪರೀಕ್ಷೆ ಮತ್ತು  ಮನೆ ಬಾಗಿಲಿಗೆ  ಚಿಕಿತ್ಸೆ 

 ಒದಗಿಸಲಾಗುವುದು .

ಹಿಂದೆ  ಈ ರೋಗಕ್ಕೆ ಚಿಕಿತ್ಸೆ ಇರಲಿಲ್ಲ್ಲ .ಆಗ ಗುಹಾವಾಸ ಚಿಕಿತ್ಸೆ .ಎದೆಯನ್ನು 

ಕೊರೆದು  ಕೃತಕ  ವಾಯು ವಕ್ಷ ಚಿಕಿತ್ಸೆ ಇತ್ಯಾದಿ ಮಾಡುತ್ತಿದ್ದರು .

ಕವಿ ಕೀಟ್ಸ್ ,ಕಮಲಾ ನೆಹರು ,ರೂಸ್ವೆಲ್ಟ್ ಅವರ ಪತ್ನಿ , ನೆಲ್ಸನ್ ಮಂಡೇಲಾ 

ಡೆಸ್ಮಂಡ್ ಟುಟು ,ಅಮಿತಾಭ್ ಬಚನ್ ಇಂತಹ ಮಹಾನುಭಾವರೆಲ್ಲಾ 

ಈ ಕಾಯಿಲೆಯಿಂದ ಬಳಲಿದವರು .

ಏಡ್ಸ್ ರೋಗಿಗಳಲ್ಲಿ  ರೋಗ ನಿರೋಧಕ ಶಕ್ತಿ ಕಮ್ಮಿ ಇರುವುದರಿಂದ ಇದಕ್ಕೆ 

ಸುಲಭವಾಗಿ ತುತ್ತಾಗುವರು .

ಕ್ಷಯ  ಸಂಪೂರ್ಣ ಗುಣ ವಾಗುವ ಕಾಯಿಲೆ .ಇದರ ಬಗ್ಗೆ ತಪ್ಪು ಕಲ್ಪನೆ ಸಲ್ಲ

(ಚಿತ್ರಗಳ ಮೂಲಗಳಿಗೆ ಅಭಾರಿ )

1 ಕಾಮೆಂಟ್‌: