ಬೆಂಬಲಿಗರು

ಸೋಮವಾರ, ಜುಲೈ 6, 2015

ಮಂಡೂಕ ಪುರಾಣವು

ಇದು ಮ೦ಡುಕೊಪನಿಷತ್ ಬಗ್ಗೆ ಅಲ್ಲ .ಮಂಡೂ'ಕ ಕ್ಕೂ  ಈ ಉಪನಿಷದ್ ಗೂ 

ಸಂಬಂಧ  ವಿರಬಹುದು  ಎಂದು ಕೆಲವು ತಿಳಿದವರು ಹೇಳುವರು .

      ಹೊರ ಜಗತ್ತಿನ ಜ್ಞಾನ ಕಮ್ಮಿ ಇರುವವರನ್ನು ಕೂಪ ಮಂಡೂಕ ಎನ್ನುವರು .

ವಿಶಾಲ ಅರ್ಥದಲ್ಲಿ ನೋಡಿದರೆ ನಾವೆಲ್ಲಾ ಈ ವರ್ಗದಲ್ಲಿ ಬರುವವರು .ಕಡಿಮೆ 

ಪಕ್ಷ ಬಾವಿಯೊಳಗೆ ಇರುವ ಜೀವಿಗಳು ,ಬಾವಿಯ ಹೊರಗೆ ಇರುವ ವಾತಾವರಣ 

ಇವುಗಳ ಬಗ್ಗೆ ನಮಗಿಂತ ಹೆಚ್ಚು  ಕಪ್ಪೆಗಳಿಗೆ ಜ್ಞಾನ ಇರ ಬಹುದು .

                         

ಕಪ್ಪೆಗಳು  ನಮ್ಮ ಹಾಗೆ ಕಶೇರುಕ ಪ್ರಾಣಿಗಳು .ನೀರಲ್ಲಾದರು  ಹಾಕು 

ನೆಲದಲ್ಲಾದರು ಹಾಕು  ಅವು ಬದುಕ ಬಲ್ಲವು .ಅದಕ್ಕೆ ಅವುಗಳನ್ನು 

ಅಮ್ಪಿಬಿಯನ್ ಎನ್ನುವರು .ಯಾವ ಪಕ್ಷ ಸೇರಿದರೂ ಅಧಿಕಾರದಲ್ಲಿ 

ಇರುವ ರಾಜಕಾರಿಣಿಯಂತೆ .  ಅವು  ಶೀತ ರಕ್ತ ಪ್ರಾಣಿಗಳು .ಎಂದರೆ 

ವಾತಾವರಣದ  ಉಷ್ಟತೆ  ಅವುಗಳ ಶರೀರದ ತಾಪ .ಮನುಷ್ಯರಲ್ಲಿ 

ಹಾಗೆ ಅಲ್ಲ ,ಅದಕ್ಕೇ ನಾವು ಉಷ್ಣ  ರಕ್ತ ಪ್ರಾಣಿಗಳು .


ಮಳೆಗಾಲದಲ್ಲಿ ಕಪ್ಪೆಗಳ ವಟ ಗುಟ್ಟುವಿಕೆ ಶ್ರುತಿ ಭದ್ದವಾಗಿ ಕೇಳುವುದು .

ಹಳ್ಳಿ ದಾರಿಗಳಲ್ಲ್ಲಿ  ರಾತ್ರಿ ಸಂಚರಿಸುವಾಗ ಏಕ ತಾನತೆ ,ಶೂನ್ಯತೆ 

ನಿವಾರಿಸುವುದರಲ್ಲಿ  ಈ ಸಂಗೀತ ಮತ್ತು ಜೀರುಂಡೆಗಳ  ಹಿಮ್ಮೇಳ  ಸಹಾಯಕಾರಿ .

ಇವು ಹಾಡುವುದು ನಮಗಾಗಿ ಅಲ್ಲ .ತಮ್ಮ ಪ್ರಿಯತಮೆಯಯರನ್ನು 

ಪ್ರೀತಿಯಾ ತೋರೆಯಾ ಎಂದು ಕೂಗುವ ಹಾಡು ,ಗಂಡು ಕಪ್ಪೆಗಳ 

ಸ್ವರದ ಮಾಧುರ್ಯ  ಮತ್ತು  ಗಡಸು ತನ ಕೇಳಿ ಹೆಣ್ಣು ಕಪ್ಪೆಗಳು 

ತಮ್ಮ ಸಂಗಾತಿಯನ್ನು ಆರಿಸುವವು .ಸೌಂದರ್ಯ ನೋಡಿ ಅಲ್ಲ .


ನಾವು ಪ್ರಥಮ ಎಂ ಬಿ ಬಿ ಎಸ್  ಪಿಸಿಯೋಲಜಿ   ಪ್ರಯೋಗ 

ತರಗತಿಯಲ್ಲಿ ಜೀವಂತ ಕಪ್ಪೆಯನ್ನು ನಮ್ಮ ಕೈಗೆ ಕೊಡೋರು .ಒಲ್ಲದ 

ಕಟುಕ ರಂತೆ   ವಿಲವಿಲ  ಒದ್ದಾಡುತ್ತಿರುವ  ಬಡಪಾಯಿಯ ಹಿಂದಲೆ ಮತ್ತು ಕುತ್ತಿಗೆ 

ನಡುವೆ  ಸೂಜಿ ತೂರಿ  ಪ್ರಜ್ಞೆ ತಪ್ಪಿಸುತ್ತಿದ್ದೆವು .ನನ್ನ ಸುದೀರ್ಘ ವೈದ್ಯಕೀಯ 

ಜೀವನದಲ್ಲಿ   ಸಂಕಟ ಉಂಟು ಮಾಡಿದ  ನೆನಪಿಸಲು ಇಷ್ಟ ಇಲ್ಲದ ವಿಚಾರ ಇದು .

ಮೇಲೆ ಕಾಣಿಸದ  ಉಪಕರಣಕ್ಕೆ  ಅಬ್ಹೊಧಾವಸ್ಥೆಯಲ್ಲಿರುವ  ಕಪ್ಪೆಯನ್ನು 

ಸೇರಿಸಿ  ಅದರ ಮೇಲೆ ಪ್ರಯೋಗ ನಡೆಸುವುದು .ಅದರ ಮಾಂಸ ಖಂಡಗಳಿಗೆ 

ವಿದ್ಯುತ್ತು ಮತ್ತು ಔಷಧಿ ರೂಪದ ಪ್ರಚೋದನೆ ಕೊಟ್ಟು  ಅಧ್ಯಯನ ಮಾಡುತ್ತಿದ್ದೆವು .

ಚಿತ್ರದಲ್ಲಿ ಕಾಣುವ ಡ್ರಮ್ ಗೆ ಮಸಿ ಹಚ್ಚುತ್ತಿದ್ದರು .ಅದು ನಮ್ಮ ಬಿಳಿ 

ಏಪ್ರಾನ್ ಗೆ ಹಿಡಿದು  ಉರಿಯದ ಕಟ್ಟಿಗೆ ಯ ಅಡಿಗೆ ಮನೆಯಿಂದ  ಬಂದವರಂತೆ 

ಕಾಣಿಸುತ್ತಿದ್ದೆವು .

ಕಪ್ಪೆ  ಸಂಗೀತ  ಗೋಷ್ಠಿ ಗೂ ಮಳೆ  ಬೀಳುವುದಕ್ಕೂ ಸಂಬಂಧ ವಿಲ್ಲ.ಮಳೆಗಾಲದಲ್ಲಿ

ಸಂಗಾತಿಗಾಗಿ ಗಂಡು ಕಪ್ಪೆಗಳು ಕೂಗುತ್ತವೆ ಅಷ್ಟೇ .ಬರಗಾಲ ನೀಗಲು

ದೇಶದ ಕೆಲ ಭಾಗಗಳಲ್ಲಿ  ಮಂಡೂಕ ವಿವಾಹ ಏರ್ಪಡಿಸುವ   ಪದ್ಡತಿ 

ಆಚರಣೆಯಲ್ಲಿದೆ 




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ