ಬೆಂಬಲಿಗರು

ಬುಧವಾರ, ಜುಲೈ 8, 2015

ನಿಮ್ಮ ಮಕ್ಕಳು ನಿಮ್ಮವಲ್ಲ ಖಲೀಲ್ ಗಿಬ್ರಾನ್

ಲೆಬನೀಸ್ ಸಂಜಾತ ಕವಿ ಖಲೀಲ್ ಗಿಬ್ರಾನ್ ವಿಕಿಪೀಡಿಯ ದ  ಪ್ರಕಾರ 

 ಷೇಕ್ಸ್ಪಿಯರ್ ,ಚೈನೀಸ್ ಕವಿ ಲವೊಜಿ ಬಿಟ್ಟರೆ ಜಗತ್ತಿನ ಮೂರನೆ ಜನಪ್ರಿಯ ಕವಿ .

ಆತ ಮಕ್ಕಳ ಬಗ್ಗೆ ಒಂದು ಕವಿತೆ ಬರೆದಿರುವನು .ಬಹಳ ಅರ್ಥಪೂರ್ಣವಾದುದು .

ಅದರ ಭಾವಾನುವಾದ ಹೀಗಿದೆ .

ನಿಮ್ಮ ಮಕ್ಕಳೆನ್ನುವಿರಲ್ಲ  ಅವು ನಿಮ್ಮವಲ್ಲ 

ಅವು ಜೀವಸೆಲೆಯ ಜೀವಿತದಾಶಯದ ಕುಡಿಗಳು 

ನಿಮ್ಮ ಮೂಲಕ ಬಂದುವು ನಿಮ್ಮಿಂದಲಲ್ಲ

ನಿಮ್ಮೊಡನಿದ್ದರೂ ನಿಮ್ಮವಲ್ಲ .

ನೀವು ಅವರಿಗೆ ನಿಮ್ಮ ಪ್ರೀತಿ ಕೊಡಿರಿ ನಿಮ್ಮ  ಆಲೋಚನೆಗಳನ್ನಲ್ಲ

ಯಾಕೆಂದರೆ  ಅವರಿಗೆ ಇವೆ ಸ್ವಂತ ಆಲೋಚನೆ ಗಳು

ಅವರ ಶರೀರಕ್ಕೆ ನೀವು  ಕೊಡ ಬಲ್ಲಿರಿ ಆಶ್ರಯ ಅವರ ಆತ್ಮಕ್ಕಲ್ಲ 

ಯಾಕೆಂದರೆ ಅವರ ಆತ್ಮಗಳಿಗೆ ನಾಳೆ ಅವರ ಶರೀರವೇ ಮನೆ 

ನಿಮ್ಮ ಕನಸಲ್ಲ್ಲೂ ಅವನ್ನು ನೀವು ದರ್ಶಿಸಲಾರಿರಿ 

ಅವರಂತೆ ನೀವಾಗುವ ಯತ್ನ ಮಾಡಿ ಅಡ್ಡಿಯಿಲ್ಲ 

ನಿಮ್ಮಂತೆ ಅವರಗಾಗ ಬೇಕೆನ್ನದಿರಿ 

ಜೀವನ ಗಾಲಿ ಹಿಂತಿರುಗದು ,ನಿನ್ನೆಯೊಡನೆ ತಂಗದು.

ಮಕ್ಕಳೆಂಬ ಜೀವಂತ ಬಾಣ  ಬಿಡುವ ಬಿಲ್ಲುಗಳು ನೀವು 

ಬಿಲ್ಲುಗಾರ ನಿರ್ಧರಿಪ ಬಾಣದ ಅನಂತ ಮಾರ್ಗ 

ತನ್ನ ಬಾಣ   ದೂರ ವೇಗದಿ ಪೋಗೆ 

ತನ್ನ ಶಕ್ತಿಯಿಂದ ಬಿಲ್ಲು ಬಗ್ಗಿಸುತ .

ಬಾಣ  ಮಾರ್ಗಪಿದ ಕಂಡು ,ಶಕ್ತ ಬಿಲ್ಲನು 

ಕಂಡು ಅವನು ಪಡಲಿ ಹರುಷ 

ಅವನ ಹಸ್ತದಿ ಬಾಗಿಪುದು ನಿನಗೆ  ಸಂತಸ .



ಈ ಕವನ ಪ್ರಸಿದ್ದ ವಾದುದು . ಎಲ್ ಕೆ ಅಡ್ವಾಣಿ  ತಮ್ಮ ಜೀವನ ಚರಿತ್ರೆಯಲ್ಲಿ 

ಮಕ್ಕಳ ಬಗ್ಗೆ ಬರೆಯುವಾಗ ಇದನ್ನು ಜ್ಞಾಪಿಸಿ ಕೊಳ್ಳುತ್ತಾರೆ .

ಇತ್ತೀಚಿಗೆ  ಬಿಡುಗಡೆಯಾದ  ಖ್ಯಾತ ಲೇಖಕ  ಅಮಿಶ್ ತ್ರಿಪಾಟಿ ತಮ್ಮ  ಪುಸ್ತಕ 

ಸಯಾನ್ ಆಫ್ ಇಕ್ಷ್ವಾಕು  ವನ್ನು ತನ್ನ ಹೆತ್ತವರಿಗೆ  ಅರ್ಪಿಸುವಾಗ  ಬಾಣ ರೂಪದ 

ತನ್ನ  ಚಲನೆಗೆ ವೇಗ ಮತ್ತು ಶಕ್ತಿ ಕೊಡಲು   ಬಾಗಿದ  ಬಿಲ್ಲುಗಳಿಗೆ ಎಂದು 

ಬರೆದು ಕೊಂಡಿದ್ದಾರೆ 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ