ಮಿತ್ರರೇ ಮೇಲಿನ ಚಿತ್ರ ಐನ್ ಸ್ಟೀನ್ ನಂತರದ ಅತೀ ಶ್ರೇಷ್ಠ ಭೌತ ವಿಜ್ಞಾನಿ
ಎಂದು ಪರಿಗಣಿಸಲ್ಪಡುವ ಸ್ಟಿಫಾನ್ ಹಾಕಿಂಗ್ .ಖ್ಯಾತ ಖಗೋಳ ಶಾಸ್ತ್ರಜ್ಞ ಕೂಡ .
ಆದರೆ ಇವರ ಸಾಧನೆ ಅದ್ಭುತ .ಇವರ ಇಪ್ಪತ್ತೊಂದನೆ ವಯಸ್ಸಿನಲ್ಲಿ ಮೋಟಾರ್
ನ್ಯುರೋನ್ ಕಾಯಿಲೆ ಇದೆಯೆಂದು ಪತ್ತೆ ಹಚ್ಚಿದ ವೈದ್ಯರು ಚಿಕಿತ್ಸೆ ಇಲ್ಲದ ಕಾಯಿಲೆ
ಆದುದರಿಂದ ಕೆಲವೇ ತಿಂಗಳ ಆಯುಸ್ಸು ಎಂದು ಹೇಳಿದರು .ಅದರ ನಂತರವೇ
ಪದವಿ ,ಮದುವೆ ಮತ್ತು ಸಂಶೋಧನೆ .೫೩ ಸಂವತ್ಸರಗಳು ಕಳೆದಿವೆ ,
ಸಾಧನೆಗಳ ಸರ ಮಾಲೆ ಇವರ ಕಿರೀಟಕ್ಕೆ ಸೇರಿವೆ .
ಈತನ್ಮಧ್ಯೆ ಇವರ ಕಾಯಿಲೆ ಏರುತ್ತಲೇ ಹೋಯಿತು ,ಶರೀರದ ಮಾಂಸ ಖಂಡ
ಗಳು ಶಿಥಿಲ ವಾಗುತ್ತಾ ಹೋದುವು .ಕೈ ಕಾಲು ಸಂಪೂರ್ಣ ನಿಷ್ಕ್ರಿಯವಾದುವು .
ಉಸಿರಾಟ ಕಷ್ಟವಾಗಿ ಶ್ವಾಸ ನಾಳದಲ್ಲಿ ರಂಧ್ರ ಮಾಡಬೇಕಾಗಿ ಬಂತು ,ಇದರಿಂದ
ಸ್ವರ ಬಿದ್ದು ಹೋಯಿತು .ಕೆಲವೊಮ್ಮೆ ಕೃತಕ ಉಸಿರಾಟ ಯಂತ್ರದ ಮೊರೆ ಹೋಗ
ಬೇಕಾಯಿತು .ಆದರೂ ಬಿಡಲಿಲ್ಲ .ಕಣ್ಣು ಸಂಜ್ಞೆಯನ್ನೇ ಮಾತಾಗಿಸುವ ತಂತ್ರಾಂಶ
ವನ್ನು ಬಳಸಿ ಕಂಪ್ಯೂಟರ್ ಮೂಲಕ ಸಂವಹನ .ಬರವಣಿಗೆ ಪುಸ್ತಕ ಪ್ರಕಾಶನ .
ಸಂಶೋಧನೆ ,ಆಸ್ಟ್ರೇಲಿಯಾ ಹೊರತು ಪಡಿಸಿ ಎಲ್ಲಾ (ಅಂಟಾರ್ಟಿಕಾ ಸೇರಿ )
ಖಂಡ ಗಳಲ್ಲಿ ಸಂಚಾರ ,ಭಾಷಣ .(ಇವರು ಸಂಪೂರ್ಣ ಗಾಲಿ ಕುರ್ಚಿ
ಅವಲಂಬಿತ ). ಇವರ ಸಹಾಯಕ್ಕೆ ಒಬ್ಬರು ದಾದಿ.ಎರಡು ಭಾರಿ ವಿವಾಹ ವಾದ
ಇವರು ಈಗ ಏಕಾಂಗಿ .
ಇವರ ತಂದೆ ವೈದ್ಯರಾಗಿ ಭಾರತದಲ್ಲಿ ಕೆಲವು ವರುಷ ಸೇವೆ ಸಲ್ಲಿಸಿದ್ದುದರಿಂದ
ರಜೆಯಲ್ಲಿ ಇಲ್ಲಿಗೆ ಬಂದ ನೆನಪುಗಳನ್ನು ತನ್ನ ಜೀವನ ಚರಿತ್ರೆಯಲ್ಲಿ
ಉಲ್ಲೇಖಿಸಿದ್ದಾರೆ.ಹೆಸರಾಂತ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ೩೦ ವರ್ಷ ಗಣಿತ
ದ ಪ್ರಾಧ್ಯಾಪಕರಾಗಿ ಸೇವೆ. ಎ ಬ್ರೀಫ್ ಹಿಸ್ಟರಿ ಆಫ್ ಟೈಮ್ ಇವರ ಪ್ರಸಿದ್ಧ
ಕೃತಿ .ಖಗೋಳಶಾಸ್ತ್ರದಲ್ಲಿ ಕಪ್ಪು ರಂಧ್ರ ಗಳ ಬಗ್ಗೆ ಇವರ ಸಂಶೋಧನೆ
ವಿಜ್ಞಾನ ಲೋಕದಲ್ಲಿ ಸರ್ವ ಮಾನ್ಯ .
ಛಲದಂಕ ಮಲ್ಲ ಎಂದರೆ ಇನ್ನಾರು ?ತಮ್ಮ ಶಾರೀರಿಕ ಕಾಯಿಲೆಗೆ
ದೃತಿಗೆಡದೆ ಕಾಲ ಕಾಲಕ್ಕೆ ವಿಜ್ಞಾನದ ಸಹಾಯದಿಂದ ಊನತೆಯನ್ನು ಮೀರಿ
ಮತ್ತೆ ವಿಜ್ಞಾನಕ್ಕೆ ಅಮೂಲ್ಯ ಕೊಡುಗೆ ಕೊಡುತ್ತಿದ್ದಾರೆ.
Brief history of Stephen Hawking😀😀🙏🙏🙏🙏🙏
ಪ್ರತ್ಯುತ್ತರಅಳಿಸಿThank you Wani sir
ಪ್ರತ್ಯುತ್ತರಅಳಿಸಿ