ಬೆಂಬಲಿಗರು

ಬುಧವಾರ, ಡಿಸೆಂಬರ್ 2, 2020

ಆಸ್ಪತ್ರೆಯಲ್ಲಿ ಆಹಾರ

  ಆಸ್ಪತ್ರೆಯಲ್ಲಿ ಅಡ್ಮಿಟ್ ಆದರೆ ತಿನ್ನಲು ಬ್ರೆಡ್ ಕೊಡಬೇಕೆಂಬ ಒಂದು ನಂಬಿಕೆ ಇದೆ .ಇದು ಯಾಕೆ ಬಂತು ?ಬ್ರೆಡ್ ನಮ್ಮ ಆಹಾರ ಅಲ್ಲ .ಬ್ರಿಟಿಷರು ಆಡಳಿತ ನಡೆಸುತ್ತಿದ್ದಾಗ ಅವರ ಮುಖ್ಯ ಆಹಾರ ಬ್ರೆಡ್ ಆಸ್ಪತ್ರೆಯ ರೋಗಿಗಳಿಗೂ ಕೊಡಲು ಆರಂಬಿಸಿರಬೇಕು .ಬಹಳ ಮಂದಿಗೆ ಬ್ರೆಡ್ ತಯಾರಿಸಿ ಹಂಚುವುದು ಸುಲಭ .ನಿಮಗೆ ತಿಳಿದಿರುವಂತೆ  ಮೈದಾ ದಿಂದ ತಯಾರಿಸಿದ ಬ್ರೆಡ್ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ ಮತ್ತು ನಮ್ಮವರ ಕರುಳಿಗೆ ಅದು ಒಗ್ಗ ಬೇಕೆಂದು ಇಲ್ಲ.ಬ್ರೆಡ್ ಗೆ ಇತ್ತೀಚೆಗೆ ವಿಟಮಿನ್ ಇತ್ಯಾದಿಗಳನ್ನು ಸೇರಿಸ ತೊಡಗಿರುವರು .ಆದರೆ ನಾಲ್ಕೈದು ದಿನಕ್ಕೆ ಅದನ್ನು ಕೊಟ್ಟು ಆಗುವುದು ಹೋಗುವುದು ಏನೂ ಇಲ್ಲ .ಬ್ರೆಡ್ ಸಾಮಾನ್ಯವಾಗಿ ಮೈದಾ ದಿಂದ ಮಾಡುವುದು .ಇದರಲ್ಲಿ ಸಂಸ್ಕರಿತ ಗೋಧಿ ಮಾತ್ರ ಇರುವುದು .ಅಕ್ಕಿ ಮತ್ತು ಗೋಧಿ ಏಕದಳ ಧಾನ್ಯಗಳು .ಇವುಗಳಲ್ಲಿ  ಇರುವ ಆಹಾರ ಅಂಶಗಳು ಸಾಮಾನ್ಯ ಒಂದೇ ತರಹ ಇರುತ್ತದೆ .

ಬ್ರೆಡ್ ಬದಲಿಗೆ ತಿಂಡಿ ಇಡ್ಲಿ ಕೊಡ ಬಹುದು .ಇದು ಎಲ್ಲರ ಹೊಟ್ಟೆಗೂ ಪರಿಚಿತ ಖಾದ್ಯ .ಇದನ್ನು ಆವಿಯಲ್ಲಿ ಬೇಯಿಸುವುದರಿಂದ ರೋಗಾಣು ಇರಲಾರವು .ಅಕ್ಕಿ ಯಲ್ಲಿ ಪಿಷ್ಟ ಮತ್ತು ಉದ್ದಿನಲ್ಲಿ ಸಸಾರಜನಕ ಇರುವುದರಿಂದ ಹೆಚ್ಚು ಸಮ ತೂಲ.

ಇನ್ನು ಹಣ್ಣು ಕೊಡುವಾಗ ರೋಗಿಗೆ ಹಣ್ಣು ವರ್ಜ್ಯವೋ ಎಂದು ತಿಳಿದು  ಕೊಳ್ಳ ಬೇಕು .ಮೂತ್ರ ಪಿಂಡ ವೈಫಲ್ಯ ಇರುವ ರೋಗಿಗಳಲ್ಲಿ ಕೆಲವರಿಗೆ ಕೊಡ ಬಾರದು .ಸಕ್ಕರೆ ಕಾಯಿಲೆ ಇರುವವರಿಗೆ ಮಿತ ವಾಗಿ ಕೊಡಬೇಕು .ಹಣ್ಣಿನ ರಸಕ್ಕಿಂತ ಇಡೀ ಹಣ್ಣು ಉತ್ತಮ .ಹಣ್ಣಿನ ನಾರೂ ಕರುಳಿನ ಸುಲಲಿತ ಚಲನೆಗೆ ಒಳ್ಳೆಯದು .ತಿನ್ನಲು ಕುಡಿಯಲು ಆಗದಷ್ಟು ಅಶಕ್ತಿ ಇರುವವರಿಗೆ ಮಾತ್ರ ಜೂಸ್ ಮಾಡಿ ಕೊಡುವುದು .

                ಇನ್ನು ಬಹಳ ಮಂದಿ ತುಂಬಾ ಹಣ ಕೊಟ್ಟು ಖರೀದಿ ಮಾಡಿ ಅದನ್ನು ಪ್ಲಾಸ್ಟಿಕ್ ತೊಟ್ಟೆಯಲ್ಲಿ ತುಂಬಿಸಿ ಎಳನೀರು ತರುವರು .ಎಳನೀರು ನೇರ ಕುಡಿಯಲು ಶುದ್ದ ಪಾನೀಯ ನಿಜ. ಅದನ್ನುಶೇಖರಿಸುವ ಸ್ಥಳ ,ಕೆತ್ತಲು ಉಪಯೋಗಿಸುವ ಮಚ್ಚು ಎಷ್ಟು ಶುಭ್ರ ವಾಗಿ ಇವೆ ಎಂಬುದನ್ನು ಗಮನಿಸ ಬೇಕು .ಆದರೆ ಜನರು ತಿಳಿದು ಕೊಂಡಂತೆ ಅದರಲ್ಲಿ  ಅತೀ ವಿಶೇಷ ಪೋಷಕಾಂಶ ಏನೂ  ಇದ್ದಂತಿಲ್ಲ .ನೀರು ,ಸ್ವಲ್ಪ ಗ್ಲುಕೋಸ್ ,,ಲವಣಗಳು ಅದರಲ್ಲೂ ಪೋಟಸಿಯಮ್ ಇದೆ .ಇದರ ಬದಲಿಗೆ ಶುದ್ದ ನೀರಿನಲ್ಲಿ ಶರಬತ್ ಮಾಡಿ ಕೊಡ ಬಹುದು .

ಜಾಂಡಿಸ್ ಇರುವವರಿಗೆ ಕಬ್ಬಿನ ಹಾಲು ಕೊಡುವರು ,ಅದರ ಶೇಖರಣಾ ಸ್ಥಳದಲ್ಲಿ ನೈರ್ಮಲ್ಯ ಇಲ್ಲದಿದ್ದಲ್ಲಿ  ಬೇರೆ ರೋಗಕ್ಕೆ ಆಹ್ವಾನ .ಲಿವರ್ ನಮ್ಮ ಶರೀರದ ಗ್ಲುಕೋಸ್ ಫ್ಯಾಕ್ಟರೀ .ಆದುದರಿಂದ ಅದರ ಕೊರತೆ ಆಗದಿರಲಿ ಎಂದು ಇದನ್ನು ಕೊಡುವ ಕ್ರಮ ಆರಂಭ ಆಗಿರ ಬೇಕು .ಅದರ ಬದಲಿಗೆ ಸಕ್ಕರೆ ಪಾನಕ ಕೊಡ ಬಹುದು .

ಇನ್ನು  ಶೀತ ಜ್ವರ ಇರುವಾಗ ಹಣ್ಣು ಕೊಡಲು ಹೆದರುವರು .ಶೀತ ಕೆಮ್ಮು ದಮ್ಮು ಹೆಚ್ಕುವುದು ಎಂಬ ನಂಬಿಕೆ .ಇದು ಬಹಳಷ್ಟು ಸರಿಯಲ್ಲ .

ಡೆಂಗು ಜ್ವರಕ್ಕೆ ಪಪ್ಪಾಯಿ ಹಣ್ಣು ಅಥವಾ ಬಹಳ ಬೆಲೆಯಿರುವ ಕಿವಿ ಹಣ್ಣು ಆಗ ಬೇಕು ಎಂದು ಇಲ್ಲ .ಯಾವ  ಹಣ್ಣೂ  ಆಗಬಹುದು

 

 

 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ