ನಮ್ಮ ಭಾಗದಲ್ಲಿ ಊಟಕ್ಕೆ ಕುಚ್ಚಲು ಅಕ್ಕಿ ಬಳಸುವರು .ಮದುವೆ ಸಮಾರಂಭಗಳಲ್ಲಿ ಬಿಳಿ ಅಕ್ಕಿ
ಅಥವಾ ಬೆಳ್ತಿಗೆ ಅಕ್ಕಿ ಉಪಯೋಗಿಸುವ ವಾಡಿಕೆ .ಆರೋಗ್ಯಕ್ಕೆ ಕುಚ್ಚಲು ಅಥವಾ ಕುಸುಬುಲು ಅಕ್ಕಿ
ಉತ್ತಮ .ಇದು ಬೇಯಲು ಹೆಚ್ಚು ಸಮಯ ತೆಗೆದು ಕೊಳ್ಳುವುದು .ಇದು ವರ್ಣ ಭೇದ ನೀತಿಯೋ ಶಾಸ್ತ್ರ ಬದ್ದವೋ ಅಲ್ಲ ,ಅನುಕೂಲ ಶಾಸ್ತ್ರ
ಬಹಳ ಮಂದಿ ಸಮಾರಂಭಗಳಲ್ಲಿ ಅಥವ ದೇವಸ್ಥಾನದಲ್ಲಿ ಊಟ ಮಾಡಿದ ಮೇಲೆ
ನೀರಡಿಕೆ ಜಾಸ್ತಿ ,ಹೊಟ್ಟೆ ಉರಿ ಆರಂಭವಾಗಿದೆ .ಇದಕ್ಕೆ ಬೆಳ್ತಿಗೆ ಅಕ್ಕಿ ಊಟ ಕಾರಣ ಎಂದು
ಆರೋಪಿಸುವರು .ಇದು ಸರಿ ಎಂದು ಕಾಣುವುದಿಲ್ಲ .ಮದುವೆ ಮುಂಜಿ ಔತಣ ಊಟದಲ್ಲಿ ಹೆಚ್ಚು
ವ್ಯಂಜನ ಗಳು ಇರುತ್ತವೆ .ದಿನ ನಿತ್ಯ ಮನೆ ಊಟಕ್ಕೆ ಒಂದು ಪಲ್ಯ ,ಒಂದು ಸಾಂಭಾರ್ ಇದ್ದರೆ
ಔತಣ ಊಟಕ್ಕೆಹಲವು ಪಲ್ಯ ,ಸಾರು ,ಸಾಂಭಾರ್ ಇತ್ಯಾದಿ ಇರುತ್ತವೆ .ಸಹಜವಾಗಿ ಹೆಚ್ಚುಉಪ್ಪು
ಮತ್ತು ಖಾರ ಹೊಟ್ಟೆ ಸೇರುತ್ತದೆ .ಇದರಿಂದ ಹೊಟ್ಟೆ ಉರಿ ಮತ್ತು ನೀರಡಿಕೆ ಉಂಟಾಗುವುದು .
ಜತೆಗೆ ಪಾಯಸ ಸಿಹಿ ತಿಂಡಿ ಗಳ ಸಕ್ಕರೆ ಯೂ ರಕ್ತಸೇರುತ್ತದೆ .ಉಪ್ಪು ಮತ್ತು ಸಕ್ಕರೆ ರಕ್ತದ
ಸಾಂದ್ರತೆ ಹೆಚ್ಚಿಸುವವು .ಹೆಚ್ಚಿದ ಸಾಂದ್ರತೆಯ ರಕ್ತ ಮೆದುಳಿನಲ್ಲಿ ಬಾಯಾ ರಿಕೆ ಉಂಟುಮಾಡುವ
ಕೇಂದ್ರವನ್ನುಪ್ರಚೋದಿಸಿ ನೀರು ಕುಡಿಯುವಂತೆ ಮಾಡುವುದು .ನೀರಡಿಕೆ ನಿವಾರಣೆಗೆ ನೀರೇ
ಉತ್ತಮ .ಕಬ್ಬಿಣ ಹಾಲು ,ಹಣ್ಣಿನ ರಸ ರಕ್ತದ ಸಾಂದ್ರತೆ ಹೆಚ್ಚಿಸುವವು . ಅವುಗಳ ಸೇವನೆ
ಬಾಯಾರಿಕೆ ನೀಗುವುದಕ್ಕೆ ಉತ್ತಮ ಮಾರ್ಗ ಅಲ್ಲ .
ನಾವು ಔತಣ ಕೂಟಗಳಲ್ಲಿ ನಿತ್ಯ ದ ಆಹಾರಕ್ಕಿಂತ ಹೆಚ್ಚಿನpಪ್ರಮಾಣದಲ್ಲಿ ತಿನ್ನುವೆವು .
ಇದೇ ಕಾರಣಕ್ಕೆ ಸಕ್ಕರೆ ಕಾಯಿಲೆ ಇರುವವರಿಗೆ ನಿಯಂತ್ರಣ ತಪ್ಪುವುದು ,ಅವರು ಸಿಹಿ ತಿಂಡಿ
ಪಾಯಸ ಸೇವಿಸದಿದ್ದರೂ .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ