ಈ ಕಾಯಿಲೆ ಬಗ್ಗೆ ನನ್ನ ಹಿಂದಿನ ಪೋಸ್ಟ್ ಗಳಲ್ಲಿಬರೆದಿದ್ದೆ . ಈಗ ಡೆಂಗ್ಯು ಸೀಸನ್ ನಮ್ಮ ಊರಲ್ಲಿ
(ದಕ್ಷಿಣ ಕನ್ನಡ )ದಲ್ಲಿ ಕಡಿಮೆ ಆಗುತ್ತಾ ಬಂದಿದೆ .ಈ ವರುಷ ಮಂಗಳೂರು ನಗರ ಪ್ರವೇಶಿಸಿ
ತುಂಬಾ ಆತಂಕ ಉಂಟು ಮಾಡಿದೆ .ಇದು ವರೆಗೆ ಅಲ್ಲಿ ಮಲೇರಿಯ ಜ್ವರದ ಕಾಟ ಮಾತ್ರ
ಇತ್ತು.ಬೆಂಗಳೂರು ಮಂಗಳೂರು ನಂತಹ ನಗರಗಳಿಗೆ ಇಂತಹ ಕಾಯಿಲೆಗಳು ಬಂದರೆ endemic
ಎಂದರೆ ಸರ್ವ ಋತು ವಿನಲ್ಲಿಯೂ ಕಾಡುವ ಸಾಧ್ಯತೆ ಇದೆ .ಹಳ್ಳಿ ಗಳಲ್ಲಿ ಕೆಲವು ತಿಂಗಳು ಮಾತ್ರ
ಇದರ ಹಾವಳಿ ಇರುತ್ತದೆ .
ವರುಷ ವರುಷ ಕಾಯಿಲೆ ಸೀಸನ್ ನಲ್ಲಿ ದೊಡ್ಡ ಸುದ್ದಿಆಗುತ್ತದೆ .ಎಲ್ಲರೂ ಸೊಳ್ಳೆ ಮತ್ತು
ಅರೋಗ್ಯ ಇಲಾಖೆಯನ್ನುಬೈಯುತ್ತಾರೆ .ಆ ಮೇಲೆ ಮರೆಯುತ್ತ್ತಾರೆ . ಪುನರಪಿ ಸ್ಮರಣಂ ಪುನರಪಿ
ಶಪನಂ . ನಮ್ಮ ಹಳ್ಳಿಗಳಲ್ಲಿ ಸೊಳ್ಳೆ ನಿಯಂತ್ರಣ ಕಷ್ಟ .ಮನೆಗಳು ದೂರ ದೂರ ಇರುತ್ತವೆ
.ಮನೆಯ ಎದುರು ತೋಟ ಗದ್ದೆ.ಅಲ್ಲಿ ಮಳೆಗಾಲದಲ್ಲಿ ನೀರು ನಿಲ್ಲದಂತೆ ಮಾಡುವುದು ಅಸಾಧ್ಯ .
ಅರೋಗ್ಯ ಇಲಾಖೆ ಯವರು ಏನು ಮಾಡಿಯಾರು ?ಜನ ಬೈಯುತ್ತಾರೆ ಎಂದು ಫಾಗ್ಗಿಂಗ್ ಮಾಡಿದರೆ
ಅದರ ಪರಿಣಾಮ ಒಂದೆರಡು ದಿನ ಇದ್ದೀತು.ಆದರೆ ನಗರ ಗಳಲ್ಲಿ ನೀರು ನಿಲ್ಲದಂತೆ ಮಾಡುವುದು
ಅಸಾಧ್ಯ ಅಲ್ಲ .ಆದರೆ ಎಲ್ಲರೂ ತಮ್ಮ ಮನೆಗೆ ರೋಗbಬಂದಾಗ ಮಾತ್ರ ಎಚ್ಚೆತ್ತು ಕೊಳ್ಳುತ್ತಾರೆ .
ಡೆಂಗ್ಯು ಕಾಯಿಲೆ ಗೆ ಔಷಧಿ ಇಲ್ಲ . ತನ್ನಿಂದ ತಾನೇ ಅದು ವಾಸಿಯಾಗ ಬೇಕು .ಜ್ರರ
ನೋವಿಗೆ ಪ್ಯಾರಸಿಟಮಾಲ್ ಮಾತ್ರೆ ಅಥವಾ ಇಂಜೆಕ್ಷನ್ ಕೊಡುವರು .
ಈ ಕಾಯಿಲೆಯಲ್ಲಿ ಪ್ಲೇಟ್ ಲೆಟ್ ಎಂಬ ರಕ್ತ ಕಣಗಳು ಕಮ್ಮಿ ಯಾಗುತ್ತವೆ .ಆದರೆ
ಇದಕ್ಕೂ ರೋಗದ ತೀವ್ರತೆಗೂ ನೇರ ಸಂಬಂಧ ಇದ್ದ ಹಾಗೆ ಇಲ್ಲ .ಕಮ್ಮಿಯಾದ ಸಂಖ್ಯೆ ತಾನೇ
ಸರಿಯಾಗುವುದು .ಇದರ ಸಂಖ್ಯೆ ೧೦೦೦೦ ಕ್ಕಿಂತ ಕಮ್ಮಿ ಯಾದರೆ ಅಥವಾ ರಕ್ತ ಸ್ರಾವ ಇದ್ದರೆ
ಪ್ಲೇಟ್ ಲೆಟ್ ಕೊಡುವರು .
ಹಾಗಾದರೆ ಈ ಕಾಯಿಲೆ ತೀವ್ರ ತರ ರೂಪ ಪಡೆಯುವುದು ಹೇಗೆ ? ಕೆಲವೊಂದು
ರೋಗಿಗಳಲ್ಲಿ ಹಠಾತ್ ರಕ್ತದ ಒತ್ತಡ ಕಮ್ಮಿಆಗುವುದು .ಜ್ವರ ಬಿಟ್ಟ ಮೇಲೆಯೂ ಇದು ಅಗ ಬಹುದು
ಇದನ್ನು ಡೆಂಗ್ಯು ಶಾಕ್ ಎನ್ನುವರು . ಅಪರೂಪಕ್ಕೆ ಕೆಲವರಲ್ಲಿ ಕಾಯಿಲೆ ಮೆದುಳಿಗೆ ಬಂದು
ಪ್ರಾಣಾಪಾಯ ಉಂಟಾಗುವುದು .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ