ಮೊನ್ನೆ ನಗರದ ದಂತ ವೈದ್ಯ ಸಂಘದವರ ವರ್ಷದ ಮೊದಲ ಸಭೆಗೆ ಮುಖ್ಯ ಅತಿಥಿಯಾಗಿ ಕರೆದಿದ್ದರು .ದಂತ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಅನುಭವ
ಇದ್ದರೂ ಇಂತಹ ಸಭೆಯಲ್ಲಿ ಮೊದಲ ಭಾರಿ ಭಾಗವಹಿಸುತ್ತಿರುವುದರಿಂದ
ಪ್ರಥಮ ಚುಂಬನದಲ್ಲಿ ದಂತ ಭಗ್ನವಾಗುವ ಒಳ ಭಯ . ಹಾಗೇನಾದರೂ
ಆದಲ್ಲಿ ದಂತ ವೈದ್ಯರೇ ಇದ್ದರಲ್ಲಾ ಎಂಬ ಧೈರ್ಯದಿಂದ ಒಪ್ಪಿಕೊಂಡೆ .ಅಂತೂ ಕಾರ್ಯಕ್ರಮ ಸಾಂಗವಾಗಿ ನೆರವೇರಿತು ಎನ್ನಿ. ದಂತ ವೈದ್ಯರು ,ಪ್ರತಿಭಾ ವಂತರು
ಏಕಕಾಲದಲ್ಲಿ ವಿಜ್ಞಾನಿಗಳೂ ಕಲಾಕಾರರೂ ಆಗಿರಬೇಕಾಗುತ್ತದೆ .
ನನಗೆ ಈ ದಂತ ವೈದ್ಯರ ಮೇಲೆ ಒಂದು ಸಿಟ್ಟು ಇದೆ .ಪರಿಣತ ಹಲ್ಲಿನ
ವೈದ್ಯರಿ0ದಾಗಿ ಚಕ್ಕುಲಿ ಚಿಪ್ಸ್ ಗಳ ಕ್ರಯ ಗಗನಕ್ಕೆ ಏರಿದೆ.ಹಣ್ಣು ಹಣ್ಣು
ಮುದುಕರೂ ಕೃತಕ ಹಲ್ಲುಗಳನ್ನು ಇಟ್ಟು ಇವುಗಳನ್ನು ಸವಿಯ ತೊಡಗಿದ
ಮೇಲೆ ಇವುಗಳನ್ನು ತಯಾರಿಸುವರ ಅದೃಷ್ಟ ಖುಲಾಯಿಸಿದೆ .ಅಲ್ಲದೆ ಅಡಿಕೆಗೆ
ಇಷ್ಟು ಕ್ರಯ ಬರುವಲ್ಲಿ ಹಲ್ಲಿನ ವೈದ್ಯರ ಪಾಲೂ ಗಣನೀಯ ಎಂಬುದನ್ನು
ಮರೆಯ ಬಾರದು .
ಇನ್ನೊಂದು ದೂರು ಈಗ ಪ್ರಾಯವಾದವರು ಕಾಣ ಸಿಗುವುದೇ ಇಲ್ಲ .ದಾಳಿಂಬೆ
ಹಣ್ಣಿನಂತಹ ಕೃತಕ ಹಲ್ಲುಗಳು ಮತ್ತು ಬಣ್ಣ ಹಾಕಿದ ಕೇಶಗಳಿಂದ
ಅಲಂಕೃತರಾಗಿ ಯಾರು ಹಿರಿಯರು ಯಾರು ಕಿರಿಯರು ಎಂದು ಮೇಲ್ನೋಟಕ್ಕೆ
ತಿಳಿಯುವುದಿಲ್ಲ .ಮೊನ್ನೆ ಮನೆಯಲ್ಲಿ ಒಂದು ಧಾರ್ಮಿಕ
ಕಾರ್ಯಕ್ರಮ .ಪುರೋಹಿತರು ಹಿರಿಯಲ್ಲರಿಗೆ ನಮಸ್ಕಾರ ಮಾಡಿ ಬನ್ನಿ
ಎಂದರು .ಸಭೆಯಲ್ಲಿ ನೋಡಿದರೆ ಎಲ್ಲರೂ ಕಿರಿಯರಂತೆ ಕಾಣುತ್ತಾರೆ !ನನ್ನ
ಪೇಚು ಯಾರಿಗೂ ಬೇಡ .
ದೇವಲೋಕದಿಂದ ರಂಭೆ ಉರ್ವಶಿಯರನ್ನು ಭೂಲೋಕದಲ್ಲಿ ತಪಸ್ವಿಯರ
ತಪೋಭಂಗ ಮಾಡಲು ಹೋಗ ಹೇಳಿದಾಗ ಅಲ್ಲಿ ಚಿರಯವ್ವನೆಯರಾದ ತಮಗೆ
ವೃದ್ದಾಪ್ಯ ಬರುವುದನ್ನು ಸಹಿಸಲು ಆಗುವುದಿಲ್ಲ ,ಆದುದರಿಂದ ನಾವು
ಹೋಗಲಾರೆವು ಎಂದು ಅಪ್ಸರೆಯರು ಮುಷ್ಕರ ಹೂಡಿದರಂತೆ.ಅದಕ್ಕೆಂದೇ
ದೇವೆಂದ್ರನು ಅವರ ಸಮಾಧಾನಕ್ಕೆ ದಂತವೈದ್ಯರನ್ನು ಸೃಷ್ಟಿಸಿದನೆಂಬ ದಂತ
ಕತೆಯಿದೆ.
ಕೃತಕ ಹಲ್ಲಿನ ಬಲದಿಂದ ಆ ವಯಸ್ಸಿಗೆ ತಿನ್ನ ಬಾರದ್ದೆನ್ನಲ್ಲ ತಿಂದು ಹೊಟ್ಟೆ
ಬಾಧೆಯಿಂದ ನೆರಳುವವರನ್ನು ಚಿಕಿತ್ಸುವ ಕೆಲಸ ನಮ್ಮ ಮೇಲೆ .!
ಅಜ್ಜ ಅಜ್ಜಿಯರು ನನಗೆ ಹಸಿವೇ ಇಲ್ಲ (ಮೊದಲಿನ ಹಾಗೆ ತಿನ್ನಲು ಆಗುವುದಿಲ್ಲ )
ಎಂದರೆ ದೇವರು ನಮ್ಮ ಶರೀರಕ್ಕೆ ಬೇಕಷ್ಟು ಮಾತ್ರ ತಿನ್ನುವ ಹಸಿವೆ
ಕೊಡುತ್ತಾನೆ .ಅಲ್ಲದೆ ನಿಮಗೆ ಹಸಿವು ಹೆಚ್ಚಿಸುವ ಔಷಧಿ ಕೊಟ್ಟು ನಿಮ್ಮ ಸೊಸೆ
ಮಕ್ಕಳ ಶಾಪ ಕೇಳಬೇಕಾದೀತು .(ಇವರ ಆಹಾರ ಬೇಡಿಕೆ ಈಡೇರಿಸುವರು
ಅವರಲ್ಲವೇ?)ಎಂಬ ಸಿದ್ದ ಉತ್ತರ ಕೊಡುವೆನು . ಅದರಂತೆ ವಯಸ್ಸಾದವರು
ಕಿವಿ ಕೇಳಿಸುವುದಿಲ್ಲ ಎಂದರೆ ಮಕ್ಕಳು ಮೊಮ್ಮಕ್ಕಳು ಬೈಯ್ಯುವುದನ್ನು
ಕೇಳಿಸದಿರಲಿ ಎಂದು ದೇವರೇ ಕೇಳುವ ಶಕ್ತಿ ಕಸಿದುಕೊಂಡು ಉಪಕಾರ
ಮಾಡುತ್ತಾನೆ ಎನ್ನುತ್ತೇನೆ .
ಅಂತೂ ಇಂತೂ ದಂತ ವೈದ್ಯರು ಮತ್ತು ಸೌಂದರ್ಯ ತಜ್ಞ ರಿಂದಾಗಿ ಎನಗಿಂತ
ಹಿರಿಯರಿಲ್ಲ ಎಂದು ಪರಿತಪಿಸುವಂತಾಗಿದ್ದಂತೂ ನಿಜ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ