ವೈರಸ್ ಗಳಲ್ಲಿ ಎರಡು ಜಾತಿ .ಡಿಎನ್ಎ ವೈರಸ್ ಮತ್ತು ಅರ ಏನ್ ಎ ವೈರಸ್ . ಎರಡನೇ ವರ್ಗದಲ್ಲಿ ಅರ್ತ್ಹೋ ಮಿಕ್ಷೊ ವೈರಸ್ ಎಂಬ ಗುಂಪು .ಈ ಗುಂಪಿನಲ್ಲಿ ಆರು ಒಳ ಪಂಗಡ ಗಳು ಇನ್ಫ್ಲುಯೆಂಜಾ ಎ ಬಿ ಸಿ ಮೊದಲ ಮೂರು . ಹೆಸರೇ ಹೇಳುವಂತೆ ಫ್ಲೂ ಉಂಟು ಮಾಡುವ ವೈರಸ್ ಗಳು .
ಈಗ ತಾಂಡವ ಆಡುತ್ತಿರುವ ಏಚ೧ ಎನ೧ ಇನ್ಫ್ಲುಯೆಂಜಾ ಎ ಗುಂಪಿಗೆ ಸೇರಿದ ರೋಗಾಣು . ಎಚ್ ಎಂದರೆ ಹೆಮಗ್ಲುಟಿನಿನ್(Haemaglutinin) -ಎಂದರೆ ಕೆಂಪು ರಕ್ತ ಕಣಗಳನ್ನು ಒಟ್ಟು ಸೇರಿಸಬಲ್ಲ ವಸ್ತು , ಏನ್ ಎಂದರೆ ನ್ಯುರಮಿಡೆಸ್(Nuramidase) ಜೀವ ಕೋಶಗಳನ್ನು ಛೇದಿಸಬಲ್ಲ ಎನ್ ಝಯಿಂ . ಇವೆರಡು ಈ ರೋಗಾಣು ವಿನ ಪ್ರಮುಖ ಅಸ್ತ್ರಗಳು . ಈ ಅಸ್ತ್ರಗಳಲ್ಲಿ
ಆಗಾಗ ವಿನ್ಯಾಸ ಬದಲಾಗುತ್ತ ಇರುತ್ತವೆ .ಇದರಿಂದ ಲೇ H1N1 ,H1N2,H5N1 ಇತ್ಯಾದಿ .
ಈ ವೈರಸ್ ಹಂದಿಗಳಲ್ಲಿ ಸ್ವಾಶಕೋಶದ ಕಾಯಿಲೆ ಉಂಟು ಮಾಡುವುದು .ಕೆಲವೊಮ್ಮೆ ಮನುಷ್ಯನು ಸಿಕ್ಕಿ ಕೊಳ್ಳುವನು ಇದನ್ನು ಹಂದಿ ಜ್ವರ ಎಂದು ಕರೆಯುವರು. ಈ ವೈರಸ್ ನ ಬೇರೆ ಪ್ರಭೇದಗಳು ಹಕ್ಕಿ ಜ್ವರ ,ನಾಯಿ ಜ್ವರ ಮತ್ತು ಕುದುರೆ ಜ್ವರ ಗಳು .ಈ ಹೆಸರುಗಳು ಪ್ರಾಥಮಿಕ ವಾಗಿ ಈ ರೋಗಾಣುಗಳು ಆಕ್ರಮಿಸುವ ಜೀವಿಗಳ ಹೆಸರುಗಳು .ನಡುವೆ ಆಗಾಗ ನರರನ್ನೂ ಕಾಡುವುವು .
೨೦೦೯ ರಲ್ಲಿ ಈ ಜ್ವರವನ್ನು ಖಂಡಾಂತರ (Pandemic) ಘೋಷಿಸಲಾಯಿತು .
ಈ ಫ್ಲೂ ಜ್ವರದ ವೈರಸ್ ಗಳು ಬಹಳ ಬುದ್ಧಿವಂತರು . ಅವು ಆಗಾಗ್ಗೆ ತಮ್ಮ ರಚನೆಯನ್ನು ಬದಲಾಯಿಸಿ ಕೊಳ್ಳುವ ಗೋಸುಂಬೆ ಜಾತಿಯವು .ಇದರಿಂದ ಇವಕ್ಕೆ ಪರಿಣಾಮ ಕಾರಿ ಲಸಿಕೆ ರಚನೆ ಇನ್ನೂ ಮರೀಚಿಕೆ ಯಾಗಿದೆ .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ