ನನ್ನ ಹೆಸರು ಪ್ಲೇಟ್ ಲೆಟ್ ,ತ್ರೋಮ್ಬೋ ಸೈಟ್ ಎಂದೂ ಕರೆಯುವರು .ನಾನು ಮಹಾಭಾರತದ ವಿದುರನಂತೆ ತೆರೆಯ
ಮರೆಯ ಸಂಭಾವಿತ.ನಿಮಗೆಲ್ಲಾ ಕೆಂಪು ಮತ್ತು ಬಿಳಿ ರಕ್ತ ಕಣಗಳ ಬಗ್ಗೆ ಸರಿಯಾಗಿ ಗೊತ್ತು .ಕೆಂಪು ರಕ್ತ ಕಣಗಳು
ಶ್ವಾಸಕೋಶ ದಿಂದ ಜೀವಕೋಶ ಗಳಿಗೆ ಆಮ್ಲಜನಕ ಸಾಗಿಸುದು ,ಬಿಳಿ ಕಣಗಳು ರೋಗಾಣುಗಳನ್ನು ಆಕ್ರಮಿಸಿ
ಕೊಳ್ಳುವುದು ಇತ್ಯಾದಿ.ಆದರೆ ನನ್ನ ಬಗ್ಗೆ ನಿಮಗೆ ಏನು ತಿಳಿದಿದೆ ?ಏನೂ ಇಲ್ಲ .ನಾನೇ ಹೇಳುತ್ತೇನೆ .ನಿಮ್ಮ ಶರೀರದಲ್ಲಿ
ಒಂದು ಗಾಯವಾಯಿತು ಎಂದುಕೊಳ್ಳಿ .ಆಗ ನಾನು ಮತ್ತು ನನ್ನ ಹಿಂಡು ಆ ಜಾಗಕ್ಕೆ ಧಾವಿಸಿ ನಮ್ಮಗಳ ದೇಹಗಳನ್ನೇ
ಅಡ್ಡವಿರಿಸಿ ರಕ್ತನಾಳಗಳಿಂದ ರಕ್ತ ಸೋರದಂತೆ ತಡೆಗಟ್ತುತ್ತೇವೆ. ಅ ಮೇಲಿಂದ ಹೆಪ್ಪುಗಟ್ಟಿಸುವ ಸಾಧನಗಳು ಬಂದು
ಗಾಯವನ್ನು ಸೀಲ್ ಮಾಡುವುದು .ನೀವು ಪುರಾಣದ ಉದ್ಧಾಲಕನ ಕತೆ ಕೇಳಿದ್ದಿರಲ್ಲವೇ? ನಾನು ನಿಮ್ಮ ಶರೀರದ
ಉದ್ದಾಲಕ .ನಾನು ಮತ್ತು ನನ್ನ ಮಿತ್ರರು ಇಲ್ಲದಿದ್ದಲ್ಲಿ ನೀವು ಸಣ್ಣ ಗಾಯ ಆದರೂ ರಕ್ತ ಸ್ರಾವದಿಂದ ಸಾಯುವಿರಿ .
ಕೆಲವೊಮ್ಮೆ ಅಪದ್ಧ ಸಂಭವಿಸುವುದು ಉಂಟು .ಹೃದಯದ ರಕ್ತ ನಾಳಗಳಲ್ಲಿ (coronary artery) ನೀವು ಮಿತಿ ಮೀರಿ
ತಿಂದ ಕೊಬ್ಬು ಸೇರಿಕೊಂಡು ನಮ್ಮನ್ನು ಆಹ್ವಾನಿಸಿದರೆ ನಾವೇನು ಮಾಡಬೇಕು ?ನಮ್ಮ ಹಿಂಡು ಅಲ್ಲಿ ಒಟ್ಟು ಸೇರಿ
ಕೊಳವೆ ಬಂದ್ಹ್ ಮಾಡುವ ಆಟ ಆಡುತ್ತೇವೆ .ಅದರಿಂದ ನಿಮ್ಮ ಹೃದಯಕ್ಕೆ ರಕ್ತ ಸಿಗದೇ ನಿಮ್ಮ ಹೃದಯಕ್ಕೆ ಆಘಾತ ಆದರೆ
ಅದು ನಿಮ್ಮದೇ ತಪ್ಪಲ್ಲವೇ?ನಮ್ಮನ್ನು ಬೇರೆ ಬೇರೆ ಮಾಡಲು ನೀವುಗಳು ಆಸ್ಪಿರಿನ್ ಇತ್ಯಾದಿ ಔಷಧಿ ಪ್ರಯೋಗಿಸುವಿರಿ .
ನನ್ನಂತಹ ಗುಬ್ಬಿಯ ಮೇಲೆ ಎಂತೆಂತಹ ಬ್ರಹ್ಮಾಸ್ತ್ರ ? ಕ್ಲೋಪಿದೊಗ್ರೆಲ್ ,ಅಬಿಕ್ಷಿಮಾಬ್ ,ತಿಕ್ಲೋಪಿದೀನ್ ,ಇನ್ನೂ ಏನೇನು
ಔಷಧಿಗಳು ?
ನನ್ನನ್ನು ದ್ವೇಷಿಸುತ್ತಿರುವ ನಿಮಗೆ ನನ್ನ ಪ್ರಾಮುಖ್ಯತೆ ಅರಿಯಲು ಎಂದೇ ದೇವರು ನಮ್ಮ ಪ್ರಾರ್ಥನೆ ಕೇಳಿ ಡೆಂಗು
ಜ್ವರವನ್ನು ಸೃಷ್ಟಿಸಿದ. ಡೆಂಗುವಿನಿಂದ ನೀವು ನನ್ನ್ನ ಇರುವಿಕೆ ಬೆಗ್ಗೆ ಅರಿತಿರಿ .ನಿಮ್ಮ ಪತ್ನಿ ಕೆಲವೊಮ್ಮೆ ಜಗಳವಾಡುವಾಗ
ನಾನು ಇಲ್ಲವಾದರೇ ಬುದ್ಧಿ ಬರುವುದು ಎನ್ನುವರಲ್ಲವೇ ?ಹಾಗೆ .
ಆದರೆ ಒಂದು ಗುಟ್ಟು ನಾನು ಹೇಳುವೆನು .ಡೆಂಗು ಜ್ವರದಲ್ಲಿ ನಾನು ಎಷ್ಟು ನಶಿಸಿದರೂ ಫೇನಿಕ್ಷ್ ನಂತೆ ಮೇಲೆದ್ದು
ಬರುವೆನು .ಅದಕ್ಕೆಂದು ಹೊರಗಿನಿಂದ ಪ್ಲೇಟ್ ಲೆಟ್ ತರಿಸುವ ಅವಶ್ಯಕತೆ ಇಲ್ಲ .ನನ್ನ ಮಹಿಮೆ ಎಸ್ಟಿದೆ ಎಂದರೆ ಸುಮಾರು
ಮೂರುವರೆ ಲಕ್ಷವಿರುವ ನಮ್ಮ ಸೈನ್ಯ ಐದು ಸಾವಿರಕ್ಕೆ ಇಳಿದರೂ ನಾವು ಪರಿಸ್ತಿತಿ ನಿಭಾಯಿಸುವೆವು .ಸಾಧಾರಣ ವೈರಲ್
ಜ್ವರಗಳಲ್ಲೂ ನಮ್ಮ ಸಂಖ್ಯೆ ಸ್ವಲ್ಪ ಕುಗ್ಗ ಬಹುದು .ಅದಕ್ಕೆಲ್ಲ್ಲಾ ನೀವು ಹೆದರುವ ಅವಶ್ಯಕತೆ ಇಲ್ಲಾ.