ಬೆಂಬಲಿಗರು

ಭಾನುವಾರ, ಮಾರ್ಚ್ 27, 2022

ವಿ ದ ಪೀಪುಲ್ ಆಫ್ ಇಂಡಿಯ

ಕುಂದಾಪುರದಲ್ಲಿ "ವಿ‌ ದ ಪೀಪಲ್ ಆಫ್ ಇಂಡಿಯಾ" ನಾಟಕ ಪ್ರದರ್ಶನ - Mangalorean.com 

ವಾರಗಳ ಹಿಂದೆ ನಮ್ಮ ರಾಘಣ್ಣನ "ಕಾಡು 'ವಿನಲ್ಲಿ  ಶಿವಮೊಗ್ಗ ದ ರಂಗಾಯಣ ತಂಡದವರಿಂದ "ವಿ  ದ ಪೇಪಲ್ ಆಫ್ ಇಂಡಿಯ "ನಾಟಕ ಪ್ರದರ್ಶನ ಇದ್ದು ,ನಾನು ಗೆಳೆಯರ ಜೊತೆ ಹೋಗಿದ್ದೆ . ಪ್ರಥಮವಾಗಿ  ರಾಗಣ್ಣ ಮತ್ತು ಅವರ ಕುಟುಂಬದವರು ಪ್ರತೀ ವರ್ಷ ಆಯೋಜಿಸುತ್ತಿರುವ ಮೌಲಿಕ ಕಾರ್ಯಕ್ರಮ ಗಳಿಗಾಗಿ ಅವರು ಮತ್ತು ಅವರ ಕುಟುಂಬದವರನ್ನು ಅಭಿನಂದಿಸುತ್ತೇನೆ .

ನಟ ನಟಿಯರು ನಾಟಕಕ್ಕೆ ನ್ಯಾಯ ಒದಗಿಸಿದರು ಎಂದು ಹೇಳಬಲ್ಲೆ .  ಸಂವಿಧಾನ ಸಂವಿಧಾನ ಎಂದು ಎಲ್ಲರೂ ಜಪಿಸುತ್ತಿರುತ್ತಾರೆ . ಭಾರತದ ಸಂವಿಧಾನ ಆಶಯದಂತೆ ರಾಗ ಅಥವಾ ದ್ವೇಷ ಇಲ್ಲದೆ ,ಭಯ ಅಥವಾ ಪಕ್ಷಪಾತ ಇಲ್ಲದೆ ಕರ್ತವ್ಯ  ನಿರ್ವಹಿಸುತ್ತೇನೆ ಎಂದು ಮಂತ್ರಿ ಮಾಗಧರು ಪ್ರತಿಜ್ನೆ ಮಾಡುತ್ತಾರೆ . 

ಈ ನಾಟಕದಲ್ಲಿ ಸಂವಿಧಾನ ಎಂದರೆ ಏನು ಎಂಬ ಪ್ರಶ್ನೆಯನ್ನು  ಜನ ಪ್ರತಿನಿಧಿ ಮತ್ತು  ಸಮಾಜದ ಇನ್ನಿತರ ಗಣ್ಯರಲ್ಲಿ ಕೇಳಿದಾಗ ನಿರುತ್ತರ ಅಥವಾ ತಪ್ಪು ಉತ್ತರ ಸಿಗುತ್ತದೆ .

ನಾಟಕಕ್ಕೆ ಹತ್ತಿರದ ಕಾಲೇಜ್ ನಿಂದ ವಿದ್ಯಾರ್ಥಿ ವಿದ್ಯಾರ್ಥಿಯರು ಬಂದಿದ್ದು ,ಸಂವಿಧಾನ ರಚನೆ ಪ್ರಕ್ರಿಯೆ ,ಮೂಲ ಆಶಯಗಳು ಇತ್ಯಾದಿಗಳ ಮೇಲೆ ಪಕ್ಷಿನೋಟ ಸಿಕ್ಕಿರ ಬೇಕು .

 Gorakhpur Times - #बी_एन_राव, भारतीय संविधान के जनक ! बी एन राव जिनका पूरा  नाम बेनेगल नरसिंह राव था उन्हें संविधान का पहला ड्राफ्ट बनाने का काम दिया  ...B. Shiva Rao.jpg                                                                        ನಾಟಕದಲ್ಲಿ ಅಮ್ಮು ಸ್ವಾಮಿನಾಥನ್ ಸೇರಿ ಹಲವರ ಉಲ್ಲೇಖ ಇದ್ದರೂ ಕನ್ನಡಿಗರೇ (ದಕ್ಷಿಣ ಕನ್ನಡ )ಅದ  ಬೆನಗಲ್ ನರಸಿಂಹ ರಾವ್ (-ಇವರು ಸಂವಿಧಾನ  ಕರಡು ರಚನಾ ಸಮಿತಿಯಲ್ಲಿ ಇದ್ದವರು .)ಮತ್ತು ಅವರ ಸಹೋದರ  ಶಿವ ರಾವ್( -ಇವರು ಸಂವಿಧಾನ ಸಭೆಯಲ್ಲಿ ಇದ್ದವರು )ಇವರ ಉಲ್ಲೇಖ ಇಲ್ಲದ್ದು ಮಾತ್ರವಲ್ಲ ಸಮಿತಿಯ ಸದಸ್ಯರು ಎಲ್ಲಾ ಬೇರೆ ಬೇರೆ ಕಾರಣಕ್ಕೆ ಸಿಗದೆ ಹೋದರು ಎಂಬ ಡಯಲಾಗ್ ಇದೆ . 

ಬಿ ಆರ್ ಅಂಬೇಡ್ಕರ್ ಅವರೇ  ತಮ್ಮ ಸಮಾರೋಪ ಭಾಷಣದಲ್ಲಿ ಹೇಳಿದ್ದಾರೆ "ಸಂವಿಧಾನ ರಚನೆಯ ಶ್ರೇಯ ವನ್ನು ನನಗೆ ಕೊಟ್ಟರೂ ಇದು ಭಾಗಷಃ ಮೊದಲ   ಕರಡು ಪ್ರತಿ  ರಚಿಸಿ ಅದನ್ನು ಕರಡು ಸಮಿತಿಗೆ ಒಪ್ಪಿಸಿದ ಬೆನಗಲ್ ನರಸಿಂಗ ರಾವ್ ಅವರಿಗೆ ಸೇರಬೇಕು "ಇದರ ಕರಡು ರಚಿಸಲು ಜಗತ್ತಿನ ಹಲವು ದೇಶಗಳ ಸಂವಿಧಾನದ ಕೂಲಂಕುಷ ಅಧ್ಯಯನ ಮಾಡಿ ನಮ್ಮ ದೇಶಕ್ಕೆ ಬೇಕಾದಂತ ಅಂಶಗಳನ್ನು ಅಳವಡಿಸಿಕೊಂಡ ಕೀರ್ತಿ ರಾವು ಅವರಿಗೆ ಸೇರಬೇಕು . ಬರ್ಮಾ ದೇಶದ ಸಂವಿಧಾನ ರಚನೆಯಲ್ಲಿ ಕೂಡಾ ಇವರ ಸೇವೆಯನ್ನು ಬಳಸಿಕೊಂಡಿದ್ದು ನಮಗೆ ಹೆಮ್ಮೆ . ಇವರ ಇನ್ನೊಬ್ಬ ಸಹೋದರ ರಾಮ ರಾವ್ ಭಾರತ ದೇಶದ ರೆಸೆರ್ವ್ ಬ್ಯಾಂಕ್ ಗವರ್ನರ್ ಆಗಿದ್ದರು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ