ಬೆಂಬಲಿಗರು

ಭಾನುವಾರ, ಮಾರ್ಚ್ 27, 2022

ಅಡಿಕೆ ಹಾಳೆ ಶಯನ

 

ಜಾನುವಾರುಗಳಿಗೆ ಅಡಿಕೆ ಹಾಳೆ ಉತ್ತಮ ಮೇವು ಯಾಕೆ?. - Krushiabhivruddiಅಮೇರಿಕದಲ್ಲಿಂದು ಅಡಿಕೆ ಹಾಳೆ ತಟ್ಟೆ |

Namma Karnataka — ಹಾಳೆ ಟೋಪಿ ತಲೆಯ ಮೇರೆ ಭಾರ ಹೊರಲು ಅಡಿಕೆ ಮರದ ಹಾಳೆಯಿಂದ...                                                                                                                            ವಿಷ್ಣುವನ್ನು ಪನ್ನಗ ಶಯನ ,ಕ್ಷೀರ ಸಾಗರ ಶಯನ ಎಂದೆಲ್ಲಾ  ವರ್ಣಿಸುತ್ತಾರೆ . ಹಾಗೆ ನೋಡಿದರೆ ನಾವೆಲ್ಲಾ ಅಡಿಕೆ ಹಾಳೆ ಶಯನ ಅಗಿದ್ದೆವು . ಹುಟ್ಟಿದ ಮಗುವಿಗೆ ಹಾಳೆಯ ಮೇಲೆ ಒಂದು ಬಿಳಿ ಬಟ್ಟೆ . ತಲೆಯ ಬದಿಗೆ ಒಂದು ಒಂದು ಬಟ್ಟೆಯ ಉರುಟಿನ ತಲೆದಿಂಬು . ಹಾಸಿದ ಬಟ್ಟೆ (ಹೆಚ್ಚಾಗಿ  ಹಳೆ ವೇಷ್ಟಿ )ಯನ್ನು ಮಗು ಒದ್ದೆ ಮಾಡಿದಂತೆ ಕೆಳಗೆ ಎಳೆದು ಉಂಡೆ ಮಾಡುವುದು .ಮಗು ಅತ್ತಾಗ ಹಾಳೆ ಯ ಕೆಲ ಬಾಗ  ವನ್ನು  ಕೈಯಲ್ಲಿ ಕರಕರ ಮಾಡಿದರೆ ಅಳು ನಿಲ್ಲಿಸುವುದು .ಈಗ ಬಗೆ ಬಗೆಯ ಪ್ಲಾಸ್ಟಿಕ್ ಹಾಸುಗಳು ಅವುಗಳ ಮೇಲೆ ಬಣ್ಣ ಬಣ್ಣದ ದಪ್ಪದ ರೆಡೀ ಮೇಡ್ ಉಡುಪುಗಳು ಬಂದಿವೆ . ನಮ್ಮ ಆಸ್ಪತ್ರೆಯಲ್ಲಿ ಒಬ್ಬರು ಮಾತ್ರ ಹಾಳೆಯಲ್ಲಿ  ಮಗುವನ್ನು ಮಲಗಿಸಿದ್ದುದನ್ನು  ಕಂಡಿದ್ದೇನೆ .

                      ಅಡಿಕೆ ಹಾಳೆ ನಮ್ಮ ಜೀವನದ ಅತ್ಯಾವಶ್ಯ ಅವಿಭಾಜ್ಯ ಅಂಗ ಆಗಿತ್ತು .ತಲೆಗೆ ಮುಟ್ಟಾಳೆ ,ತೋಟಕ್ಕೆ ನೀರು ಚೇಪುವ ಚಿಳ್ಳಿ .ಚಿಳ್ಳಿಯ ಅಣ್ಣನಿಗೆ ಪಡಿಗೆ ಎಂದು ಹೆಸರು .ಇದು ತರಕಾರಿ ಹಚ್ಚಿ ಹಾಕುವುದರಿಂದ ಹಿಡಿದು ರೋಗಿಗಳ ಬೆಡ್ ಪ್ಯಾನ್ ವರೆಗೆ ವಿವಿಧ ಕಾರ್ಯಗಳಿಗೆ ಉಪಯೋಗಿಸುತ್ತಿದ್ದರು .ಹಾಳೆ ತುಂಡು ಸೆಗಣಿ ಸಾರಿಸುವುದರಿಂದ ಹಿಡಿದು ,ಚುಟ್ಟಿ ಕಿಟ್ಟಲು ಮತ್ತು ಮಕ್ಕಳ ಕಕ್ಕ ತೆಗೆಯಲು ; ಮಳೆಗಾಲಕ್ಕೆ ಮೊದಲೇ ಹಾಳೆಯನ್ನು ಒಣಗಿಸಿ ಅಟ್ಟದಲ್ಲಿ ಹೇಮಾರಿಸುವರು . ಬಚ್ಚಲು ಮನೆಯಲ್ಲಿ ಒಳೆಗೆ ಮುಖ್ಯ ಉರುವಲು .ಬೇಗನೆ ಬೆಂಕಿ ಹಿಡಿದು ಉರಿಯುವುದು . 

ರಾಸುಗಳಿಗೆ ಇದು ಒಳ್ಳೆಯ ಆಹಾರ ಕೂಡಾ .

ಊಟ ಮಾಡಲು ಕಟ್ಟಿಪ್ಪಾಳೆ . ಇದರಲ್ಲಿ ಒಂದು ದೊಡ್ಡದು ಅನ್ನ ಹಾಕಲು ,ಪಕ್ಕದಲ್ಲಿ ಒಂದು ಮರಿ ,ಪದಾರ್ಥ ಹಾಕಲು . ಹಾಳೆಯಿಂದ ಸುರ್ ಸುರ್ ಎಂದು ಉಣ್ಣುವುದು ಒಂದು ಸುಖ

ಈಗ ಈ ಹಾಳೆಗೆ ವಾಣಿಜ್ಯ ಬೆಲೆ ಬಂದಿದೆ .ಹಾಳೆ ತಟ್ಟೆ ಮಾಡುವುದು ಉದ್ಯಮ ಆಗಿ ಬೆಳೆದು ,ನಮಗೆ ಸಾಧ್ಯವಾಗದಿದ್ದರೂ ಈ ಬರೀ ಹಾಳೆ ವಿದೇಶಕ್ಕೆ ಹೋಗಿದೆ . ಅಡಿಕೆಗೆ ಮಾತ್ರ ವಲ್ಲ ತನಗೂ ಮಾನ ಬಂದಿದೆ ಎಂದು ಅದು ಬೀಗುತ್ತಿದೆ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ