ಒಂದು ಮುಂಜಾನೆ ಸಿಯಾಟಲ್ ನಗರದ ಆಗ್ನೇಯ ದಿಕ್ಕಿನತ್ತ ಇರುವ ಸ್ಪಟಿಕ
ಪರ್ವತ (crystal mountain) ಚಾರಣಕ್ಕೆ ಹೊರಟೆವು . ಮಧ್ಯಾಹ್ನ ಊಟಕ್ಕೆ
ಪುಳಿಯೋಗರೆ ಮೊಸರನ್ನ ದ ಬುತ್ತಿ .ಸಿಯಾಟಲ್ ನಿಂದ ಸುಮಾರು ೮೦ ಮೈಲು
ದೂರ .ಅಮೇರಿಕಾ ದೇಶದಲ್ಲಿ ಮೈಲು ಗ್ಯಾಲನ್ನೇ ಚಾಲ್ತಿಯಲ್ಲಿದೆ .ಪುಣ್ಯಕ್ಕೆ ಆಣೆ
ಒಟ್ಟೆ ಮುಕ್ಕಾಲು ಇಲ್ಲ .
ಗೂಗಲ್ ನ ಜಿ ಪಿ ಎಸ್ (ಗ್ಲೋಬಲ್ ಪೊಸಿಸಶನಿಂಗ್ ಸಿಸ್ಟಮ್ )ನಲ್ಲಿ
ನಿಮಗೆ ಹೋಗಬೇಕಾದ ಸ್ಥಳ ದ ಹೆಸರು ದಾಖಲಿಸಿದರೆ ಸಾಕು ಅದರಲ್ಲಿರುವ
ಅಶರೀರವಾಣಿ ನಿಮಗೆ ದಾರಿ ತೋರುತ್ತದೆ .ಬಲಕ್ಕೆ ತಿರುಗಿ ,ಎಡಕ್ಕೆ ಹೋಗಿ
,ಒಂದು ಮೈಲು ನಂತರ ಬಲದ ದಾರಿ ಹಿಡಿಯಿರಿ ಇತ್ಯಾದಿ .ಅತಲ ವಿತಳ ಪಾತಾಳ
ದಲ್ಲಿ ಎಲ್ಲಿಗೆ ಹೋಗ ಬೇಕಾದರೂ ಯಾರನ್ನೂ ಕೇಳ ಬೇಕಿಲ್ಲ .ಜಿ ಪಿ ಎಸ್ ಮೊರೆ
ಹೋದರೆ ಕೈ ಬಿಡದು .ಇಂಟರ್ನೆಟ್ ಸ೦ಪರ್ಕ ಮಾತ್ರ ಅವಶ್ಯಕ .ನಮ್ಮ ಮಗ
ಈ ಸೌಲಭ್ಯ ಉಪಯೋಗಿಸುತ್ತಿದ್ದ .ಟ್ಯಾಕ್ಸಿ ಚಾಲಕರೂ ಅದನ್ನು ಎಲ್ಲಾ ಕಡೆ
ಬಳಸುವರು .
ದಾರಿ ಗುಂಟ ಹಸಿರ ರಾಶಿ .ಕೆಲವು ಸಣ್ಣ ಪಟ್ಟಣ ಗಳು .ಸ್ಟಾರ್ ಬಕ್ ನಲ್ಲಿ ಒಂದು
ಮಧುರ ಚಹಾ ಸೇವನೆ ಆಯಿತು .ಚಹಾ ಕಾಫಿ ಪ್ರಿಯರ ಮೆಚ್ಚಿನ ತಾಣ ಸ್ಟಾರ್ ಬಕ್
ಇದು ಜಗತ್ತಿನ ದೊಡ್ಡ ಮತ್ತು ಜನಪ್ರಿಯ ಚಹಾ ಕಾಫಿ ಅಂಗಡಿ ಶೃಂಖಲೆ
ಆರಂಭವಾದದ್ದು ಸಿಯಾಟಲ್ ನಲ್ಲಿ .
ನಾವು ಬಂದುದು ಬೇಸಿಗೆಯಲ್ಲಿ .ಈ ಸ್ಪಟಿಕ ಪರ್ವತ ಹೆಚ್ಚಾಗಿ ಹಿಮಾಚ್ಚಿದವಾಗಿದ್ದು
ಐಸ್ ಸ್ಕೇಟಿಂಗ್ ಪ್ರಿಯರ ತಾಣ .ನಮಗೆ ಅದನ್ನು ನೋಡುವ ಭಾಗ್ಯ ಇಲ್ಲ .

ಚಳಿಗಾಲದ ನೋಟ
ನಾವು ಹೋದಾಗ ಇದ್ದ ಬೋಳು ಬೆಟ್ಟ
ಈ ಬೆಟ್ಟಕ್ಕೆ ಕೆಳಗಿನಿಂದ ರೋಪ್ ವೆ ನಿರ್ಮಿಸಿದ್ದಾರೆ .ಅದರ ಮೂಲಕ ಇಲ್ಲವೇ
ನಡೆಯುತ್ತಾ ಶಿಖರ ಎರ ಬಹುದು .ಮೇಲೆ ಗುಡ್ಡದ ತುದಿಯಿಂದ ನಯನ
ಮನೋಹರ ದೃಶ್ಯ ಕಾಣ ಸಿಗುವುದು .ಅಲ್ಲಿ ಒಂದು ರೆಸ್ಟೋರಂಟೂ ಇದೆ .
ಈ ಶಿಖರ ದ ಮೇಲಿಂದ ಪಕ್ಕದಲ್ಲಿರುವ ಮೌಂಟ್ ರೈನಿಯರ್ ಎಂಬ
ಹಿಮಚ್ಚ್ಹಾದಿತ ಅಗ್ನಿ ಪರ್ವತ ಮತ್ತು ಕಣಿವೆಯಲ್ಲಿ ಹರಿಯುವ ಶ್ವೇತ ನದಿಯ
ಮನ ಮೋಹಕ ದೃಶ್ಯ ಕಣ್ಣು ತುಂಬಿಸಿ ಕೊಳ್ಳ ಬಹುದು .
ಇಲ್ಲಿ ಕಾಣುವ ಅಗ್ನಿ ಪರ್ವತ ಈಗ ಹಿಮ ಹೊದೆದು ನಿಂತಿದೆ .ಯಾವುದೇ ಸಮಯ
ಸಕ್ರಿಯವಾಗುವ ಅಪಾಯ ಇದೆ .
ರೋಪ್ ವೆ ಯಲ್ಲಿ ಮೇಲೆ ಹೋಗುವಾಗ ಸ್ಥಳೀಯ ಮಹಿಳೆ ನಮ್ಮೊಡನೆ
ಮಾತಿಗೆ ಇಳಿದರು .(ಇಲ್ಲಿ ಇದು ಅಪರೂಪ .) ನನ್ನ ಮಗನ ಉದ್ಯೋಗ
ವಿಚಾರಿಸಿದರು .ಸಾಫ್ಟ್ ವೇರ್ ನವರಿಂದಾಗಿ ಸಿಯಾಟಲ್ ಸುತ್ತ ಮುತ್ತ
ರಿಯಲ್ ಎಸ್ಟೇಟ್ ಮತ್ತು ಸಾಮಗ್ರಿ ಬೆಲೆ ಗಗನಕ್ಕೇರಿದೆ ಎಂದು ಬೇಸರ
ವ್ಯಕ್ತ ಪಡಿಸಿದರು .ನಮ್ಮ ನಾಡಿನಲ್ಲೂ ಇದೇ ಸಮಸ್ಯೆ ಇದೆ ತಾನೇ .
ಮೇಲೆ ಒಂದು ಗಂಟೆ ವಿಹರಿಸಿ ಕೆಳಗೆ ಇಳಿದೆವು .ಹೊಟ್ಟೆ ಚುರುಗುಟ್ಟುತ್ತಿತ್ತು .
ಊಟ ಮಾಡಿ ಸುತ್ತ ಮುತ್ತಲು ಕೆಲವು ಸಣ್ಣ ಸರೋವರಗಳನ್ನು ನೋಡಿದೆವು .
ಪ್ರವಾಸಿ ತಾಣಗಳನ್ನು ಸ್ವಚ್ಚವಾಗಿ ಇಟ್ಟಿದ್ದಾರೆ .ಯಾರಾದರೂ ಛಾಯಾ ಚಿತ್ರ
ತೆಗೆಯುತ್ತಿದ್ದರೆ ತಾಳ್ಮೆಯಿಂದ ಕಾಯುತ್ತಾರೆ ,ಅಡ್ಡ ಬರುವುದಿಲ್ಲ (ಇದು ಅಮೇರಿಕಾ
ದುದ್ದಕ್ಕೂ ಕಂಡ ಸಂಗತಿ )
ಸಾಯಂಕಾಲ ಮನೆಗೆ ಮರಳಿ ವಿಶ್ರಾಂತಿ ತೆಗೆದುಕೊಂಡು ಬಾಹುಬಲಿ ಚಲನ ಚಿತ್ರ
ನೋಡಲು ಸಮೀಪದ ಚಿತ್ರಮಂದಿರಕ್ಕೆ ಹೋದೆವು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ