ಡಾಲರ್ ಲೆಕ್ಕದಲ್ಲಿ ಅತೀ ಹೆಚ್ಚು ರಫ್ತು ಮೂಲಕ ಆದಾಯ ಇರುವ ,ಮತ್ತು
ವಿಶ್ವದಾತ್ಯಂತ ಎರಡನೇ ದೊಡ್ಡ ರಕ್ಷಣಾ ಕಾಂಟ್ರಾಕ್ಟ್ ದಾರ ಕಂಪನಿ ಬೋಯಿಂಗ್ .
ಪ್ರಯಾಣಿಕ ,ಸರಕು ಸಾಗಣೆ ಮತ್ತು ಯುಧ್ಧ ವಿಮಾನ ರಂಗದಲ್ಲಿ ದೊಡ್ಡ ಹೆಸರು
ಮಾಡಿದೆ .ಇದರ ಕಾರ್ಖಾನೆಯು ವಿಸ್ತಾರದಲ್ಲಿ ಜಗತ್ತಿನಲ್ಲಿಯೇ ಅತೀ ದೊಡ್ಡದೆಂಬ
ಹೆಗ್ಗಳಿಕೆ ಗಳಿಸಿದೆ
ಸಿಯಾಟಲ್ ಸಮೀಪ ಎವೆರೆಟ್ ಎಂಬಲ್ಲಿ ಇರುವ ಈ ಕಾರ್ಖಾನೆ ನೋಡಲು
ಹೊರಟೆವು .ಅದಕ್ಕೆ ಮುಂಗಡ ಕಾಯ್ದಿರಿಸುವಿಕೆ ಇದೆ .ಒಳಗಡೆ ಮಾರ್ಗದರ್ಶಿ
ಸಹಿತ ತಂಡಗಳಲ್ಲಿ ಹೋಗುವ ವ್ಯವಸ್ತೆ ಕಾರ್ಖಾನೆ ವತಿಯಿಂದ ಇದೆ .ಒಳಗೆ
ಹೋದ ಒಡನೆ ಒಂದು ವಿಮಾನಗಳಿಗೆ ಸಂಬಂದಿಸಿದ ವಸ್ತು ಸಂಗ್ರಹಾಲಯ ಇದೆ .
ಇದರಲ್ಲಿ ವಿಮಾನದ ಮೂಲ ರಚನೆ ಮತ್ತು ಕೆಲವು ಹಳೇ ಮಾದರಿಗಳು
ವಿಮಾನದ ಹಾಲಿ ಕೊಕ್ ಪಿಟ್ ಇತ್ಯಾದಿಗಳ ಪ್ರದರ್ಶನ .
ಕಾರ್ಖಾನೆಯ ಸಂದರ್ಶನ ಒಂದು ಸಾಕ್ಷ್ಯ ಚಿತ್ರದ ವೀಕ್ಷಣೆ ಯೊಡನೆ ಆರಂಭ
ಸಿನೆಮಾ ನೋಡಿದ ನಂತರ ಬಸ್ಸಿನಲ್ಲಿ ನಮ್ಮನ್ನು ಫ್ಯಾಕ್ಟರಿ ಒಳಗಡೆ
ಕೊಂಡೊಯ್ಯಲಾಯಿತು .ಇಲ್ಲಿ ಬೋಯಿಂಗ್ ಬೇರೆ ಬೇರೆ
ಮಾದರಿ ಗಳ ವಿವಿಧ ಹಂತದ ನಿರ್ಮಾಣದಲ್ಲಿ ಇರುವ ವಿಮಾನಗಳ ದರ್ಶನ
ಆಯಿತು .ಕಂಪ್ಯೂಟರ್ ಬಳಕೆ ಯಥೇಚ್ಚವಾಗಿ ಮಾಡುವುದು ಮೇಲ್ನೋಟಕ್ಕೆ
ಕಾಣುವುದು ,ಬಿಡಿ ಭಾಗಗಳನ್ನು ಎತ್ತಲು ದೈತ್ಯ ಕ್ರೇನ್ ಗಳಿವೆ .
ಇತ್ತೀಚೆಗಿನ ಬೋಯಿಂಗ್ ೭೮೭ ಡ್ರೀಮ್ ಲೈನರ್ ಕಡಿಮೆ ಭಾರದ
ಸಂಯುಕ್ತ ವಸ್ತುವಿನಿಂದ ತಯಾರಿಸಿದ ಕಡಿಮೆ ತೂಕದ ಬಾಡಿ ಹೊಂದಿದ್ದು
ಇಂಧನ ಉಳಿತಾಯ ವಾಗುವುದು .
ವಿಲಿಯಂ ಬೋಯಿಂಗ್ ಎಂಬ ಇಂಜಿನಿಯರ್ ಸಿಯಾಟಲ್ ನಲ್ಲಿ ಪೆಸಿಫಿಕ್ ಏರೋ
ಪ್ರಾಡಕ್ಟ್ಸ್ ಎಂಬ ಹೆಸರಿನಲ್ಲಿ ೧೯೧೬ರಲ್ಲಿ ಆರಂಬಿಸಿದರು ,ಅದು ವರೆಗೆ
ಮರದ ಕಾರ್ಖಾನೆ ನಡೆಸಿದ ಅನುಭವ ಇದ್ದಿತು .ಮೊದಲು ತಯಾರಿಸಿದುದು
ಸಮುದ್ರದಲ್ಲಿ ಇಳಿಯ ಬಹುದಾದ ಮಾದರಿ
ಈಗಲೂ ಸಿಯಾಟಲ್ ನಲ್ಲಿ ಸಮುದ್ರಲ್ಲಿ ಇಳಿಯುವ ವಿಮಾನಗಳು ಬರುವ ನಿಲ್ದಾಣ
ಇದೆ .
ಮುಂದೆ ಈ ಕಂಪನಿ ಬೋಯಿಂಗ್ ಕುಟುಂಬದ ಹತೋಟಿಯಿಂದ ಹೊರ ಬಂದು
ಈಗ ಇರುವ ಸ್ಥಾನ ಕ್ಕೆ ಬಂದಿದೆ .
ವಿಮಾನ ಸಂಸ್ಥೆಯ ಆವರಣದಲ್ಲಿ ನಿರ್ಮಾಣವಾದ ವಿಮಾನದ ಪರೀಕ್ಷಣಾ
ಹಾರಾಟ ನಡೆಸಲು ಬೇಕಾದ ರನ್ ವೆ ಇದೆ .
ಅಂತೂ ವಿಮಾನದಲ್ಲಿ ಪ್ರಯಾಣಿಸಿದ್ದಲ್ಲದೆ ಅದನ್ನು ತಯಾರಿಸುವ
ಕಾರ್ಖಾನೆಯನ್ನೂ ನೋಡಿ ಕೃತಾರ್ಥ ರಾದೆವು .
ಮಧ್ಯಾಹ್ನ ಹೊತ್ತು ನಗರದಲ್ಲಿ ಇರುವ ಪೈಕ್ ಪ್ಲೇಸ್ ಮಾರ್ಕೆಟ್ ದರ್ಶನಕ್ಕೆ
ಹೊರಟೆವು .ಭಾನುವಾರ ವಾದ್ದರಿಂದ ಜನ ಸಂದಣಿ ಇತ್ತು ,ಮೀನು ,ಮಾಂಸ
ತರಕಾರಿ ಹಣ್ಣು ಇತ್ಯಾದಿಗಳನ್ನು ಕೊಳ್ಳಲು ಮತ್ತು ಬಹಳ ಮಂದಿ ನೋಡಲು
ಬಂದಿದ್ದರು .ಒಳಗಡೆ ಹಬ್ಬದ ವಾತಾವರಣ .ಕೆಲವರು ಸಂಗೀತ ನುಡಿಸುತ್ತಿದ್ದರು .
ಆದರೆ ಎಲ್ಲೂ ಕಸ ಕಡ್ಡಿ ಚೆಲ್ಲಿ ಕೊಂಡು ಕಾಣದು .ಇಲ್ಲಿಯೂ ಕ್ರೆಡಿಟ್ ಕಾರ್ಡ್
ವ್ಯವಹಾರ ದವರು ,ಕ್ಯಾಶ್ ಮಾತ್ರ ತೆಗೆದು ಕೊಳ್ಳುವವರು ಇದ್ದಾರೆ .
ಹೊರಗಡೆ ಸ್ಟಾರ್ ಬಕ್ಹ್ಸ್ ನವರ ಅತೀ ಹಳೆಯ ಅಂಗಡಿ ನೋಡಲು ಮತ್ತು
ಛಾಯಾಗ್ರಹಣ ಮಾಡಲು ನೂಕುನುಗ್ಗಲು ಇತ್ತು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ