ಸಿಯಾಟಲ್ ಸಂದರ್ಶನ ಮುಗಿಸಿ ಚಿಕಾಗೊದತ್ತ ದಾರಿ ಬೆಳೆಸಿದೆವು .ವಿಮಾನ
ನಿಲ್ದಾಣ ದಲ್ಲಿ ಸೆಕ್ಯೂರಿಟಿ ಯವರು ಶ್ರೀಮತಿಯವರ ಉಡುಗೆಯಲ್ಲಿದ್ದ ಅಲಂಕಾರಿಕ
ಜರಿಗಳು ಸ್ಕ್ಯಾನ್ ನಲ್ಲಿ ಕಂಡುದರಿಂದ ವಿವರವಾದ ಪರಿಶೀಲನೆಗೆ ಒಳ ಪಡಿಸಿ
ಯಾವುದೇ ಸ್ಪೋಟಕ ಇಲ್ಲ ಎಂದು ಖಾತರಿಸಿ ಒಳ ಗಡೆ ಬಿಟ್ಟರು .ನನಗೇನೋ
ಸಂದೇಹ ,ಆಗಾಗ್ಗೆ ನನ್ನ ಮೇಲೆ ಅವರ ಸಿಟ್ಟು ಸ್ಪೋಟವಾಗುವುದು ಇದೆ .
ಚಿಕಾಗೊ ನಿಲ್ದಾಣದಲ್ಲಿ ಇಳಿಯುವಾಗ ಸಂಜೆ ಆರು ಗಂಟೆ .ಇಲ್ಲಿನ ಬಹುತೇಕ
ನಗರಗಳಲ್ಲಿ ಒಂದಕ್ಕಿಂತ ಹೆಚ್ಚು ವಿಮಾನ ನಿಲ್ದಾಣಗಳಿವೆ .ನಮ್ಮನ್ನು
ಕರೆದೊಯ್ಯಲು ಬಂಧು ಮುರಲೀಧರ ಕಜೆ ಕಾರ್ ಸಮೇತ ಬಂದಿದ್ದರು .ಅವರ
ಕಾರಿನ ನಂಬರ್ ಪ್ಲೇಟ್ನಲ್ಲೂ KAJE ಇದೆ .
ನಗರಗಳ ಮುಖ್ಯ ಭಾಗಕ್ಕೆ ಡೌನ್ ಟೌನ್ ಎನ್ನುತ್ತಾರೆ .ಮುರಳಿಯವರ ಆಫೀಸ್
ಇಲ್ಲಿದೆ .ಮನೆ ಹೊರ ವಲಯದಲ್ಲಿ ಇದೆ .ಅವರು ಬ್ಯಾಂಕ್ ನಲ್ಲಿ ತಾಂತ್ರಿಕ ಅಧಿಕಾರಿ .
ಮುರಳಿ ಯವರು ತಮ್ಮ ಪದವಿ ಅಧ್ಯಯನ ಹೊರತು ಪಡಿಸಿ ಎಲ್ಲಾ ವಿದ್ಯಾಭ್ಯಾಸ
ಸತ್ಯ ಸಾಯಿ ಸಂಸ್ಥೆಗಳಲ್ಲಿ ಮಾಡಿದವರು ,ಅದರ ಛಾಪು ಅವರಲ್ಲಿ ಇದೆ .ವಿನಯ .
ಸಂಸ್ಕೃತಿ ಪ್ರೇಮ ಮತ್ತು ಅತಿಥ್ಯದಲಿ ಆನಂದ ಕಾಣುವ ಗುಣ ಎದ್ದು ಕಾಣುವುದು .
ಚಿಕಾಗೊ ನಗರದ ಕನ್ನಡ ಕೂಟ ,ಸತ್ಯ ಸಾಯಿ ವೃಂದ ಗಳಲ್ಲಿ ಅವರು ಕ್ರಿಯಾಶೀಲ
ರಾಗಿ ಮುಂಚೂಣಿಯಲ್ಲಿದ್ದಾರೆ .
ಅವರ ಪತ್ನಿ ಸಹನಾ .ಹೆಸರಿಗೆ ತಕ್ಕಂತೆ ಸಹನಾ ಶೀಲೆ .ದಂತ ವೈದ್ಯೆಯಾದ
ಇವರು ಕುಟುಂಬಕ್ಕೆ ಸಮುಯ ಮೀಸಲಿಡುವುದಕ್ಕಾಗಿ ಎಳೆಯ ಮಕ್ಕಳ ಶಾಲೆಯಲ್ಲಿ
ಅಧ್ಯಾಪನ ಮಾಡುತ್ತಿದ್ದಾರೆ ,ಮಕ್ಕಳಾದ ಸಖ್ಯಂ ಮತ್ತು ಸೋಹಂ ಅವರಲ್ಲಿ
ನಮ್ಮ ಸಂಸ್ಕೃತಿಯ ಪ್ರಭಾವ ಉಳಿಯುವಂತೆ ಪ್ರಯತ್ನ ಮಾಡುತ್ತಿದ್ದಾರೆ .
ಅವರ ಮನೆಯ ನೆಲ ಮಾಳಿಗೆಯಲ್ಲಿ ಧ್ವನಿ ವರ್ಧಕ ಮತ್ತು ಸಂಗೀತ ಸಾಧನ
ಗಳು ಇದ್ದು ಭಜನೆ ಇತ್ಯಾದಿ ನಡೆಯುತ್ತಿರುತ್ತವೆ .
ಮುರಳಿ ಕುಟುಂಬದೊಡನೆ ನಾವು
ರಾತ್ರಿ ಕಳೆದು ಮರುದಿನ ಚಿಕಾಗೋ ನಗರ ವೀಕ್ಷಣೆಗೆ ಹೊರಟೆವು ,ಕಾರು
ಅವರದು .ಚಾಲಕ ನಮ್ಮ ಮಗ .ಮೊದಲು ಇಲ್ಲಿಯ ಪ್ರಸಿದ್ಧ ಮತ್ಸ್ಯಾಗಾರ
ಶೆಡ್ ಅಕ್ವೇರಿಯಂ ಗೆ ಹೋದೆವು .ರಜಾದಿನ ಆದ್ದರಿಂದ ಜನ ಸಂದಣಿ ಇತ್ತು .
,ಮೊದಲೇ ಟಿಕೆಟ್ ಕೊಂಡಿದ್ದರಿಂದ ಒಳ ಹೋದೆವು .ಮೊದಲು ಇಲ್ಲಿ ಜಲಚರಗಳ
ಬಗ್ಗೆ 4 D ಚಿತ್ರ ಪ್ರದರ್ಶನ ನೋಡಿದೆವು .ಒಳ್ಳೆಯ ಅನುಭವ .
ಆ ಮೇಲೆ ಅಕ್ವಾಟಿಕ್ ಶೋ ಇದೆ ,ಇಲ್ಲಿ ತರಬೇತಿ ಹೊಂದಿದ ಬಿಳಿ ತಿಮಿಂಗಿಲ ಗಳ
ಆಟ ಪ್ರದರ್ಶಿಸುತ್ತಾರೆ.
ಪೆಂಗ್ವಿನ್ ಮತ್ತು ನಾಯಿ ಮರಿಗಳ ಆಟ ಕೂಡ ತೋರಿಸುವರು .
ಬೇರೆ ಬೇರೆ ಜಲಚರಗಳ (ಕಪ್ಪ್ಪೆ ಮೀನು )ಪ್ರದರ್ಶನ ಕಾಣಲು ಚೆನ್ನ .
ಮಿಷಿಗನ್ ಸರೋವರ ಚಿಕಾಗೋದ ದೊಡ್ಡ ಆಕರ್ಷಣೆ ಮತ್ತು ನಗರದ ಜಲ
ಪೂರೈಕೆಯ ತಾಣ .
ಚಿಕಾಗೊ ನಗರದ ಮೂಲಕ ಹರಿಯುವ ಚಿಕಾಗೊ ನದಿ ಗೂ ಈ ಸರೋವರಕ್ಕೂ
ಸಂಪರ್ಕ ಇದ್ದರೂ ನದಿ ನೀರು ಇದಕ್ಕೆ ಸೇರದಂತೆ ತಾಂತ್ರಿಕ ವ್ಯವಸ್ಥೆ ಮಾಡಿದ್ದಾರೆ.
ಮದ್ಯಾಹ್ನ ಮನೆಯಿಂದ ತಂದಿದ್ದ ಚಿತ್ರಾನ್ನ ,ಪುಳಿಯೋಗರೆ ತಿಂದು
ನಗರದ ಪ್ರಸಿದ್ಧ ಅರ್ಕಿಟೆಕ್ಚರಲ್ ದೋಣಿ ಯಾತ್ರೆಗೆ ಹೋದೆವು .ಚಿಕಾಗೋ
ಮುಖ್ಯ ನಗರದ ಗಗನ ಚುಂಬಿ ಗಳಲೆಲ್ಲ ಚಿಕಾಗೊ ನದಿ ದಂಡೆಯಲ್ಲಿ ಇವೆ.
ಇವುಗಳಲ್ಲಿ ಒಂದೊಂದಕ್ಕೂ ತನ್ನದೇ ಅದ ಇತಿಹಾಸ ಇದೆ .ಯಾಂತ್ರಿಕ
ದೋಣಿಯಲ್ಲಿ ವೀಕ್ಷಕ ವಿವರಣೆ ನೀಡುತ್ತಾ ಕರೆದು ಒಯ್ಯುತ್ತಾರೆ .
ಅದರ ಸನಿಹದಲ್ಲಿಯೇ ಕ್ಲೌಡ್ ಗೇಟ್ ಇದೆ .ಇದರ ರಚನೆಯಲ್ಲಿ ಭಾರತ ಸಂಜಾತ
ಆಶಿಶ್ ಕಪೂರ್ ಅವರ ಪಾತ್ರ ಮುಖ್ಯ ಎಂಬುದು ವಿಶೇಷ ,ಇಲ್ಲಿ ಉಕ್ಕಿನ
ಹಾಳೆಗಳಿಂದ ನಿರ್ಮಿಸಿದ ಚಿಕಾಗೊ ಬೀನ್ ಇದೆ .ಇದರಲ್ಲಿ ಯಾತ್ರಿಕರ ಪ್ರತಿಬಿಂಬ
ನೋಡಲು ಚಂದ .
ನನ್ನ ಮಗನಿಗೆ ಅಲ್ಪ ಸಮಯದಲ್ಲಿ ಹೆಚ್ಚು ಹೆಚ್ಚು ಸ್ಥಳಗಳ ಪರಿಚಯ ಮಾಡಿಸುವ
ಆಶೆ ಮತ್ತು ಹುಮ್ಮನಸು ,ಆದರೆ ನಮ್ಮ ಗಾಡಿ ಅದಕ್ಕೆ ಸರಿಯಾಗಿ ಒಡ ಬೇಕಲ್ಲ .
ಪಾರ್ಕಿಂಗ್ ಸಮಸ್ಯೆಯಿಂದಾಗಿ ನಾವು ಒಂದು ಕಡೆ ಇಟ್ಟು ಮತ್ತೆ ಎಲ್ಲಾ ಕಡೆ
ಪಾದಯಾತ್ರೆ ತಾನೇ .
ಸಂಜೆಯಾಗುತ್ತಿದ್ದಂತೆ ವಿಲ್ಲ್ಸ್ ಟವರ್ ಏರಲು ಹೋದೆವು ,೧೦೮ ಮಹಡಿಗಳ
ಇದು ಅಮೆರಿಕಾದ ಎರಡನೇ ದೊಡ್ಡ ಕಟ್ಟಡ .ಟಿಕೆಟ್ ಪಡೆದು ಮೇಲೆ ಹತ್ತ ಬಹುದು .
ಮೇಲಿನ ಅಂತಸ್ತಿನಲ್ಲಿ ಇಡೀ ಚಿಕಾಗೊ ನಗರದ ವಿಹಂಗಮ ನೋಟ ನೋಡ
ಸಿಗುತ್ತದೆ .ಅಲ್ಲದೆ ಗಾಜಿನ ಒಂದು ವಿಸ್ತರಿತ ಚೇಂಬರ್ ನಲ್ಲಿ ನಿಂತು ಪ್ರಪಾತ
ವಿಕ್ಷಣೆಗೂ ಅವಕಾಶ ಇದೆ ,ರೋಮಾಂಚಕಾರಿ ಅನುಭವ ,

ಕೆಳಗೆ ಕಾಣುವ ಟ್ರಂಪ್ ಟವರ್ ನೋಡಿರಿ ,ಇದು ಅಮೇರಿಕಾ ಅಧ್ಯಕ್ಷ
ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವ ಡೊನಾಲ್ಡ್ ಟ್ರಂಪ್ ಮಾಲಕತ್ವದ ಗಗನ
ಚುಂಬಿ .
ಇಲ್ಲಿ ನದಿ ಸುತ್ತ ಕಟ್ಟಡಗಳನ್ನು ಕಟ್ಟುವಾಗ ಪಾದಚಾರಿಗಳಿಗೆ ಮತ್ತು ಸೈಕಲ್
ಸವಾರರಿಗೆ ಎಂದು ಜಾಗ ಬಿಡಬೇಕೆಂಬ ಕಾನೂನು ತಂದಿರುವರು .
ನದಿ ತೀರದಲ್ಲಿ ಹಾದು ಹೋಗುವ ಮೆಟ್ರೋ ರೈಲು ಹಳಿಗಳು ಮತ್ತು ಸ್ಟೇಷನ್
ಗಳು ಈ ಕಟ್ಟಡಗಳ ಕೆಳಗೆ ಇವೆ.
ಚಿಕಾಗೋದ ಅತಿ ಎತ್ತರದ ಕಟ್ಟಡ ಸಿಯರ್ರ್ಸ್ ಅಥವಾ ವಿಲ್ಲಿಸ್ ಟವರ್
ಈ ನದೀ ಗುಂಟವೇ ಇದೆ .ಇದರ ನಿರ್ಮಾಣದಲ್ಲಿ ಬಾಂಗ್ಲಾದೇಶ
ಸಂಜಾತ ಇಂಜಿನಿಯರ್ ಫಜಲೂರ್ ರಹಮಾನ್ ಖಾನ್ ಅವರ ಮುಖ್ಯ ಭೂಮಿಖೆ
ಇತ್ತು .
ವಿಲ್ಲಿಸ್ ಟವರ್ .
ನದೀ ಯಾತ್ರೆ ಮುಗಿಸಿ ನಾವು ಗ್ರಾಂಟ್ ಪಾರ್ಕ್ ನತ್ತ ತೆರಳಿದೆವು .
ಶಾಲೆಗಳಿಗೆ ರಜಾದಿನಗಳು ಮತ್ತು ಶನಿವಾರ ಆದುದರಿಂದ ನಗರದಲ್ಲಿ
ಜನಸಂದಣಿ ಇತ್ತು .
ಇಲ್ಲಿ ಬಕಿಂಗ್ ಹ್ಯಾಮ್ ಕಾರಂಜಿ ಇದೆ .
ಅದರ ಸನಿಹದಲ್ಲಿಯೇ ಕ್ಲೌಡ್ ಗೇಟ್ ಇದೆ .ಇದರ ರಚನೆಯಲ್ಲಿ ಭಾರತ ಸಂಜಾತ
ಆಶಿಶ್ ಕಪೂರ್ ಅವರ ಪಾತ್ರ ಮುಖ್ಯ ಎಂಬುದು ವಿಶೇಷ ,ಇಲ್ಲಿ ಉಕ್ಕಿನ
ಹಾಳೆಗಳಿಂದ ನಿರ್ಮಿಸಿದ ಚಿಕಾಗೊ ಬೀನ್ ಇದೆ .ಇದರಲ್ಲಿ ಯಾತ್ರಿಕರ ಪ್ರತಿಬಿಂಬ
ನೋಡಲು ಚಂದ .
ನನ್ನ ಮಗನಿಗೆ ಅಲ್ಪ ಸಮಯದಲ್ಲಿ ಹೆಚ್ಚು ಹೆಚ್ಚು ಸ್ಥಳಗಳ ಪರಿಚಯ ಮಾಡಿಸುವ
ಆಶೆ ಮತ್ತು ಹುಮ್ಮನಸು ,ಆದರೆ ನಮ್ಮ ಗಾಡಿ ಅದಕ್ಕೆ ಸರಿಯಾಗಿ ಒಡ ಬೇಕಲ್ಲ .
ಪಾರ್ಕಿಂಗ್ ಸಮಸ್ಯೆಯಿಂದಾಗಿ ನಾವು ಒಂದು ಕಡೆ ಇಟ್ಟು ಮತ್ತೆ ಎಲ್ಲಾ ಕಡೆ
ಪಾದಯಾತ್ರೆ ತಾನೇ .
ಸಂಜೆಯಾಗುತ್ತಿದ್ದಂತೆ ವಿಲ್ಲ್ಸ್ ಟವರ್ ಏರಲು ಹೋದೆವು ,೧೦೮ ಮಹಡಿಗಳ
ಇದು ಅಮೆರಿಕಾದ ಎರಡನೇ ದೊಡ್ಡ ಕಟ್ಟಡ .ಟಿಕೆಟ್ ಪಡೆದು ಮೇಲೆ ಹತ್ತ ಬಹುದು .
ಮೇಲಿನ ಅಂತಸ್ತಿನಲ್ಲಿ ಇಡೀ ಚಿಕಾಗೊ ನಗರದ ವಿಹಂಗಮ ನೋಟ ನೋಡ
ಸಿಗುತ್ತದೆ .ಅಲ್ಲದೆ ಗಾಜಿನ ಒಂದು ವಿಸ್ತರಿತ ಚೇಂಬರ್ ನಲ್ಲಿ ನಿಂತು ಪ್ರಪಾತ
ವಿಕ್ಷಣೆಗೂ ಅವಕಾಶ ಇದೆ ,ರೋಮಾಂಚಕಾರಿ ಅನುಭವ ,
ಮರಳುವಾಗ ಭಾರತ ಮತ್ತು ಪಾಕಿಸ್ತಾನ ದವರ ಅಂಗಡಿಗಳು ಹೆಚ್ಚಾಗಿರುವ
ದೆವೊನ್ ಅವೆನ್ಯೂ ಮೂಲಕ ಹೋದೆವು .ಮುಖ್ಯ ನಗರದಲ್ಲಿ ಕಾಣದ
ಸೈನ್ ಬೋರ್ಡ್ ಗಳು ,ಫ್ಲೆಕ್ಸ್ ಗಳು ಇಲ್ಲಿ ಕಂಡು ಬಂದುವು ,ಮುಂದೆ ಇಲ್ಲಿಯ
ಬಹಾಯಿ ಮಂದಿರಕ್ಕೆ ತೆರಳಿ ಅಲ್ಲಿಯ ಚಟುವಟಿಕೆ ವೀಕ್ಷಿಸಿ ದೆವು.
ಬಹಾಯಿ ಮಂದಿರ
ಮನೆಯಲ್ಲಿ ಸಹನಕ್ಕ ತಯಾರಿಸಿದ ಭೂರಿ ಭೋಜನ ಸೇವಿಸಿ ಪವಡಿಸಿದೆವು
Sundar chitragalu uttama vivarane
ಪ್ರತ್ಯುತ್ತರಅಳಿಸಿಭರ್ಜರಿ ಅಮೆರಿಕಾ ಯಾತ್ರೆ.. ಚೆನ್ನಾಗಿವೆ ಫೋಟೊಗಳು ಮತ್ತು ಬರಹಗಳು...
ಪ್ರತ್ಯುತ್ತರಅಳಿಸಿ