ಕೆಪ್ಪಟ್ರಾಯ ಬೇಸಿಗೆಯಲ್ಲಿ ಸೋಂಕು ರೋಗಗಳ ಹಾವಳಿ .ಇದೇ ಸಮಯ ವಾರ್ಷಿಕ ಪರೀಕ್ಷೆಗಳೂ ನಡೆಯುವವು . ಈ ವರ್ಷ ಮಕ್ಕಳಲ್ಲಿ ಮತ್ತು ಯುವಕರಲ್ಲಿ ಹೆಚ್ಚಾಗಿ ಕಂಡು ಬಂದ ಕಾಯಿಲೆ ಕೆಪ್ಪಟರಾಯ ಅಥವಾ ಮಂಪ್ಸ್ . ಇದು ಒಂದು ವೈರಸ್ ಜನ್ಯ ಮತ್ತು ತಾನೇ ವಾಸಿ ಯಾಗುವ ಕಾಯಿಲೆ .
ಈ ಕಾಯಿಲೆ ಲಾಲಾರಸ ಉತ್ಪತ್ತಿ ಮಾಡುವ ಪ್ಯಾರೋಟಿಡ್ ಗ್ರಂಥಿಯನ್ನು ಮುಖ್ಯವಾಗಿ ಬಾಧಿಸುವುದಾದರೂ ಉಳಿದ ಲಾಲಾ ಗ್ರಂಥಿ ಗಳು ,ವೃಷಣ ಬೀಜ ,ಅಂಡಾಶಯ ,ಮೇದೋಜೀರಕ ಗ್ರಂಥಿ , ಅಪರೂಪಕ್ಕೆ ಮೆದುಳನ್ನೂ . ಒಂದು ಅಥವಾ ಎರಡು ಪ್ಯಾರೋಟಿಡ್ ಗ್ರಂಥಿ ಊದಿ ಕೊಂಡು ವಿವರೀತ ನೋವು ,ಜ್ವರ ಬರುವುದು . ಕೆಲವರಲ್ಲಿ ವೃಷಣ ಬಾಧೆ ಪ್ಯಾರೋಟಿಡ್ ಊತ ಕಡಿಮೆ ಆದಮೇಲೆ ಅಥವಾ ತತ್ಸಮಯ ಬರಬಹುದು .ಅಂಡಾಶಯ ಅಥವಾ ಮೇದೋಜೀರಕ ಗ್ರಂಥಿ ಗೆ ಕಾಯಿಲೆ ಬಂದರೆ ಹೊಟ್ಟೆ ನೋವು ಉಂಟಾಗುವುದು
ಈ ಕಾಯಿಲೆಗೆ ನೋವು ನಿವಾರಕಗಳನ್ನು ಕೊಟ್ಟು ವಿಶ್ರಾಂತಿ ಸಲಹೆ ಮಾಡುವರು . ಮಂಪ್ಸ್ ವೈರಸ್ ಗೆ ಔಷಧಿ ಇಲ್ಲ . ತಡೆಗಟ್ಟುವ ಲಸಿಕೆ ಇದೆ . ಮಕ್ಕಳ ಲಸಿಕಾ ಕಾರ್ಯಕ್ರಮದಲ್ಲಿ ಎಂ ಎಂ ಆರ್ ನಲ್ಲಿ ಮೊದಲನೇ ಎಂ ಮಂಪ್ಸ್ . ಲಸಿಕೆ ಕೊಂಡವರಲ್ಲಿ ಕೂಡಾ ಈ ವರ್ಷ ಸ್ವಲ್ಪ ತೀವ್ರತರ ನೋವು ಬಂದಂತೆ ಇದೆ . ವೈರಸ್ ರೂಪ ಬದಲಿಸುವುದು ಕಾರಣ ಇರ ಬಹುದು .
ಲಾಲಾ ರಸದಲ್ಲಿ ವೈರಾಣು ಇರುವುದು ,ಜಲ ಬಿಂದು ರೂಪದಲ್ಲಿ ಗಾಳಿ ಮೂಲಕ ಹರಡುವುದು .
ಎರಡೂ ವೃಷಣಗಗಳ ಬಾಧೆ ಬಂದರೂ ವೀರ್ಯಾಣುಗಳ ಕೊರತೆ ಅಪರೂಪದಲ್ಲಿ ಆಗ ಬಹುದಷ್ಟೇ .
ಬಾಲಂಗೋಚಿ : ನನಗೆ ಬಾಲ್ಯದಲ್ಲಿ ಕೆಪ್ಪಟ್ರಾಯ ಬಂದಿತ್ತು .ಆಗ ಅದಕ್ಕೆ ಗಾಮಟೆ ತೊಗಟೆ ಅರೆದು ಹಚ್ಚುತ್ತಿದ್ದು ಕಹಿ ಕಷಾಯ ಕೊಡುತ್ತಿದ್ದರು . ಒಮ್ಮೆ ಕಾಯಿಲೆ ಬಂದರೆ ನೈಸರ್ಗಿಕ ರೋಗ ಪ್ರತಿಬಂಧಕ ಶಕ್ತಿ ಬರುವುದು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ