ಮೊನ್ನೆ ಕುತೂಹಲದಿಂದ ತರಿಸಿದ್ದ ಶ್ರೀ ಟಿ ಜಿ ಮುಡೂರು ಅವರ' ಬೊಲ್ಪಾನಗ ಮುಗ್ತು ' ಅರೆ ಭಾಷೆಯ ನಾಟಕದ ಕನ್ನಡ ಅನುವಾದ (ಅನು; ಡಾ ಕರುಣಾಕರ ನಿಡುಂಜಿ ). ಲೇಖಕರು ಕನ್ನಡ ತುಳು ಹವ್ಯಕ ,ಅರೆ ಭಾಷೆ ಇತ್ಯಾದಿಗಳಲ್ಲಿ ಕೃತಿ ರಚನೆ ಮಾಡಿರುವ ಉಲ್ಲೇಖ ಇದೆ . ಶಿಷ್ಯ ಗಣ ಮೆಚ್ಚಿದ ಪ್ರತಿಭಾವಂತ ,ನಿಷ್ಟಾವಂತ ಶಿಕ್ಷಕರು ಎಂದು ಕೇಳಿದ್ದೇನೆ .. ನನಗೆ ತಿಳಿದಂತೆ ಅವರ ಗರಡಿಯಲ್ಲಿ ಪಳಗಿದ ಕೆಲವು ಮಿತ್ರರು ಇದ್ದಾರೆ . ಗುರುವಿನ ಗುಣ ಶಿಷ್ಯರ ಲ್ಲಿ ಕಾಣಬಹುದು .
ಇದೊಂದು ನಗೆ ಪ್ರಹಸನ ಎಂದು ಕರೆದಿದ್ದರೂ ಆಗಿನ ಕಾಲದ ಗ್ರಾಮೀಣ ಜೀವನದ ಚಿತ್ರಣ ಚೆನ್ನಾಗಿ ಬಂದಿದೆ .(ಮೂಲಕೃತಿ ರಚನೆ ೧೯೫೬ ರಲ್ಲಿ ). ಲೇಖಕರು ಯಕ್ಷಗಾನ ಪ್ರಿಯರು ;ಹಲವು ಪಾತ್ರಗಳು ಸಮಯೋಚಿತವಾಗಿ ಜನಪ್ರಿಯ ಪ್ರಸಂಗ ದ ಸಾಲುಗಳನ್ನು ಸಂಭಾಷಣೆಯಲ್ಲಿ ಬಳಸಿವೆ . ಬೇಟೆ ,ಬೇಟ ,ಯಕ್ಷಗಾನ ಆಟ ,ಜಾತ್ರೆಯ ಕೂಟ ,ಕೋಳಿ ಕಟ್ಟ ,ತೆಂಗಿನ ಕಾಯಿ ಕುಟ್ಟುವುದು ಇತ್ಯಾದಿ ಅಂದಿನ ಗ್ರಾಮೀಣ ಜೀವನದ ಹಾಸುಹೊಕ್ಕಾಗಿದ್ದ ಅಂಶಗಳ ಚಿತ್ರಣ ಇಲ್ಲಿ ಕಾಣಬಹುದು .
ಇದರಲ್ಲಿ ಬಂದ ಒಂದು ಗಾದೆ ನನಗೆ ಇಷ್ಟ ವಾಯಿತು .ಮಗಳ ಮದುವೆಗೆ ಹುಡುಗ ಹುಡುಕುವಾಗ ''ಮುಂದಾಸಿನವ ಸಿಗಲಿಲ್ಲ ,ಮುಟ್ಟಾಳೆ ಯವನು ಇಷ್ಟವಿಲ್ಲ "-ಎಂಬ ಧೋರಣೆಯಿಂದ ಎಲ್ಲೂ ಸರಿ ಆಗಲಿಲ್ಲ ಎಂದು .ಇದು ಮೂಲತಃ ತುಳು ಗಾದೆ ಇರ ಬೇಕು "ಮುಂಡಾಸುದಾಯೆ ತಿಕ್ಕುಜ್ಯೆ ,ಮೂಟ್ಟಾಲೆ ದಾಯೆ ಆಪುಜ್ಜಿ" ಎಂದು ಇರಬೇಕು . ದೊಡ್ಡ ಮನೆತನದವರು ಸಿಗರು ,ಬಡವರು ಆಗದು ಎಂಬ ಅರ್ಥ .
ಅರೆ ಭಾಷೆಯ ಒಂದು ಕೃತಿಯನ್ನು ಕನ್ನಡಕ್ಕೆ ಹುಡುಕಿ ತಂದು ಪ್ರಕಟಿಸಿದ ಕುವೆಂಪು ಭಾಷಾ ಪ್ರಾಧಿಕಾರದ ಕಾರ್ಯ ಮೆಚ್ಚುವಂತಹುದು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ