ಒಂದನೇ ಪುಸ್ತಕ 1843 1ನೇ ಜೂಲೈ ಕ್ರಯವು 1ದುಡ್ಡು
ಪೀಠಿಕೆ
ಮಂಗಲೂರಿನವರು ಮೊದಲಾದ ಯೀ ದೇಶಸ್ಥರು ಕತೆಗಳ೦ನೂ ವರ್ತಮಾನಗಳ೦ನೂ ಕೇಳುವದರಲ್ಲಿಯೂ ಹೇಳುವದರಲ್ಲಿಯೂ ಬಹಳ ಯಿಚ್ಛೆ ಯುಳ್ಳ ವರಾಗಿರುತ್ತಾರೆ .
ಬೆಳಿಗ್ಗೆ ಬಂದ್ರಂದಲ್ಲ್ಯಾ ಗಲಿ ,ಕಚೇರಿ ಹತ್ತರವಾಗಲೀ ವೊಬ್ಬನು ಬಾಯಿಗೆ ಬಂದ ಹಾಗೆ ವೊಂದು ಮಾತಾಡಿದರೆ ಅದ೦ನು ಬೇರೊಬ್ಬನು ಆಶ್ಚರ್ಯದಿಂದ ಹೇಳಿ ಯಿ೦ನೊಬ್ಬನಿಗೆ ಹೇಳಿ ಸಾಯಂಕಾಲ ಪರಿಯಂತರ ಸುಳ್ಳು ಸುದ್ದಿಯಿಂದ ವೂರೆಲ್ಲ ತುಂಬಿಸುತ್ತಾರೆ .
ಮರುದಿನ ನಿ೦ನಿನ ವರ್ತಮಾನ ಸುಳ್ಳು ಯ೦ತಾ ಕಾಣುವಷ್ಟರೊಳಗೆ ಯೆ೦ಮೆ ಮೊಲೆಯಂತೆ ಮತ್ತೆ ಹುಟ್ಟಿ ಆಯ್ತು .
ಯೀ ಪ್ರಕಾರವಾಗಿ ಬಹಳ ಜನರು ಕಾಲಕ್ರಮಣ ಮಾಡುತ್ತಾರೆಂದು ಕೆಲವು ವರ್ಷದಿಂದ ಯಿಲ್ಲಿ ವಸ್ತಿಯಾಗಿದ್ದ ಕೆಲವರು ತಿಳು ಕೊಂಡು ಯಿದರಲ್ಲಿ ಪ್ರಯೋಜನ ಪ್ರಯೋಜನ ವಿಲ್ಲವೆಂದು ಯೀ ಮನುಷ್ಯರ ಸಮಾಚಾರ ಆಸರಕ್ಕೆ ಯೋಗ್ಯವಾಗಿ ಪೂರೈಸಬೇಕೆಂದು ಆಲೋಚನೆ ಮಾಡಿದ್ ದರಿಂದ ನಿಜ ಸಮಾಚಾರದ ಸಂಗ್ರಹವ೦ನು ಕೂಡಿಶಿ ಪಕ್ಷಕ್ಕೆ ವೊಂದು ಕಾಗದವ೦ನು ಛಾಪಿಸಿ ಸ್ವಲ್ಪ ಕ್ರಯಕ್ಕೆ ಜನರ ಕೈಯಲ್ಲಿ ಶೇರಿಸ ಬೇಕೆಂಬದಾಗಿ ನಿಶ್ಚಯಿಸಿ ಅಧೆ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ