ಬೆಂಬಲಿಗರು

ಮಂಗಳವಾರ, ಅಕ್ಟೋಬರ್ 6, 2020

ಹೆಪಟೈಟಿಎಸ್ ಸಿ

 

  Sweden Nobel Medicine                                      ಈ  ವರ್ಷದ  ವೈದ್ಯಕೀಯ ಸಂಶೋಧನೆ ಗೆ  ಇರುವ  ನೋಬೆಲ್  ಪ್ರೈಜ್  ಹಾರ್ವೆಅಲ್ಟರ್,ಮೈಕೆಲ್ಹ್ ಹ್ಯೂಟನ್ ಮತ್ತು ಚಾರ್ಲ್ಸ್ ರೈಸ್ ಅವರಿಗೆ ಸಂದಿದೆ. ಪಿತ್ತ ಜನಕಾಂಗ ಅಥವಾ  ಲಿವರ್ ನ  ಸೋಂಕು ಉಂಟು ಮಾಡುವ  ಹೆಪಟೈಟೀಸ್ ಸಿ  ಎಂಬ ರೋಗಾಣುವನ್ನು ಕಂಡು ಹಿಡಿದ ಮಹತ್ವದ  ಸಾಧನೆ ಅವರದು . ಲಿವರ್ ನ  ಸೋಂಕು  ಸಾಮಾನ್ಯವಾಗಿ  ವೈರಸ್ ಗಳಿಂದ  ಬರುವುದು .ಅದರಲ್ಲಿ ಹೆಪಟೈಟೀಸ್ ಎ  ಮತ್ತು  ಇ  ನೀರು ಮತ್ತು ಆಹಾರದ ಮೂಲಕ ಹರಡುವಂತಹವು  ಮತ್ತು  ದೂರಗಾಮಿ  ದುಷ್ಪರಿಣಾಮ  ಉಂಟು ಮಾಡುವಂತಹವಲ್ಲ . ಆದರೆ  ಹೆಪಟೈ ಟೀಸ್  ಬಿ ಮತ್ತು ಸಿ ರಕ್ತ  ಮತ್ತು ಲೈಂಗಿಕ  ಸಂಪರ್ಕದ  ಮೂಲಕ ಹರಡುವಂತಹವು .ಮತ್ತು  ಒಮ್ಮೆ  ಕಾಯಿಲೆ ಶಮನ ಗೊಂಡರೂ  ಒಳಗೊಳಗೇ  ಲಿವರನ್ನು  ನಾಶ ಗೊಳಿಸುವ  ಶಕ್ತಿ ಇರುವಂತಹ  ವೈರಸ್ ಗಳು .

  ಈ ವೈರಸ್ ನ   ಗುರುತಿಸುವಿಕೆ ಯಿಂದ   ಅದರ ಹಾವಳಿ ತಡೆ ಗಟ್ಟಲು  ಸಹಾಯ ಆಗಿದೆ .ಮುಖ್ಯವಾಗಿ  ರೋಗಿಗೆ ರಕ್ತ ಕೊಡುವಾಗ  ಮೊದಲೇ  ದಾನಿಯ ರಕ್ತ ಪರೀಕ್ಷೆ

ಮಾಡಿ   ಕೊಡುವುದರಿಂದ   ನಮ್ಮ ಅರಿವಿಗೆ  ಬಾರದೇ ರೋಗ ಹರಡುವುದು  ತಪ್ಪುವುದು . ಬಿ ಮತ್ತು ಸಿ ವೈರಸ್  ಲಿವರ್ ನ ಸೋಂಕು ಮಾತ್ರ ಅಲ್ಲದೆ  ಸಿರೋಸಿಸ್

ಮತ್ತು  ಕಾನ್ಸರ್  ಎಂಬ  ಗಂಭೀರ  ಕಾಯಿಲೆ ಉಂಟು ಮಾಡ ಬಲ್ಲವು .

   ಈ  ತಂಡವು 1982 ರಿಂದ  1999 ರ ಅವಿರತ ಶ್ರಮ ದಿಂದ  ವೈರಸ್ ನ ರೂಪರೇಷೆ  ಕಂಡು ಹಿಡಿದರು . ವೈರಸ್  ಎ ಮತ್ತು ಬಿ ಯನ್ನು ಮೊದಲೇ ಗುರುತಿಸಿದ್ದರು .ಆದುದರಿಂದ  ಎ ಮತ್ತು ಬಿ ವೈರಸ್  ಪರೀಕ್ಷೆಯಲ್ಲಿ ಸಿಗದೇ  ಉಳಿದ ಲಿವರ್ ನ ಸೋಂಕುಗಳನ್ನು  ನೋನ್ ಎ ನೋನ್ ಬಿ ಎಂದು  ಕರೆಯಲಾಗುತ್ತಿತ್ತು .ಬಿ ಮತ್ತು ಎ ವೈರಸ್ ಗೆ   ವ್ಯಾಕ್ಸಿನ್ ಕಂಡು ಹಿಡಿದಿರುವರು .ಆದರೆ  ಸಿ ವೈರಸ್ ಗೆ  ಇನ್ನೂ ಆಗಿಲ್ಲ .ಇದನ್ನು ಯಾಕೆ ಹೇಳುತ್ತಿದ್ದೇನೆಂದರೆ  ದಶಕಗಳ ಹಿಂದೆ ಕಂಡು ಹಿಡಿಯಲ್ಪಟ್ಟ   ವೈರಸ್ ಗೆ ಇನ್ನೂ  ವ್ಯಾಕ್ಸಿನ್ ತಯಾರಿಸಲು ಆಗಿಲ್ಲ .ಮೊನ್ನೆ ಮೊನ್ನೆ ಗುರುತಿಸಲ್ಪಟ್ಟ  ಕೋವಿಡ್ 19 ಗೆ  ವ್ಯಾಕ್ಸಿನ್ ಆಗಿಲ್ಲ ಎಂದು ನಾವು ಚಡಪಡಿಸುತ್ತಿದ್ದೇವೆ .

ಇಂದು  ರಕ್ತದಾನಿಗಳ ರಕ್ತದಲ್ಲಿ  ಎಚ್ ಐ ವಿ , ಹೆಪಟೈಟೀಸ್ ಬಿ ಮತ್ತು ಸಿ ಇದೆಯೇ ಎಂದು ಪರೀಕ್ಷೆ ಮಾಡಿ ಇಲ್ಲವೆಂದರೆ ಮಾತ್ರ ತೆಗೆದು ಕೊಳ್ಳುವರು .ಇದರಿಂದ ಖರ್ಚು ಸ್ವಲ್ಪ ಬೀಳುವುದು  .ಆದರೆ  ಅದರ ಲಾಭ ಮಾತ್ರ ಎಷ್ಟೆಂದು ಹೇಳಬೇಕಿಲ್ಲ .ವರುಷಗಳ ಹಿಂದೆ  ನೇರವಾಗಿ ರಕ್ತ ಸಂಗ್ರಹಿಸಿ  ಗ್ರೂಪ್  ಮ್ಯಾಚ್ ಆದರೆ ರಕ್ತ ಕೊಡುತ್ತಿದ್ದೆವು .ಅದರಿಂದ ಅರಿವಿಲ್ಲದೆ ಎಸ್ಟೋ ಮಂದಿಗೆ  ರೋಗ ಪ್ರಸಾರ ಆಗಿರ ಬಹುದು .ಆಸ್ಪತ್ರೆಯಲ್ಲಿ  ಶಸ್ತ್ರ ಚಿಕಿತ್ಸೆ ಗೆ  ಮೊದಲು  ಈ ವೈರಸ್ ಗಳ  ಟೆಸ್ಟ್           ಕ ಡ್ಡಾಯ .ಯಾಕೆಂದರೆ  ವೈದ್ಯರು ಮತ್ತು ಸಿಬ್ಬಂದಿ  ಹೆಚ್ಚು  ಎಚ್ಚರಿಕೆ  ತೆಗೆದುಕೊಳ್ಳುವರು .ಕೆಲವು ಕಡೆ  ಇವು ಪಾಸಿಟಿವ್ ಇರುವವರಿಗೆ  ಬೇರೆ  ಓಪರೇಷನ್  ಥಿಯೇಟರ್  ಇವೆ.

 ಹೆಪಾಟಿಕ್  ಎಂದರೆ ಲಿವರ್ ಗೆ ಸಂಬಂದಿಸಿದಂತಹುದು  ಎಂದು ಅರ್ಥ .ಲಿವರ್ ನ ಸೋಂಕಿಗೆ  ಹೆಪಟೈಟೀಸ್ ಎನ್ನುವರು .ಲಿವರ್ ನ ಸೋಂಕು ಗೆ  ಬಹಳಷ್ಟು ಕಾರಣ ಈ ವೈರಸ್ ಗಳು .ವಾಡಿಕೆಯಲ್ಲಿ  ಜಾಂಡಿಸ್ ಅಥವಾ ಮಂಜ ಪಿತ್ತ  ಎಂದು ಕರೆಯುವುದು ಇದನ್ನೇ . ಲಿವರ್ ನ  ಸೋಂಕು   ಮಲೇರಿಯಾ ದಂತ  ಪರೋಪಜೀವಿ ,ಇಲಿ ಜ್ವರ ಉಂಟು ಮಾಡುವ  ಬ್ಯಾಕ್ಟೀರಿಯಾ  ಗಳಿಂದಲೂ  ಬರ ಬಹುದು .ಆದುದರಿಂದ  ಎಲ್ಲಾ  ಹೆಪಟೈಟೀಸ್  ವೈರಸ್ ಜನ್ಯ ಅಲ್ಲ .ಮದ್ಯ ಪಾನ  ,ಕೆಲವು ಔಷಧಿಗಳೂ  ಹೆಪಟೈಟೀಸ್  ಉಂಟು ಮಾಡ ಬಲ್ಲುವು .

ವೈರಸ್ ಕಾಯಿಲೆಗಳು  ಬಹುತೇಕ ತನ್ನಿಂದ ತಾನೇ  ಉಪಶಮನ ಹೊಂದುವುವು .ಈ ಸಮಯದಲ್ಲಿ  ಕೆಲವರು ತಮಗೆ ಹಳ್ಳಿ ಮದ್ದು ,ಆಯುರ್ವೇದ ,ಇಂಗ್ಲಿಷ್ ಔಷಧಿ ಯಿಂದ  ಗುಣವಾಯಿತು ಎಂದು ಕೊಳ್ಳುವರು .ಆದರೆ ವಾಸ್ತವ ಬೇರೆ . ಹೆಪಟೈಟಿಸ್ ಸಿ  ರೋಗಕ್ಕೆ ಔಷಧಿ ಇದೆ.

 ಜಾಂಡಿಸ್ ಒಂದು ರೋಗ ಲಕ್ಷಣ ಮಾತ್ರ . ಅದಕ್ಕೆ ಲಿವರಿನ ಸೋಂಕು ಸಾಮಾನ್ಯ ಕಾರಣ ಆದರೆ  ,ಕೆಂಪು ರಕ್ತ ಕಣಗಳ  ಹೆಚ್ಚಿದ ನಾಶ ,ಲಿವರಿಂದ ಕರುಳಿಗೆ  ಸಂಪರ್ಕಿಸುವ ನಾಳದ ಸೋಂಕು ,ಕಲ್ಲು  ಅಥವಾ ಗಡ್ಡೆ ಯಿಂದ ಹಳದಿ ಕಾಮಾಲೆ ಬರ ಬಹುದು .ಆದುದರಿಂದ  ಕಾಮಾಲೆ ಗೆ ಹಳ್ಳಿ ಮದ್ದು ಸಾಕು ಎಂದು ಕುಳಿತು ಕೊಳ್ಳ ಬಾರದು .

ನಾನು ಹಿಂದಿನ ಬ್ಲೋಗ್ನಲ್ಲಿ ಬರೆದಂತೆ  ಜಾಂಡಿಸ್ ಎಂಬುದು  ಕೆಂಪು ರಕ್ತ ಕಣಗಳ ಉತ್ತರ ಕಾಂಡ .ವಿವರಕ್ಕೆ  ಹಿಂದಿನ ಲೇಖನ ಗಳನ್ನು ನೋಡಿರಿ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ