ಟಿವಿ ಧಾರವಾಹಿ ,ಮೊಬೈಲ್ ,ಮಕ್ಕಳ ಎಂಟ್ರನ್ಸ್ ಪರೀಕ್ಷೆ ಇತ್ಯಾದಿಗಳ
ಭರಾಟೆಯಲ್ಲಿ ಮನೆಯಲ್ಲಿ ಹಿರಿಯರ ಬೇಕು ಬೇಡ ಕೇಳುವರಿಲ್ಲದಾಗಿದೆ.ಮಕ್ಕಳಿಗೆ
ಸಣ್ಣ ಶೀತ ಜ್ವರವಾದರೂ ತಂದೆ ತಾಯಿಗಳು ಆಸ್ಪತ್ರೆಗೆ ಓಡಿ ಬರುವರು
.ಮದುವೆಯಾದ ಹೆಣ್ಣು ಮಕ್ಕಳು ಗರ್ಭಿಣಿ ಯಾದಾಗ ಮಾಸ ಮಾಸ ತಪಾಸಣೆಗೆ
ಪ್ರಸವ ಕ್ಕೆ ಬರುವಾಗ ಹಲವು ನೆಂಟರು ಕಾಣ ಬರುವರು .ಜೊತೆಗೆ ಹಣ್ಣು ಹಂಪಲು ಇರುವುದು .
ಅನುಕೂಲವಂತರ ಮನೆಯ ಹಿರಿಯರು ಆಸ್ಪತ್ರೆಯಲ್ಲಿ ದಾಖಲು ಆದರೆ ನೋಡ
ಬರುವವರು ಕಡಿಮೆ .ಸಾಂಪತ್ತಿಕವಾಗಿ ಅನುಕೂಲ ಇಲ್ಲದವರೇ ವಾಸಿ .ಹಿರಿಯರ
ಮೇಲೆ ಅಲ್ಪ ಸ್ವಲ್ಪ ಗೌರವ ಪ್ರೀತಿ ಉಳಿದಿದೆ.ತುಂಬಾ ಅನುಕೂಲ ಇರುವವರು
ಕೆಲಸದ ಆಳನ್ನು ಹಿರಿಯರ ದೇಖ ರೇಖೆಗೆ ಬಿಟ್ಟು ಹೋಗುವರು .ಹಿಂದೆಲ್ಲಾ
ತುರ್ತು ವಿಭಾಗದಲ್ಲಿ ದಾಖಲಾದ ರೋಗಿಯ ಬಂಧುಗಳು ಆತಂಕದ ಮುಖ ಹೊತ್ತು
ಹೊರಗಡೆ ಕಾಯುತ್ತಿರುವ ದೃಶ್ಯ ಸಾಮಾನ್ಯ ವಾಗಿದ್ದು , ರೌಂಡ್ಸ್ ಮುಗಿಸಿ ಬಂದ
ವೈದ್ಯರಿಗೆ ಮುತ್ತಿಗೆ ಹಾಕುತ್ತಿದ್ದರು .ಈಗ ಮೊಬೈಲ್ ನಂಬರ್ ಕೊಟ್ಟು ಹೋದ
ರೋಗಿಯ ಸಂಬಂಧಿಗಳನ್ನು ವೈದ್ಯರು ಹುಡುಕಿ ಕೊಂಡು ಹೋಗ ಬೇಕಾದ ಪರಿಸ್ಥಿತಿ
ಬಂದಿದೆ.
ಮನೆಯಲ್ಲಿ ನಿಶ್ಚಯವಾದ ಮಕ್ಕಳ ಮದುವೆ ಸಮಯದಲ್ಲಿ ಅಜ್ಜನೋ ಅಜ್ಜಿಯೋ
ಕಾಯಿಲೆ ಬಿದ್ದರೆ ಮಾತ್ರ ರಾಜೋಪಚಾರ ಸಿಗುತ್ತದೆ .ಆಸ್ಪತ್ರೆಯಲ್ಲಿ ಅವರಿಗೆ
ಹಾಲು ಹಣ್ಣು ಹಂಪಲು ಯಥೇಚ್ಛ ಸರಬರಾಜು ಆಗುವುದು .ದಿನಾಲೂ ವೈದ್ಯರನ್ನು
ಬಂದು ವಿಚಾರಣೆ ಮಾಡುವರು .ಮದುವೆ ಮುಗಿಯಿತೋ ಡಿಸ್ಚಾರ್ಜ್ ಮಾಡಿ
ಮೂಲೆಗೆ ಎಸೆಯುವರು .
ಹಾಗೆಂದು ಮನೆಯ ಕಿರಿಯರು ಕೆಟ್ಟವರಲ್ಲ .ದೈವ ಭಕ್ತರು .ವಾರ ವಾರ ದೇವಸ್ಥಾನ
ಕ್ಕೆ ಹೋಗುವರು ,ಪೂಜೆ ಪಾರಾಯಣ ಮಾಡುವರು .ದಾನ ಧರ್ಮ ಮಾಡುವರು .
ಹೆತ್ತ ತಾಯಿ ತಂದೆಯ ಚಿತ್ತವ ನೋಯಿಸಿ ಹತ್ತು ದಾನವ ಮಾಡಿ ಫಲವೇನು
ಎಂದು ಅಂದು ದಾಸರು ಹಾಡಿದ್ದು ಇದಕ್ಕೇ ಇರಬೇಕು .
ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ನಮಗೆ ಸಮಾಜದ ಧರ್ಮ ಪ್ರಜ್ಞೆಯ ನೈಜ
ದರ್ಶನ ಆಗುವುದು .
ರೋಗ ಬಂದು ಆಸ್ಪತ್ರೆಯಲ್ಲಿ ಇರುವಾಗ ಬಂಧು ಮಿತ್ರರು ಬಂದು ಶುಭ ಹಾರಿಸಿದರೆ
ತಾವಿನ್ನೂ ಸಮಾಜಕ್ಕೆ ಬೇಕಾಗಿದ್ದೇವೆ ಎಂಬ ಭಾವವೇ ರೋಗ ಗುಣ ಮುಖವಾಗಲು
ಕಾರಣ ವಾಗ ಬಲ್ಲ್ಲುದು .ಇಲ್ಲದಿದ್ದರೆ ಯಾರಿಗೆ ಯಾರುಂಟು ಎರವಿನ ಸಂಸಾರ
ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ ಎಂಬ ವಾಕ್ಯ ನಮ್ಮನ್ನೇ ಉದ್ದೇಶಿಸಿ
ಬರೆದಂತೆ ತೋರುವುದು .
ಹಿರಿಯರ ಗೊಣಗಾಟ ತಾಳ ಲಾರದೆ ವೈದ್ಯರ ಮುಂದೆ ತಂದು ಕುಕ್ಕಿ ನಿಮಗೆ
ಏನು ವಕ್ಕರಿಸಿದೆಯೋ ಎಲ್ಲಾ ಇಲ್ಲೇ ಕಕ್ಕಿ ,ಮತ್ತೆ ಮನೆಯಲ್ಲಿ ವಟ ವಟಾ ಎಂದು
ನಮ್ಮ ತಲೆ ತಿನ್ನ ಬೇಡಿ ಎಂದು ಕೋಪದಿಂದ ಗರ್ಜಿಸುವ ಮಕ್ಕಳನ್ನು ಹೆಚ್ಚಾಗಿ
ಕಾಣುತ್ತಿದ್ದೇವೆ .ಪಾಪ ಆ ಹಿರಿಯರಿಗೆ ಹೇಳಲಾರೆ ನಾನು ತಾಳ ಲಾರೆ ಎಂಬ ಸ್ಥಿತಿ .
ನಮ್ಮ ಅರ್ಥಿಕ ಅಭಿವೃದ್ದಿ ,ಜಾಗತೀಕರಣ ದ ಕೆಲವು ಪರಿಣಾಮ ಗಳು ಇವು .
ಇಲ್ಲಿ ಕಿರಿಯ ತಲೆಮಾರಿನವರನ್ನು ಕೆಟ್ಟದಾಗಿ ತೋರಿಸುವುದು ಸಾಧುವಲ್ಲ .
ಕಾಲದೊಡನೆ ಆಗುವ ಬದಲಾವಣೆ .ಎಲ್ಲಾ ಕೆಲಸಗಳಿಗೂ ಯಂತ್ರ .ವಾಹನ
ಅವಲಂಬನೆ ಆದ ಮೇಲೆ ಶರೀರ ಶ್ರಮ ಮತ್ತು ನೋವು ಹಂಚಿಕೊಳ್ಳುವ
ಮನಸ್ಸು ಬೇಡುವ ಹಿರಿಯರ ಆರೈಕೆ ತ್ರಾಸ ದಾಯಕವಾಗಿ ತೋರುವುದು .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ