ನಮ್ಮ ಶರೀರದ ರೋಗ ರಕ್ಷಣಾ ವ್ಯವಸ್ಥೆಯ ಬಗ್ಗೆ ಹಿಂದೆ ಇದೇ ಬ್ಲಾಗ್ ನಲ್ಲಿ
ಬರೆದಿದ್ದೇನೆ. ಯಾವುದೇ ಹೊರಗಿನ ರೋಗಾಣು ಅಥವಾ ವಸ್ತು ಶರೀರ ದ
ಸಂಪರ್ಕ ಕ್ಕೆ ಬಂದೊಡನೆ ನಮ್ಮ ಶರೀರದ ರಕ್ಷಕ ಕಣಗಳು ಅವುಗಳನ್ನು
ಗುರುತಿಸಿ ಅವುಗಳ ವಿರುದ್ಧ ಹೊರಾಡಲು ಬಿಳಿ ರಕ್ತ ಕಣಗಳಿಗೆ ಆದೇಶ ನೀಡುತ್ತವೆ .
ಬಿಳಿ ರಕ್ತ ಕಣಗಳು ನೇರವಾಗಿ ಅಥವಾ ತಾವು ಉತ್ಪಾದಿಸುವ ರೋಗ ನಿರೋಧಕ
(antibody) ವಸ್ತುಗಳ ಸಹಾಯದಿಂದ ಈ ಕಾರ್ಯವನ್ನು ನೆರವೇರಿಸುತ್ತವೆ .
ಕೆಲವೊಮ್ಮೆ ಈ ವ್ಯವಸ್ಥೆ ಹತೋಟಿ ತಪ್ಪಿ ನಮ್ಮ ಶರೀರದ ಸ್ವಂತ
ಅಂಗಗಳ ಮೇಲೆಯೇ ಈ ರಕ್ಷಕರು ತಪ್ಪ್ಪಿ ಧಾಳಿ ಮಾಡುವುದುಂಟು .ಇದು
ಭಸ್ಮಾಸುರನ ಕತೆಯಂತೆ .ತನ್ನ ರಕ್ಷಣೆಗೆ ಯಾರ ತಲೆಯ ಮೇಲೆ ಕೈ ಇಟ್ಟರೂ
ಅವರು ಉರಿದು ಬೂದಿಯಾಗುವಂತೆ ವರ ಪಡೆದ ಬಸ್ಮಾಸುರ ಮಾನಿನಿಯ
ಪರವಶದಲ್ಲಿ ತನ್ನ ತಲೆ ಮೇಲೆ ಕೈ ಇಟ್ಟು ಭಸ್ಮ ಆಗುತ್ತಾನೆ .
ಹಾಗೆಯೇ ಇಲ್ಲಿಯೂ ದೇಹದ ಅಂಗಗಳ ಮೇಲೆ ಬಿಳಿ ರಕ್ತ ಕಣಗಳು
ನೇರವಾಗಿ ಅಥವಾ ಪ್ರತಿ ವಸ್ತು (ಆಂಟಿಬಾಡಿ) ಗಳ ಮೂಲಕ ಹಾನಿ ಮಾಡಿ
ರೋಗ ಉಂಟು ಮಾಡುತ್ತವೆ .ಇದನ್ನು ಆಟೋ ಇಮ್ಯೂನ್ ಕಾಯಿಲೆಗಳು
ಅಥವಾ ಸ್ವಯಂ ನಿರೋಧಕ ಕಾಯಿಲೆಗಳು ಎನ್ನುವರು .
ಉದಾಹರಣೆಗೆ ಥೈರಾಯಿಡ್ ಗ್ರಂಥಿಗಳ ಮೇಲೆ ಈ ರೀತಿ ಆದರೆ
ಅದು ರೋಗ ಗ್ರಸ್ಥವಾಗಿ ಹಾರ್ಮೋನ್ ಸ್ರಾವ ಹೆಚ್ಚು ಅಥವಾ ಕಮ್ಮಿ ಆಗಿ
ಅನುಗುಣವಾದ ಕಾಯಿಲೆ ಬರ ಬಹುದು .ಮೇದೋಜೀರಕ ಗ್ರಂಥಿಯ ನಿರ್ನಾಳ
ಕೋಶಗಳು ಗುರಿಯಾದರೆ ಸಕ್ಕರೆ ಕಾಯಿಲೆ ಬರ ಬಹುದು .ಕರುಳಿನ ಮೇಲೆ
ಧಾಳಿ ಆದರೆ ಆಗಾಗ್ಗೆ ರಕ್ತ ಭೇದಿ ಯಾಗುವ ಅಲ್ಸರೆಟಿವ್ ಕೊಲೈಟಿಸ್ ನಂತಹ
ಕಾಯಿಲೆ ಬರ ಬಹುದು .ಬಹು ಅಂಗಗಳನ್ನು ಕಾಡುವ ಸಿಸ್ಟಮಿಕ್ ಲ್ಯುಪಸ್
ಏರಿಥಮಟೋಸಿಸ್ ಎಂಬ ಕಾಯಿಲೆ ಬರ ಬಹುದು .ಕೆಂಪು ರಕ್ತ ಕಣಗಳ
ಮೇಲೆ ಹಾವಳಿ ನಡೆದರೆ ಅವುಗಳ ಮರಣದಿಂದ ರಕ್ತ ಹೀನತೆ ಉಂಟಾಗ ಬಹುದು .
ಈ ಸ್ವಯಂ ನಿರೋಧಕ ಕಾಯಿಲೆಗಳು ಅಭಿವೃದ್ದಿ ಹೊಂದಿದ
ರಾಷ್ಟಗಳಲ್ಲಿ ಹೆಚ್ಚು ಕಾಣಿಸಿ ಕೊಳ್ಳುತ್ತಿವೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ