ಹೃದಯಾಘಾತ ಬಗ್ಗೆ ಎಲ್ಲರೂ ಕೇಳಿದ್ದೇವೆ .ಹೃದಯದ ಮಾಂಸಖಂಡ ಗಳಿಗೆ ರಕ್ತ ಸರಬರಾಜು ಮಾಡುವ ರಕ್ತ ನಾಳಗಳು ಹಠಾತ್ ಬಂದ್ ಆದರೆ ಹೃದಯದ ಕಾರ್ಯದಲ್ಲಿ ವ್ಯತ್ಯಯ ಆಗಿ , ರಕ್ತ ತಡೆಯ ಗಂಭೀರತೆಯನ್ನು ಹೊಂದಿಕೊಂಡು ಎದೆ ನೋವಿನಿಂದ ಹಿಡಿದು ಸಾವು ಕೂಡಾ ಸಂಭವಿಸುವುದು . ಸಂಭವದ ಕ್ಷಿಪ್ರತೆಯಿಂದ ಆಘಾತ ಎಂಬ ವಿಶೇಷಣ .
ಅದರಂತೆ ಮೆದುಳಿನ ಆಘಾತ ಅಥವಾ ಸ್ಟ್ರೋಕ್ ಎಂಬ ಕಾಯಿಲೆ ಇದೆ . ಇಲ್ಲಿ ಮಾತ್ರ ಮೂರು ಮುಖ್ಯ ಪ್ರಭೇದ ಇವೆ .ಒಂದು ; ಹೃದಯಾಘಾತದಲ್ಲಿ ಆಗುವಂತೆ ಮೆದುಳಿನ ರಕ್ತ ನಾಳಗಳು ಕೊಬ್ಬು ಶೇಖರಣೆಯಿಂದ ಸ್ಥಳೀಯ ವಾಗಿ ರಕ್ತ ಹೆಪ್ಪು ಗಟ್ಟುವಿಕೆಗೆ ಆಹ್ವಾನ ಕೊಟ್ಟು ರಕ್ತ ಸರಬರಾಜಿನಿಂದ ವಂಚಿತವಾದ ಸುತ್ತ ಮುತ್ತಲಿನ ಮೆದುಳಿನ ಜೀವಕೋಶಗಳು ನಿಷ್ಕ್ರಿಯ ಗೊಳ್ಳುವವು . ಎರಡು ; ರಕ್ತ ನಾಳಗಳು ಹಠಾತ್ ಒಡೆದು ಮೆದುಳಿನ ರಕ್ತಸ್ರಾವ ಆಗುವುದು . ಮೂರು ; ಕೆಲವು ಕಾಯಿಲೆಗಳಲ್ಲಿ ಹೃದಯ ಒಳಗೆ ಹೆಪ್ಪು ಗಟ್ಟಿದ ರಕ್ತದ ತುಣುಕುಗಳನ್ನು ಮೆದುಳಿಗೆ ಹೋಗುವ ರಕ್ತ ನಾಳಗಳ ಮೂಲಕ ಹೋಗಿ ತಟಸ್ಥ ಉಂಟು ಮಾಡುವುದು .
ಬಲ ಬಾಗದ ದೊಡ್ಡ ಮೆದುಳು ಶರೀರದ ಎಡ ಭಾಗವನ್ನೂ ಮತ್ತು ಎಡ ಪಾರ್ಶ್ವದ ದೊಡ್ಡ ಮೆದುಳು ಬಲ ಭಾಗ ಮತ್ತು ಮಾತನ್ನು ನಿಯಂತ್ರಿಸುತ್ತವೆ. ಎಡ ಮೆದುಳು ಆಘಾತ ಆದರೆ ಬಲ ಪಾರ್ಶ್ವ ವಾಯು ಅಥವಾ ಲಕ್ವಾ ಉಂಟಾಗುತ್ತದೆ . ಅದೇ ತರಹ ಎಡ ಮೆದುಳಿನ ಕ್ಷಮತೆ ಕುಂದಿದಾಗ ಮಾತಾಡುವ, ಅರ್ಥ ಮಾಡಿಕೊಳ್ಳವ ಶಕ್ತಿ ಬೀಳ ಬಹುದು . ಅದೇ ರೀತಿ ಹಿಮ್ಮೆದುಳಿಗೆ ಹಾನಿ ಆದರೆ ದೃಷ್ಟಿ ಹೋಗ ಬಹುದು . ಕಣ್ಣುಗಳು ಸರಿ ಇದ್ದರೂ ದೃಷ್ಟಿ ಗ್ರಹಣ ವ್ಯತ್ಯಯದಿಂದ ಬರುವ ಕುರುಡು ತನ.ಸಿಟಿ ಸ್ಕ್ಯಾನ್ ಅಥವಾ ಎಂ ಆರ್ ಐ ಯಿಂದ ಮೆದುಳಿನ ಆಘಾತ ವನ್ನು ಪತ್ತೆ ಮಾಡುವರು .
ಅಧಿಕ ರಕ್ತದ ಒತ್ತಡ ,ಕೊಲೆಸ್ಟ್ರಾಲ್ ಇತ್ಯಾದಿ ಮೆದುಳಿನ ಆಘಾತಕ್ಕೆ ಸಾಮಾನ್ಯ ಕಾರಣಗಳು .ಹೃದಯಾಘಾತದಲ್ಲಿ ಮಾಡುವಂತೆ ಔಷಧಿ ನೀಡಿ ಹೆಪ್ಪು ಕರಗಿಸುವುದು ಮತ್ತು ರಕ್ತ ನಾಳಗಳ ಮೂಲಕ ಕೊಳಾಯಿ ಹಾಯಿಸಿ ಹೆಪ್ಪು ತೆಗೆದು ಸ್ಟೆಂಟ್ ಹಾಕುವುದು ಇಲ್ಲಿಯೂ ಇದೆ . ಮೆದುಳಿನ ಆಘಾತದಲ್ಲಿ ಕಾಯಿಲೆ ಮೆದುಳಿನಲ್ಲಿ ಇದ್ದರೂ ರೋಗ ಲಕ್ಷಣ ಅವಯವಗಳಲ್ಲಿ ಇರುವುದು . ಕೈಕಾಲುಗಳು ಉಪಯೋಗಿಸದೆ ಮರಗಟ್ಟಿ ಹೋಗದ ಹಾಗೆ ಅವಕ್ಕೆ ಪಿಸಿಯೋ ತೆರಪಿ ಅಥವಾ ವೈಜನಿಕ ವ್ಯಾಯಾಮ ಕೊಡುವರದರೂ ಮುಖ್ಯ ಚಿಕಿತ್ಸೆ ಮೆದುಳಿಗೆ ಆಗ ಬೇಕು . ಫ್ಯೂಸ್ ಹೋದಾಗ ಅದನ್ನು ಸರಿಪಡಿದೇ ಬಲ್ಬ್ ಹಾಕಿ ಪ್ರಯೋಜನ ವಿಲ್ಲ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ