ವೈದ್ಯಕೀಯ ಇಂಟರ್ನ್ ಶಿಪ್
ಎಂ ಬಿ ಬಿ ಎಸ್ ಅಧ್ಯಯನ ಕಾಲದಲ್ಲಿ ರೋಗ ಚರಿತ್ರೆ ವಿಶ್ಲೇಷಣೆ
,ರೋಗಿಯ ಪರೀಕ್ಷೆ , ಪ್ರಯೋಗಾಲಯ ಪರೀಕ್ಷೆಗಳು ,ರೋಗದ ಪತ್ತೆ ಮತ್ತು ಚಿಕಿತ್ಸೆಯನ್ನು
ಶಾಸ್ತ್ರೀಯ ವಾಗಿ ಕಲಿಸುತ್ತಾರೆ . ಅಸಂಖ್ಯಾತ ರೋಗಗಳು ,ಅಷ್ಟೇ ಪರೀಕ್ಷೆಗಳು
ಮತ್ತು ಔಷಧಿಗಳು . ಯಾವ ಹೊಸ ರೋಗದ ಬಗ್ಗೆ ಓದುವಾಗಲೂ ತಮಗೂ ಅದು ಇರ ಬಹುದೇ ಎಂಬ ಸಂಶಯ . ಇದು ಟಿ
ಬಿ , ಕುಷ್ಟ ,ಸಿಫಿಲಿಸ್ ,ಹೃದಯಾಘಾತ ,ನರ ದೌರ್ಬಲ್ಯ ಕಾಯಿಲೆ ಅಥವಾ ಗರ್ಭವತಿ ಯಾಗುವುದು
ಯಾವುದೇ ಇರ ಬಹುದು . ಮೆಡಿಕಲ್ ಸ್ಟೂಡೆಂಟ್ಸ್ ಸಿನ್ಡ್ರೋಮ್ ಎಂದು ತಮಾಷೆಗೆ ಹೇಳುವರು .
ಅಂತಿಮ ಎಂ ಬಿ ಬಿ ಎಸ್ ಪಾಸ್ ಆಗಿ ಇಂಟರ್ನ್ ಶಿಪ್ ಅಥವಾ ಹೌಸ್
ಸರ್ಜೆಂಸಿ ಒಂದು ವರ್ಷ ಕಡ್ಡಾಯ ಮಾಡ ಬೇಕು .ಇದಕ್ಕಾಗಿ
ವಾಹನ ಚಲಾವಣೆಗೆ ಲರ್ನಿಂಗ್ ಲೈಸೆನ್ಸ್ ಕೊಡುವಂತೆ ವೈದ್ಯಕೀಯ ಪರಿಷತ್ ತಾತ್ಕಾಲಿಕ ನೋಂದಣಿ ನೀಡುವುದು
.ಇದನ್ನು ಹಿಡಿದುಕೊಂಡು ರೋಗಿ ಪರೀಕ್ಷೆಗೆ ತೊಡಗುವ ವೈದ್ಯನ ಸ್ಥಿತಿ ವಾಹನ ಕಲಿಯುವವನ್ನು ನಗರದ ಕೇಂದ್ರದಲ್ಲಿ ಒಬ್ಬನೇ ಬಿಟ್ಟಂತೆ ಆಗುವುದು .ಇನ್ನು
ಕೆಲವರು ಚಕ್ರ ವ್ಯೂಹ ಹೊಕ್ಕ ಅಭಿಮನ್ಯು ವಿನಂತೆ ಆಗುವರು . ಪರಿಶೀಲನೆ ಮಾಡುವಾಗ ರೋಗಿಗೆ ತನ್ನ ದೌರ್ಬಲ್ಯ ತಿಳಿಯದಂತೆ
ಹುಸಿ ಗಾಂಭೀರ್ಯ ,ಟೊಳ್ಳು ಧೈರ್ಯ ಮುಖದಲ್ಲಿ ನಟಿಸ
ಬೇಕು .ಏನೂ ತಿಳಿಯದಿದ್ದರೆ ಒಂದಿಷ್ಟು ರಕ್ತ ಪರೀಕ್ಷೆ ಬರೆದು ಬಿಟ್ಟು ,ರೋಗಿ ಅತ್ತ ಹೋದಾಗ ಪಿ ಜಿ ಗಳ ಬಳಿ ಕೇಳಿ ತಿಳಿದು ಕೊಳ್ಳುವುದು .ಇನ್ನು ಕೆಲವರು ಬೇರೆಯವರಲ್ಲಿ
ಕೇಳುವುದು ಮರ್ಯಾದೆಗೆ ಕಮ್ಮಿ ಎಂದು ಏನಾದರೂ ಒಂದು ಬರೆದು ಕೊಡುವರು .
ಇಂಟರ್ನ್ ಶಿಪ್ ಅವಧಿಯಲ್ಲಿ ಒಂದು
ವರ್ಷವನ್ನು ಬೇರೆ ಬೇರೆ ವಿಭಾಗ ದಲ್ಲಿ ಹಂಚಿ ಹಾಕುವರು ,.
ಇದರಲ್ಲಿ ಮುಖ್ಯ ವಿಭಾಗ ಗಳೆಂದು ಪರಿಗಣಿತ ಸರ್ಜರಿ ,ಮೆಡಿಸಿನ್ ,ಮತ್ತು ಗೈನೆಕೋಲೊಜಿ ಗೆ ಸಿಂಹ ಪಾಲು . ಮಕ್ಕಳ ವಿಭಾಗ ,ಕಣ್ಣು
,ಕಿವಿ ,ಮೂಳೆ, ಚರ್ಮ
ಇತ್ಯಾದಿ ವಿಭಾಗ ,ಕಮ್ಯೂನಿಟೀ ಮೆಡಿಸಿನ್ ಎಂದು ಉಪಕೇಂದ್ರ ಗಳಲ್ಲಿ ಎಂದು
ಉಳಿದ ಸಮಯವನ್ನು ಹಂಚಿ ಹಾಕುವರು .
ಒಳ್ಳೆಯ ವೈದ್ಯನಾಗಲು ಹಿರಿಯರ ಮಾರ್ಗ
ದರ್ಶನದಲ್ಲಿ ಎಲ್ಲ ವಿಭಾಗಗಳಲ್ಲಿ ಹಗಲಿರುಳು ಆತ್ಮಾರ್ಥಕ ವಾಗಿ ಕೆಲಸ ಮಾಡ ಬೇಕು . ಹಿಂದೆ ರೋಗ ನಿರ್ಧರಣ
,ಕೇಸ್ ಶೀಟ್ ಬರೆಯುವುದು ,ಇಂಜೆಕ್ಷನ್
ಕೊಡುವುದು ,ಡ್ರೆಸ್ಸಿಂಗ್ ಮಾಡುವುದು ,ಶಸ್ತ್ರೆ
ಚಿಕಿತ್ಸೆಯಲ್ಲಿ ಸಹಕರಿಸುವುದು ,ರಕ್ತ ಗ್ರೂಪ್ ,ಕ್ರಾಸ್ ಮ್ಯಾಚಿಂಗ್ ಮಾಡಿ ರಕ್ತ ಸಂಗ್ರಹ ಮಾಡುವುದು , ಎಕ್ಸ್
ರೇ ಸ್ಕ್ರೀನಿಂಗ್ ಮಾಡುವುದು ,ಪ್ರಯೋಗಾಲಯದಿಂದ ರಿಪೋರ್ಟ್ ಗಳನ್ನು ಸಂಗ್ರಹಿಸುವುದು
, ಸಾಧಾರಣ ಹೆರಿಗೆ ಮಾಡಿಸುವುದು ಇತ್ಯಾದಿ ಅಲ್ಲದೆ ರೋಗಿ ಡಿಶ್ಚಾರ್ಜ್ ಆಗುವಾಗ
ಸಮ್ಮರಿ ಬರೆದು ಕೊಡುವುದು ಇತ್ಯಾದಿ ಮುಗಿಯದ ಕೆಲಸ .ಆದರೆ ತಮ್ಮ ಅನುಭವ ಅಧಿಕವಾಗಿ ಆತ್ಮ ವಿಶ್ವಾಸ
ಹೆಚ್ಚುತ್ತಿರುವ ಸಂತೋಷ . ತಮ್ಮ ಕೆಲಸದಿಂದ ಪ್ರಾಧ್ಯಾಪಕರಿಂದ ಸೈ ಎನಿಸಿ ಕೊಳ್ಳುವ ಕಾತುರ . ಇಲ್ಲಿ
ಹಿರಿಯ ನರ್ಸ್ ,ಡ್ರೆಸ್ಸರ್
ಮತ್ತು ಅಟ್ಟೆಂಡರ್ ಎಲ್ಲರಿಂದಲೂ ಕಲಿಯುವುದು ಸಾಕಷ್ಟು ಇತ್ತು .
ಈಗ ಎಂ ಬಿ ಬಿ ಎಸ್ ಪಾಸ್ ಆದ ಒಡನೆಯೇ
ಪಿ ಜಿ ನೀಟ್ ಅಥವಾ ಪಿ ಜಿ ಪ್ರವೇಕ್ಷಾ ತಯಾರಿಯ ಜಂಜಡ
ದಲ್ಲಿ ಇಂಟರ್ನ್ ಶಿಪ್ ನ ನೈಜ ಉದ್ದೇಶ ಮರೆಯಾಗಿದೆ . ತಾವು ಹೌಸ್ ಸರ್ಜೆಂಸಿ ಮಾಡುತ್ತಿರುವ ವಿಭಾಗದ ವಿಷಯ ಬಿಟ್ಟು ನೀಟ್ ಅಧ್ಯಯನ ಗೈಡ್ ಗಳಲ್ಲಿ ತಲ್ಲೀನರಾಗಿ
ಇರುತ್ತಾರೆ .ಯಾವುದಾದರೂ ಪ್ರೊಫೆಸರ್ ಕಟ್ಟು ನಿಟ್ಟು ಇದ್ದರೆ ಆಫೀಸಿನಲ್ಲಿ ಹೋಗಿ ಬೇರೆ ರವರ ವಿಭಾಗಕ್ಕೆ
ಹಾಕಿಸಿ ಕೊಳ್ಳುತ್ತಾರೆ .ಎಲ್ಲಾ ವೈದ್ಯಕೀಯ ಶಾಖೆಗಳಲ್ಲಿ ಯೂ ವೈದ್ಯನಾದವನಿಗೆ ಸರಾಸರಿ ಜ್ನಾನ ಬೇಕು
ಎಂಬ ಉದ್ದೇಶ ಮರೆಯಾಗುತ್ತಿದೆ . ಇಂದು ಸ್ಪೆಷಾಲಿಟಿ ,ಸೂಪರ್ ಸ್ಪೆಷಾಲಿಟಿ ಯ ಕಾಲ . ಬೇಕಾದಷ್ಟು ಸ್ಕ್ಯಾನ್ ,ರಕ್ತ ಪರೀಕ್ಷೆ
,ಇಂಟರ್ನೆಟ್ ,ವ್ಹಾಟ್ಸಪ್ಇತ್ಯಾದಿ ಇವೆ .ಆದರೆ
ರೋಗಿಯೊಡನೆ ಸಂಹವನ ,ಪರೀಕ್ಷಣ ,ಚಿಕಿತ್ಸೆ ಮಾಡುವಾಗ
ರೋಗಿಯ ಆರ್ಥಿಕ ಸ್ಥಿತಿ ಪರಿಗಣನೆ ಇತ್ಯಾದಿ ಗಳ ಪರಿಗಣನೆ ಬೇಡವೇ ಎಂಬ ಪ್ರಶ್ನೆ ಇದೆ .
ವಿಲಿಯಂ ಒಸ್ಲರ್ ಎಂಬ ವೈದ್ಯ ಪಿತಾಮಹ
ಈ ರೀತಿ ಹೇಳಿದ್ದಾನೆ .ರೋಗ ಜ್ನಾನ ವೆಂಬ ಮಹಾ ಅಧ್ಯಯನ ವನ್ನು ಸೂಕ್ತ ಗ್ರಂಥಗಳ ಸಹಾಯ ವಿಲ್ಲದೆ ಮಾಡುವುದು
ದಿಕ್ಸೂಚಿಯ ಸಹಾಯವಿಲ್ಲದೆ ಸಮುದ್ರ ಯಾನ ಮಾಡಿದಂತೆ ಆದರೆ ,ಆಸ್ಪತ್ರೆಯಲ್ಲಿ ನಿಜ ರೋಗಿಗಳ ರೋಗ ನಿಧಾನ ಮತ್ತು ಚಿಕಿತ್ಸೆ ಅಧ್ಯಯನ ಮಾಡದೇ ಇರುವುದು ಸಮುದ್ರ
ತಟಕ್ಕೇ ಹೋಗದೆ ಇರುವಂತೆ .
ವೈದ್ಯಕೀಯ ವಿದ್ಯಾರ್ಥಿಗಳಿಗೆ ರೋಗಿಯ ಪರೀಕ್ಷಾ
ವಿಧಾನ ತಿಳಿಸುವ ಹಚಿಸನ್ ಕ್ಲಿನಿಕಲ್ ಮೆಥಡ್ಸ್ ಎಂಬ
ಪುಸ್ತಕ ಇದೆ .ಅದರ ಆರಂಭದಲ್ಲಿ ಒಂದು ಪ್ರಾರ್ಥನೆ ಹೀಗಿದೆ .
“ಅನಾರೋಗ್ಯ ವಿಲ್ಲದವರನ್ನು ಅವರಷ್ಟಕ್ಕೆ
ಬಿಡದಿರುವ (ಅನವಶ್ಯಕ ಚಿಕಿತ್ಸೆ ನೀಡುವ)
ಹೊಸತರ ಬಗ್ಗೆ
ಅತೀವ ಮೋಹ ಮತ್ತು ಹಳೆಯದೆಲ್ಲ ಕೀಳು ಎಂಬ ತಾತ್ಸಾರ ತೋರುವ .ಜ್ಞಾನವನ್ನು
ವಿವೇಕದ ಮುಂದೆ , ವಿಜ್ಞಾನವನ್ನು ಕಲೆಯ ಮುಂದೆ
ಮತ್ತು ಬುದ್ದಿಮತ್ತೆಯನ್ನು
ಸಾಮಾನ್ಯ ಜ್ಞಾನ
ದ ಮುಂದೆ ಇಡುವ ,ರೋಗಿಗಳನ್ನು
ಮನುಷ್ಯರಾಗಿ
ಎಣಿಸದೆ ಕೇಸ್ ಎಂದು ನೋಡುವ ,ಮತ್ತು ನಮ್ಮ ಚಿಕಿತ್ಸೆಯು
ರೋಗವನ್ನು ಬಳಲುವುದಕ್ಕಿಂತಲೂ
ಅಸಹನೀಯವಾಗದಂತೆ ಮಾಡುವುದರಿಂದ
ನಮ್ಮನ್ನು
ರಕ್ಷಿಸು.”
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ