ನಮ್ಮ ಶಾಲೆಯಲ್ಲಿ ಹೆಸರಿಗೆ ಒಂದು ವಾಚನಾಲಯ ಇತ್ತು.ಸ್ಟಾಫ್ ರೂಂ ನ ಒಂದು ಕಪಾಟಿನಲ್ಲಿ ಪುಸ್ತಕಗಳು ಭದ್ರವಾಗಿ
ಇದ್ದವು .ಮಕ್ಕಳಿಗೆ ಅದನ್ನು ಓದಲು ಕೊಡುತ್ತಿರಲಿಲ್ಲ.ಓದುವ ಗೀಳು ಹಚ್ಚಿಕೊಂಡಿದ್ದ ನಾನು ಪಂಚಾಯತ್ ಲೈಬ್ರರಿ ಯ ಆಶ್ರಯ
ಪಡೆಯ ಬೇಕಾಯಿತು .ಪಂಚಾಯತ್ ಕಾರ್ಯದರ್ಶಿಯವರೇ ಲೈಬ್ರರಿಯನ್ .ಅವರು ಫೀಲ್ಡ್ ಕೆಲಸಕ್ಕೂ ಹೋಗುತ್ತಿದ್ದುದರಿಂದ
ನಾವು ಹೋದಾಗಲೆಲ್ಲ ಸಿಗುತಿರಲಿಲ್ಲ .ಹಲವು ಭಾರಿ ನಿರಾಶೆಯಿಂದ ಮರಳಿದ್ದು ಉಂಟು.ಈ ವಾಚನಾಲಯದಿಂದ ನಾನು
ಏನ್ ನರಸಿಂಹಯ್ಯ ನವರ ಪತ್ತೇದಾರಿ ಕಾದಂಬರಿ ಗಳಿಂದ ತೊಡಗಿ ಕಾರಂತ ,ಅ ನ ಕೃ,ಬೀಚಿ ,ಭೈರಪ್ಪ ,ರಾವ್ ಬಹಾದ್ದೂರ್
ಕುವೆಂಪು ,ಮಾಸ್ತಿ ಯವರ ಬರವಣಿಗೆಗಳನ್ನು ಓದುವ ಅವಕಾಶ ಸಿಕ್ಕಿತು.ಮುಂದೆ ಪುತ್ತೂರು ನಗರ ಗ್ರಂಥಾಲಯ ,ಹುಬ್ಬಳ್ಳಿ
ನಗರ ಗ್ರಂಥಾಲಯ ,ಮೈಸೂರ್ ,ಹಾಸನ ,ಸಕಲೇಶಪುರ ,ಮಡಿಕೇರಿ ನಗರ ಗ್ರಂಥಾಲಯ ಗಳು ,ಮದ್ರಾಸ್ ಅಯನಾವರಂ ಕನ್ನಡ ಸಂಘ
ವಾಚನಾಲಯ ,ಮದ್ರಾಸ್ ಡಿಸ್ಟ್ರಿಕ್ಟ್ ಲೈಬ್ರರಿ ,ಕೋನ್ನೆಮಾರ ಕೇಂದ್ರ ಗ್ರಂಥಾಲಯ ,ಮದ್ರಾಸ್ ಬ್ರಿಟಿಶ್ ಕೌನ್ಸಿಲ್ ಲೈಬ್ರರಿ
ಪಾಲ್ಘಾಟ್,ಕಲ್ಲಿಕೋಟೆ ನಗರ ವಾಚನಾಲಯಗಳ ಸದಸ್ಯ ನಾಗಿ ಓದುವುದನ್ನು ಮುಂದುವರೆಸಲು ನಮ್ಮ ಪಂಚಾಯತ್
ಲೈಬ್ರರಿ ಓನಾಮ ಹಾಕಿತು .
ಕನ್ಯಾನ ಶಾಲೆಯ ಹಿಂದೆ ಒಂದು ಬೋರ್ಡಿಂಗ್ ಇತ್ತು ,ರಾಮ ಭಟ್ ಎಂಬುವರು ಅದನ್ನು ನಡೆಸಿಕೊಂಡು
ಬರುತ್ತಿದ್ದರು .ಅವರೂ ಅವರ ಕುಟುಂಬದ ಸದಸ್ಯರೂ ದುಡಿದು ಈ ಊಟದ ಮನೆ ನಡೆಸುತ್ತಿದ್ದರು.ದೂರದಿಂದ ಬರುತ್ತಿದ್ದ
ಮಕ್ಕಳು ಮಧ್ಯಾಹ್ನದ ಊಟಕ್ಕೆ ಇಲ್ಲಿ ಬರುತ್ತಿದ್ದರು .ರಾಮ ಭಟ್ಟರು ಒಳ್ಳೆಯ ಜ್ಞಾನಿಯೂ ಆಗಿದ್ದರು .ಊಟ ಬಡಿಸುವ ಸಮಯ
ಅಧ್ಯಾಪಕರುಮತ್ತು ಅವರ ಮಧ್ಯೆ ಸರಸ ಸಂಭಾಷಣೆ ನಡೆಯುತ್ತಿದ್ದ್ದು ನಾವು ಎಳೆಯರು ಅದನ್ನು ಆಸ್ವಾದಿಸುತ್ತಿದ್ದೆವು .ವಾರ
ಎರಡು ವಾರಗಳಿಗೊಮ್ಮೆ ನಮ್ಮ ಮನೆಗೂ ಬಾಳೆ ಎಲೆ ಕೊಂಡು ಹೋಗಲು ಬರುತ್ತಿದ್ದರು.ಅವರ ಬೋರ್ಡಿಂಗ್ ಗೆ ಪ್ರತ್ಯೇಕ
ಬಾವಿ ಇರಲಿಲ್ಲ .ಊರ ಬಾವಿಯೋ ಫಾರ್ಲಾಂಗ್ ದೂರ .ಸರದಿಯಲ್ಲಿ ಅಲ್ಲಿಂದ ನೀರು ಸೇದಿ ತಂದು ಅಡಿಗೆ,ಸ್ನಾನ ,ಕೈ
ತೊಳೆಯುವ ನೀರು ಶೇಖರಿಸುತ್ತಿದ್ದರು .ಈಗ ಬೋರ್ಡಿಂಗ್ ಕಟ್ಟಡ ಇಲ್ಲ.ರಾಮ ಭಟ್ಟರ ಕುಟುಂಬ ವೂ ಊರು ಬಿಟ್ಟು
ಹೋಗಿದೆ .ಆ ಜಾಗದಲ್ಲಿ ಬಿಸಿ ಊಟದ ಕಟ್ಟಡ ಎದ್ದಿದೆ .
ಭಾರತ ಸೇವಾಶ್ರಮ
ನಾವು ಪ್ರೈಮರಿ ಶಾಲೆಯಲ್ಲಿ ಇದ್ದಾಗ ಧೀರೇಂದ್ರನಾಥ ಭಟ್ಟಾಚಾರ್ಯ ಎಂಬುವರ ಆಗಮನ ಕನ್ಯಾನ ಕ್ಕೆ ಆಯಿತು .ಅವರು
ಕಲಂಜಿಮಲೆಯಲ್ಲಿ ಅದಿರು ಶೋಧನೆಗಾಗಿ ಕಾರ್ಯ ನಿಮಿತ್ತ ಬಂದವರು ,ಕನ್ಯಾನದಲ್ಲಿ ನೆಲೆಸಿ ಭಾರತ ಸೇವಾಶ್ರಮ
ಆರಂಬಿಸಿದರು.ಅನಾಥ .ಬಡ ಮಕ್ಕಳಿಗೆ ಆಸರೆಯಾದರು.ಇವರಿಗೆ ಉದ್ದನೆಯ ಗದ್ದವಿದ್ದು ರವೀಂದ್ರನಾಥ ಟಾಗೂರ್ರನ್ನು
ಹೋಲುತ್ತಿದರು . ಕೈಯಲ್ಲಿ ಯಾವಾಗಲು ಒಂದು ಬೀಡಿ.ಊರು ಪರವೂರಲ್ಲಿ ಬೇಡಿ ಸಂಸ್ಥೆ ಕಟ್ಟಿದರು .ಈಗ
ಇದು ಬೆಳೆದು ಬೈರಿಕಟ್ಟೆ ಸಮೀಪ ಇನ್ನೊಂದು ವಿಶಾಲವಾದ ಇನ್ನೊಂದು ಕ್ಯಾಂಪಸ್ ಹೊಂದಿದೆ ,ಅನಾಥಾಶ್ರ ಮ ದೊಡನೆ
ವೃದ್ಧಾಶ್ರಮ ನಡೆಸಿಕೊಂಡು ಬರುತ್ತಿದೆ .ಆಶ್ರಮ ವಾಸಿ ಗಳು ಅಗರ ಬತ್ತಿ ತಯಾರಿಸಿ ಮಾರಿ ಆಶ್ರಮದ ಆರ್ಥಿಕ ಕತೆಗೆ
ತಮ್ಮ ಕೊಡುಗೆ ನೀಡುತ್ತಿದ್ದರು .ಕೇವಲ ಬೀಡಿ ಕಟ್ಟುವುದನ್ನು ಮಾತ್ರ ಕಂಡಿದ್ದ ನಮ್ಮ ಹಳ್ಳಿಗರಿಗೆ ಇದೊಂದು ಸೋಜಿಗ.
ಈ ಆಶ್ರಮ ದಿಂದ ನಮ್ಮ ಶಾಲೆಗೆ ಮಕ್ಕಳು ಬರುತ್ತಿದ್ದರು.ಇವರ ಪೈಕಿ ಒಬ್ಬರಾದ ಶ್ರೀ ಈಶ್ವರ ಭಟ್ ಭಟ್ಟಾಚಾರ್ಯರ
ಮಗಳನ್ನು ವಿವಾಹವಾಗಿ ಈಗ ಸಂಸ್ತೆಯನ್ನು ಸಮರ್ಥವಾಗಿ ನಡೆಸಿಕೊಂಡು ಬರುತ್ತಿದ್ದಾರೆ.ಜಾತಿ ಭೇಧ ವಿಲ್ಲದೆ
ಒಂದಾಗಿ ಬಾಳ ಬಹುದು ಎಂದು ತೋರಿಸಿ ಕೊಟ್ಟ ಆಶ್ರಮ.
.(ಮುಂದುವರಿಯುವುದು)