ಬೆಂಬಲಿಗರು

ಗುರುವಾರ, ಅಕ್ಟೋಬರ್ 10, 2013

ಸಾರ್ಥಕ ಶತಮಾನದ ಹೊಸ್ತಿಲಲ್ಲಿ ನನ್ನ ಶಾಲೆ

                             

 ನನ್ನ ಪ್ರಾಥಮಿಕ ವಿದ್ಯಾಭ್ಯಾಸ  ಬೋರ್ಡ್ ಹೈಯರ್ ಎಲಿಮೆಂಟರಿ ಶಾಲೆ ಕನ್ಯಾನ .ಇದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ

ತಾಲೂಕಿನಲ್ಲಿ ಇದೆ .ಕೇರಳ ಗಡಿಗೆ ತಾಗಿ ಇರುವ ಹಳ್ಳಿ   ಶಾಲೆ .ಕನ್ಯಾನ ಪ್ರಕೃತಿ ಸೌಂದರ್ಯದ ಮಡಿಲಲ್ಲಿ ಇದೆ.ಉತ್ತರಕ್ಕೆ

ತಲೆಯೆತ್ತಿ ನಿಂತ ಕಳಂಜಿಮಳೆ ಕನ್ಯಾನ ಗ್ರಾಮವನ್ನು ಮಂಚಿ ಕೊಲ್ನಾಡು ಗಳಿಂದ ಪ್ರತ್ಯೇಕಿಸುತ್ತದೆ .ಈ ಗುಡ್ಡ ದಾಟಿ

ನಮ್ಮ ಹೈ ಸ್ಕೂಲ್ ಗೆ ವಿದ್ಯಾರ್ಥಿಗಳು ಬರುತ್ತಿದ್ದರು . ದಕ್ಷಿಣ ದಲ್ಲಿ ಪಿಲಿ೦ಗುಳಿ ಶಿರಂಕಲ್ಲು .ವಿಟ್ಲದಿಂದ ಬರುವ ಮುಖ್ಯ ರಸ್ತೆ

ಕಳ೦ಜಿಮಲೆಯ ತಳ ಭಾಗಕ್ಕೆ ಸುತ್ತಿ ಬಂದು ಕನ್ಯಾನದಲ್ಲಿ ಕವಲೊಡೆದು ಒಂದು ಉಪ್ಪಳ ಕ್ಕೂ ಇನ್ನೊಂದು ಮಂಜೆಶ್ವರಕ್ಕೂ

ಹೋಗುತ್ತವೆ .ಗ್ರಾಮದ ಮೂಲೆ ಮೂಲೆಗಳಿಂದ ಮಕ್ಕಳು ನಡೆದು ಶಾಲೆಗೆ ಬರುತ್ತಿದ್ದರು .

ನಮ್ಮ ಮನೆ ಅಂಗ್ರಿ  ಕನ್ಯಾನ ಗ್ರಾಮದ ಒಂದು ಮೂಲೆಯಲ್ಲಿ ಅಳಿಕೆ ಗ್ರಾಮಕ್ಕೆ ತಾಗಿ ಇತ್ತು .ಅಲ್ಲಿಂದ ಕನ್ಯಾನಕ್ಕೆ ಮೂರು

ಮೈಲು .ಎರಡು ಮೂರು ಕಾಲು ದಾರಿಗಳಿದ್ದವು .ಹೆಚ್ಚಾಗಿ ಕಿರಿನ್ಚಿಮೂಲೆ  ಕೆಪ್ಲ ಗುಡ್ಡೆ ಗಾಗಿ ಹೋಗುತ್ತಿದ್ದೆವು .ಹೊರಡುವಾಗ

ನಮ್ಮ ಏಳೆಂಟು ಮಂದಿಯ  ಸೈನ್ಯ  ದಾರಿಯಲ್ಲಿ   ಸೇರ್ಪಡೆಯಿಂದ ಹತ್ತಿಪ್ಪತ್ತು ಮಕ್ಕಳ ದಂಡೇ ಆಗುತ್ತಿತ್ತು. ಸಣ್ಣ ಮಕ್ಕಳು

ದೊಡ್ಡವರ ಸುಪರ್ದಿಯಲ್ಲಿ .ಹೊಲ ಗದ್ದೆ ,ಗುಡ್ಡ  ಝರಿ ಗಳನ್ನು ದಾಟಿ ಹೋಗುವ ನಮಗೆ ಪ್ರಕೃತಿಯಿಂದಲೇ ಮೊದಲ

ಪಾಠ ಆಗುತ್ತಿತ್ತು.ಜೊತೆಗೆ ನಮಗರಿವಿಲ್ಲದಂತೆಯೇ ವ್ಯಾಯಾಮ .

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ