ಬೆಂಬಲಿಗರು

ಭಾನುವಾರ, ಆಗಸ್ಟ್ 18, 2013

ಏರುತ್ತಿರುವ ಆತ್ಮಹತ್ಯಾ ಪ್ರಕರಣಗಳು

ಒಂದೇ ದಿನದಲ್ಲ್ಲಿ ಎರಡು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಗಳು ಚಿಕಿತ್ಸೆಗೆ ಬಂದಿವೆ .ವಿಷಪ್ರಾಶನ ಮಾಡಿ ಬಂದವರ  ಹೊಟ್ಟೆಗೆ

ನಳಿಗೆ ಹಾಕಿ ತೊಳೆದು ಪ್ರತಿ ವಿಷ ಕೊಡುತ್ತೇವೆ .ಆಸಿಡ್ ,ಎಣ್ಣೆ ಇತ್ಯಾದಿ ಸೇವಿಸಿದರೆ ಹೊಟ್ಟೆ ತೊಳೆಯುವುದು ನಿಷಿದ್ದ.


ಇತ್ತೀಚೆಗೆ ಆತ್ಮಹತ್ಯಾ ಪ್ರಕರಣಗಳು ಏರುತ್ತಿವೆ .ಕುಟುಂಬ ಕಲಹ ,ಪರೀಕ್ಷೆ ಪ್ರೇಮಪ್ರಕರಣದ ವೈಫಲ್ಯ ,ಸಾಲ ಬಾಧೆ ಹೀಗೆ

ಹಲವು ಕಾರಣಗಳು .ಇವು ಹಿಂದೆಯೂ ಇದ್ದವು .ಆದರೆ ಕೂಡು ಕುಟುಂಬ ಒಂದು ಶಾಕ್  ಅಬ್ಸೋಬರ್ ಆಗಿ ಕೆಲಸ

ಮಾಡುತ್ತಿತ್ತು .ಈಗ  ಉದ್ವೇಗ ಸೃಷ್ಟಿಸುವ ವಾತಾವರಣ ಎಲ್ಲೆಲ್ಲೂ .ತಣಿಸುವ  ಪರಿಸರ ಇಲ್ಲ.


ತಾಯಿ  ಮಗುವಿಗೆ  ಟಿ ವಿ ನೋಡುವುದು ಕಮ್ಮಿ ಮಾಡಿ ಸ್ವಲ್ಪ ಹೊರಗೆ ಆಡು ಅಥವಾ ಓದು ಎಂದುದೇ ಕಾರಣ ,ಅವಮಾನ

ದಿಂದ ಮಕ್ಕಳು ಜೀವ ಕೊನೆಗಾಣಿಸಲು ಯತ್ನಿಸುತ್ತವೆ .ಇದುವೇ ಪ್ರಕರಣಕ್ಕೆ ಅಮ್ಮನ ಬದಲು ಶಾಲೆಯ ಶಿಕ್ಷಕ  ಕಾರಣ

ನಾದರೆ  ಇಡೀ ಸಮಾಜ ಮತ್ತು ಮಾಧ್ಯಮಗಳು ಅವನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತವೆ.

ರೈತರು ಕೆಲವು ಸಾವಿರ  ಸಾಲ ಮರು ಪಾವತಿ ಸಾಧ್ಯವಾಗಲಿಲ್ಲ ಎಂದು  ಅಭಿಮಾನಕ್ಕೆ ಕುಂದು ಬಂದು ಆತ್ಮ ಹತ್ಯೆಗೆ

ಶರಣಾದರೆ  ಉದ್ದೇಶ ಪೂರ್ವಕ ಕೋಟಿ ಕಟ್ಟಳೆ ಬಾಕಿ ಇಟ್ಟವರು ರಾಜಾರೋಷವಾಗಿ ಬದುಕುತ್ತಿದ್ದಾರೆ.ಸ್ವಾಭಿಮಾನದ  ಎಲ್ಲೆ

ಎಲ್ಲಿ  ವರೆಗೆ  ಇರ ಬೇಕು ?

                   ಪ್ರವಾಹದಂತೆ  ಕಾಲವು ಬದಲಾಗುತ್ತಿದೆ .ನಮಗೆ ಯಾವುದು ಒಳ್ಳೆಯದು ಯಾವುದು ಕೆಟ್ಟುದು ಎಂದು

ನಿಂತು ಯೋಚಿಸಲು ನಮಗೆ ವ್ಯವಧಾನ ಇಲ್ಲ .ಸಮಾಜದ ಸ್ವಾಸ್ಥ್ಯ ಕೆಟ್ಟಾಗ ವೈಯುಕ್ತಿಕ ಆರೋಗ್ಯದ ಮೇಲೂ ಪರಿಣಾಮ

ಬೀರುವುದು.

                


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ