ಪಾಡರಿಯೆ ಪಡಿಪ್ಪರಿಯೆ
ಸಂಗೀತವನ್ನು ಆಲಿಸುವಾಗ ಸಾಹಿತ್ಯ ವನ್ನು ಅರ್ಥೈಸ ಬೇಕೇ ?ಅಥವಾ ರಾಗ ತಾಳ ಆಸ್ವಾದಿಸಿದರೆ ಸಾಕೇ ?ಇದು ಒಂದು ಜಿಜ್ಞಾಸೆ . ದಾಸರ ಪದ ಹಾಡುವಾಗ ನಮಗೆ ಅರ್ಥ ಆಗುವದು.ಯಾಕೆಂದರೆ ಅದು ಸರಳ ಕನ್ನಡದಲ್ಲಿ ಇದೆ .ಸಂಗೀತಕ್ಕೆ ಭಾಷೆ ಇಲ್ಲ . ಆದರೂ ಸಾಹಿತ್ಯ ಮನನ ಆದರೆ ಅದರ ಸವಿ ಹೆಚ್ಚುವುದು .
ತಮಿಳಿನಲ್ಲಿ ಸಿಂಧು ಭೈರವಿ ಎಂಬ ಸಿನೆಮಾ ಬಂದಿತ್ತು . ಕೆ ಬಾಲಚಂದರ್ ಅವರ ನಿರ್ದೇಶನ .(ಇವರೇ ಕದ್ರಿ ಗೋಪಾಲನಾಥರನ್ನೂ ಜನಪ್ರಿಯ ಗೊಳಿಸಿದವರು ).ಇದರಲ್ಲಿ ಪಾಡ ರಿಯೆ ಪಡೀಪ್ಪರಿಯೇ ಹಾಡಿಗೆ ದಕ್ಷಿಣ ಭಾರತದ ಕೋಗಿಲೆ ಕೆ ಎಸ ಚಿತ್ರಾ ಅವರಿಗೆ ರಾಷ್ಟ್ರ ಪ್ರಶಸ್ತಿ ಬಂದಿತು .( ಮಲಯಾಳದ ಮಂಜಲ್ ಪ್ರಸಾದವುಮ್ ಹಾಡು ಅವರಿಗೆ ಮೊದಲ ರಾಷ್ಟ್ರ ಪ್ರಶಸ್ತಿ ತಂದು ಕೊಟ್ಟಿತ್ತು ).ಈ ಹಾಡಿನ ಸಂದೇಶ ಕೂಡಾ ಮೇಲಿನ ವಿಚಾರವೇ .
(ಮೂಲ ವೈರಮುತ್ತು ರಚಿಸಿದ ಈ ಹಾಡಿನ ಭಾವಾನುವಾದ ನನ್ನದು )
ಹಾಡರಿಯೆ ಓದರಿಯೇ ಶಾಲೆಯನ್ನೂ ನಾನರಿಯೆ
ಬರಹ ಬರೆವ ಬರೆದುದ ಓದುವ ಜ್ಞಾನವು ಎನಗೆ ಇಲ್ಲ
ಬರಹದ ಕಾಗುಣಿತ ವಿಲ್ಲ ತಿಳಿದಿದೆ ಎಂಬ ತಲೆ ಘನ ಇಲ್ಲ (ಹೆಡ್ ವೆಯಿಟ್ )
ಅರ್ಥವ ಬಿಟ್ಟ ಹಾಡಿಗೆ ಭಾವವೆಲ್ಲಿ
ಪಳಗಿದ ಭಾಷೆಯಲ್ಲಿ ಹಾಡುವುದು ಪಾಪವಲ್ಲ
ಎಂತೆಂತದೋ ರಾಗ ಎಂತೆಂತದೋ ತಾಳ
ತಿಳಿಯದಿದ್ದರೂ ತಲೆ ಆಡಿಸುವ ಕೂಟ
ಸ್ವರದ ಏರಿಳಿತದಲ್ಲಿ ಉದಿತ ಎಲ್ಲವೂ ಸಂಗೀತವೇ
ಷಡ್ಜ ಧೈವತ ಎಲ್ಲಾ ಉದರ ಭರಿಸಿದ ಮೇಲೆ
ಏನೂ ಚಿಂತೆಯಿರದ ಉಳ್ಳವರಿಗೆ ಮಾತ್ರ ಸಂಗೀತ ವೇ
ಗುಡಿಚಲು ಕೊಳಚೆಗೂ ಮುಟ್ಟುವಂತ ಹಾಡು ಬರಲಿ
ಎಷ್ಟು ಜನ ಅದ ಆನಂದಿಸುವರು ಅಂತಹ ಹಾಡ
ಓ ಮುತ್ತೇ ತಮಿಳು ಹಾಡು (ಮಾತೃ ಭಾಷೆ ಹಾಡು )ಹಾಡು
ನಾನು ಹೇಳುವುದರಲ್ಲಿ ಇದೆಯೇ ತಪ್ಪು
ಅಮ್ಮಿ ಕಲ್ಲು (ಅರೆಯುವ ಕಲ್ಲು )ಅರೆಯುವರು ಒನಕೆ ಕುಟ್ಟುವವರು
ಲಯ ತಾಳಕೆ ಜನಿಸಿತು ಈ ಸಂಗೀತ .
ಹಾಡಿನ ಅಂತ್ಯ ತ್ಯಾಗರಾಜ ಕೃತಿ ಮರಿ ಮರಿ ನಿನ್ನೇ ಪಲ್ಲವಿಯಿಂದ ಆಗುವದು. ಯಾಕೆಂದರೆ ಕಥಾನಾಯಕ ಅದನ್ನು ಹಾಡುತ್ತಿರಬೇಕಾದರೆ ಮಧ್ಯ ಪ್ರವೇಶಿಸಿ ಸುಹಾಸಿನಿ ಹಾಡುವ ಹಾಡು .ನಾಯಕ(ಶಿವಕುಮಾರ್ ) ಕರ್ನಾಟಕ ಸಂಗೀತ ವಿದ್ವಾನ್ ,ಆತನ ಪತ್ನಿ ಭೈರವಿ (ಸುಲಕ್ಷಣಾ ). ಪತಿ ವ್ರತೆ ,ಗಂಡನ ಮೇಲೆ ಅಪಾರ ಪ್ರೇಮ .ಆದರೆ ಸಂಗೀತ ಜ್ಞಾನ ,ಆಸಕ್ತಿ ಕಡಿಮೆ .ಸಿಂಧು (ಸುಹಾಸಿನಿ ) ಈ ಪ್ರತಿಭೆ ಉಳ್ಳವಳು . ಅವಳ ಪರಿಚಯ ಆದ ಮೇಲೆ ನಾಯಕನ ಮಾನಸಿಕ ಹೊಯ್ದಾಟ ಕತೆ .
ಈ ಸಿನೆಮಾದಲ್ಲಿ ಮಧುರವಾದ ಹಾಡುಗಳು ಇವೆ . ತ್ಯಾಗರಾಜರ ಕೃತಿ ಮರಿ ಮರಿ ನಿನ್ನೆ (ಮರಳಿ ಮರಳಿ ನಿನ್ನನ್ನು)ಯನ್ನು ಜೇಸುದಾಸ್ ಹಾಡಿದ್ದಾರೆ .ಸಾಮಾನ್ಯವಾಗಿ ಕಾಂಬೋಜಿ ರಾಗದಲ್ಲಿ ಹಾಡುವ ಕೃತಿಯನ್ನು ಇಳಯರಾಜ ಸಾರಮತಿಗೆ ಆಳವಡಿಸಿದ್ದಾರೆ.
ಪಾಡರಿಯೆ ಪಡಿಪ್ಪರಿಯೆ ಕೇಳಿ
https://www.youtube.com/watch?v=6yRc4Ux7pgs
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ