ಬೆಂಬಲಿಗರು

ಸೋಮವಾರ, ಜುಲೈ 19, 2021

ಕೊಡಲಿಯವನ ಕತೆ

                               ಕೊಡಲಿಯವನ ಕತೆ 

ಬಹಳ ಮಂದಿ ರೋಗಿಗಳು  ತಪಾಸಣೆಗೆ ಬರುವಾಗ ತಮ್ಮ ಹಳೆಯ ವೈದ್ಯಕೀಯ ದಾಖಲೆಗಳನ್ನು ತರುವುದಿಲ್ಲ . ಸಕ್ಕರೆ ಕಾಯಿಲೆ ,ರಕ್ತದ ಒತ್ತಡ ,ಹೃದ್ರೋಗಿಗಳು ಇತ್ಯಾದಿ  ಪ್ರಸ್ತುತ ಸೇವಿಸುವ ಔಷಧಿ ಬಗ್ಗೆ ವಿವರ ನಮಗೆ ಬಹಳ ಮುಖ್ಯ . ನಾವು ಇದರ ಬಗ್ಗೆ ಕೇಳಿದರೆ  ,'ನೀವೇ ಕೊಟ್ಟದ್ದು ,ಕೆಂಪು ಬಣ್ಣದ್ದು ,ಹಳದಿ ಬಣ್ಣದ್ದು ,ಮಧ್ಯೆ ಗೆರೆ ಇರುವುದು  ನಿಮಗೆ ಗೊತ್ತಾಗುವುದಿಲ್ಲವೇ "ಇತ್ಯಾದಿ  ಹೇಳುವರು .ಇನ್ನು ಕೆಲವರು ಇದಕ್ಕೆ ತದ್ವಿರುದ್ದ .ಮನೆಯಲ್ಲಿ ಇರುವ ಯಾವತ್ತೂ ಹಳೆಯ  ಮಾತ್ರೆಗಳ ಚೀಲ ನಮ್ಮ ಮುಂದೆ ಸುರುವಿ  (ಸಂಜೀವಿನಿ ಪರ್ವತ ಹೊತ್ತ ಹನುಮಂತನಂತೆ )ನೋಡಿ ಇದರಲ್ಲಿ  ಬಿ ಪಿ ಮಾತ್ರೆ ಯಾವುದು ಅಂತ ?ಮಾತ್ರೆಯ ಗಂಟಿನಲ್ಲಿ ಕಸ್ತೂರಿ ಮಾತ್ರೆ ,ವಿಕ್ಸ್ ಆಕ್ಷನ್ ೫೦೦ ,ಆಯುರ್ವೇದ ,ಹೋಮಿಯೋಪಥಿ ಇತ್ಯಾದಿ ಇರುವವು .. 

     ನಾನು ಮಧ್ಯ ಪ್ರಾಚ್ಯದ ಒಂದು ದೇಶದ  ಸರಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಇದೇ  ಸಮಸ್ಯೆ ಅಲ್ಲಿಯೂ ಇತ್ತು .ಅದಕ್ಕೆ ಅಲ್ಲಿಯ ನರ್ಸ್ ಸಿಬ್ಬಂದಿ ಒಂದು ಉಪಾಯ ಮಾಡಿದ್ದರು . ಸಾಮಾನ್ಯವಾಗಿ ಉಪಯೋಗದಲ್ಲಿ ಇರುವ ಕೆಲವು ಮಾತ್ರೆಗಳನ್ನು ಒಂದು ರಟ್ಟಿಗೆ ಅಂಟಿಸಿ ಇಟ್ಟಿದ್ದರು .ರೋಗಿಗಳಿಗೆ ನೀವು ತೆಗೆದುಕೊಳ್ಳುತ್ತಿರುವ ಮಾತ್ರೆ ಇದುವಾ ಎಂದು ಒಂದೊಂದನ್ನೇ ತೋರಿಸುವುದು . ಹೆಚ್ಚಾಗಿ ಗುರುತು ಹಿಡಿದು ಹೇಳುವರು .ಅಲ್ಲಿ  ಲಭ್ಯವಿರುವ ಬ್ರಾಂಡ್ ಗಗಳು  ಮಿತ ವಾಗಿ ಇದ್ದುದರಿಂದ ಅದು ಸಾಧ್ಯ . 

ನೀವು ಬಾಲ್ಯದಲ್ಲಿ ಕೊಡಲಿಯವನ ಕತೆ ಕೇಳಿರುವಿರಿ . ಮರ ಕಡಿಯುವಾಗ  ಕೊಡಲಿ ಬಾವಿಗೆ ಬಿತ್ತು .ದೈವ ಭಕ್ತನಾದ ಆತ ತನ್ನ ಅನ್ನವೇ ಹೋಯಿತು ಎಂದು ದೇವರಲ್ಲಿ ಬೇಡಲಾಗಿ  ಪ್ರಾರ್ಥಿಸಿ ಕೊಳ್ಳಲಾಗಿ ಪ್ರತ್ಯಕ್ಷನಾದ ಭಗವಂತ ಮೊದಲು ಚಿನ್ನದ ,ಆಮೇಲೆ ಬೆಳ್ಳಿ ಕೊಡಲಿ ತೋರಿಸಿ ಇದುವೇ ಎಂದು ಕೇಳಲು ಸತ್ಯಸಂಧನಾದ  ಆತ ಇದು ಯಾವುದೂ ತನ್ನದಲ್ಲ ಎಂದು ಅರುಹಲು ಕೊನೆಗೆ ಕಬ್ಬಿಣದ ಕೊಡಲಿ ತೋರಿಸಲು ದೇವ ಮೆಚ್ಚಿ ಮೂರೂ ಕೊಡಲಿ ಗಲಳನ್ನು ಅವನಿಗೇ ಕೊಡುವನು . 

ಮುಂದೆ ಹಲವು ವರ್ಷಗಳ ನಂತರ ಅದೇ ಮರ ಕಡಿಯುವವನು ದಾರಿಯಲ್ಲಿ ನಡೆಯುತ್ತಿರಬೇಕಾದರೆ ಅವನ ಹೆಂಡತಿ ಜಾರಿ ಕೆರೆಗೆ ಬೀಳುವಳು . ಇವನು ಬೇಡಲು ಯಥಾಪ್ರಕಾರ ದೇವರು ಪ್ರತ್ಯಕ್ಷನಾಗಿ ಕೆರೆಯಿಂದ ಐಶ್ವರ್ಯ ರೈ ಯನ್ನು ಎತ್ತಿ ಇವನಿಗೆ ತೋರಲು ಇವಳೇ ನನ್ನ ಹೆಂಡತಿ ಎನ್ನುವನು .ಆಶ್ಚರ್ಯ ಚಕಿತನಾದ ದೇವರು ಸತ್ಯ ಸಂಧನಾದ ನಿನ್ನ ಬಾಯಿಯಿಂದ ಇಂತಹ ಮಾತೇ ?ಎಂದು ಕೇಳಲು ಒಂದು ವೇಳೆ ನಾನು ಐಶ್ವರ್ಯಾ ರಾಯ್ ಅಲ್ಲಾ ಎಂದು ಹೇಳಿದರೆ ನೀನು ,ಇನ್ನೊಬ್ಬ ತಾರೆಯನ್ನು ,ಮತ್ತು ಕೊನೆಗೆ ನನ್ನ ಹೆಂಡತಿ ತೋರಿಸಿ ಈ ಮೂರನ್ನೂ  ಇಟ್ಟುಕೋ ಎಂದು ಕೊಟ್ಟರೆ ನಾನು ಸಂಭಾಳಿಸಲಾರೆ ,ಅದರ ಬದಲು ಯಾರಾದರೂ ಒಬ್ಬರೇ ಮೇಲು ಎಂದನು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ