ಡಾ ಅಶೋಕ್ ಕುಮಾರ್ ಮೌನ ಸಾಧಕರು . ವೃತ್ತಿಯಲ್ಲಿ ಶಸ್ತ್ರ ಚಿಕಿತ್ಸಾ ತಜ್ಞರು ಮತ್ತು ವೈದ್ಯಕೀಯ ಕಾಲೇಜು ಪ್ರಾಧ್ಯಾಪಕರು . ಇವರ ಮಾತೃ ಭಾಷೆ ಮಲೆಯಾಳ . ತಂದೆ ವಾರಾಹಿ ಯೋಜನೆಯಲ್ಲಿ ಉದ್ಯೋಗದಲ್ಲಿ ಇದ್ದರು .ಆದುದರಿಂದ ಇವರ ವಿದ್ಯಾಭ್ಯಾಸ ಅವಿಭಜಿತ ದಕ್ಷಿಣ ಕನ್ನಡದಲ್ಲಿಯೇ ಆಯಿತು . ವೈದ್ಯಕೀಯ ಸ್ನಾತಕೋತ್ತರ ಪದವಿ ಶಸ್ತ್ರ ಚಿಕಿತ್ಸಾ ವಿಷಯದಲ್ಲಿ .ಪ್ರಸಿದ್ಧ ವೈದ್ಯ ಶಿಕ್ಷಕ ಸಿ ಆರ್ ಬಲ್ಲಾಳ್ ಇವರ ಗುರುಗಳು ಎಂದು ಹೇಳಿಕೊಳ್ಳುವುದು ಇವರಿಗೆ ಹೆಮ್ಮೆ . ಇ ಎಸ ಐ ವೈದ್ಯಕೀಯ ಸೇವೆಗೆ ಸೇರಿದ ಇವರು ಬೆಂಗಳೂರಿನಲ್ಲಿ ಇ ಎಸ ಐ ವೈದ್ಯಕೀಯ ಕಾಲೇಜು ಆರಂಭವಾದಾಗ ಅಧ್ಯಾಪಕರಾಗಿ ಸೇರಿದರು .
ಇವರು ಸಾಹಿತ್ಯ ಆಸಕ್ತರು . ಮಲಯಾಳಂ ಭಾಷೆಯಿಂದ ಹಲವು ಮೌಲಿಕ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರ ಗೊಳಿಸಿ ಪ್ರಕಟಿಸಿದ್ದಾರೆ .ಮಲಯಾಳಂ ಮತ್ತು ತುಳುನಾಡ ಸಂಸ್ಕೃತಿ ಮತ್ತು ಭೂಗೋಳದಲ್ಲಿ ಸಾಮ್ಯತೆ ಇರುವುದರಿಂದ ಮಲಯಾಳಂ ಸಾಹಿತ್ಯ ನಮಗೆ ಆಪ್ತವಾಗುವುದು . ಹಿರಿಯರಾದ ದಿ ಕೆ ಕೆ ನಾಯರ್ ಅವರೊಂದಿಗೆ ಸೇರಿ ಇವರು ಅನುವಾದಿಸಿದ ಕಯರ್ ಕಾದಂಬರಿ (ಕನ್ನಡಕ್ಕೆ ಹಗ್ಗ -ಹುರಿಹಗ್ಗ )ಮೂರು ಸಂಪುಟಗಳ ಬೃಹತ್ ಕೃತಿ .
ವಾರಾಹಿ ಜಲ ವಿದ್ಯುತ್ ಯೋಜನೆಯಲ್ಲಿ ಉದ್ಯೋಗದಲ್ಲಿ ಇದ್ದ ನನ್ನ ಸಹೋದರ ಮೂಲಕ ಇವರ ಪರಿಚಯ ಆಯಿತು . ಮಂಗಳೂರಿನ ನನ್ನ ವಸತಿಗೆ ಬಂದು ಆತಿಥ್ಯ ಸ್ವೀಕರಿಸಿದ್ದರು . ಆಗಲೇ ಇವರ ಅನುವಾದಿತ ಕತೆಗಳು ಕನ್ನಡದ ಪ್ರಸಿದ್ಧ ನಿಯತ ಕಾಲಿಕೆಗಳಲ್ಲಿ ಪ್ರಕಟವಾಗುತ್ತಿದ್ದವು . ಸಜ್ಜನ ಮತ್ತು ಸರಳ ವ್ಯಕ್ತಿ .
ಇವರ ಅನುವಾದಿತ ಕೆಲವು ಕೃತಿಗಳು
ಕ್ರ.ಸಂ. | ಪುಸ್ತಕದ ಹೆಸರು | ಮೂಲ ಭಾಷೆ | ಮೂಲ ಲೇಖಕ | ಅನುವಾದ ಭಾಷೆ | ಪ್ರಕಟಿತ ವರ್ಷ | ಪ್ರಕಾಶಕರು | ||||||||
---|---|---|---|---|---|---|---|---|---|---|---|---|---|---|
1 | ಚಿದಂಬರಂ | ಮಲೆಯಾಳಂ | ಸಿ.ವಿ.ಶ್ರೀರಾಮನ್ | ಕನ್ನಡ | 1994 | ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು | ||||||||
2 | ಒಂದು ಊರಿನ ಕಥೆ | ಮಲೆಯಾಳಂ | ಎಸ್.ಕೆ.ಪೊಟ್ಟೆಕ್ಕಾಟ್ಟ್ | ಕನ್ನಡ | 1997 | ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ | ||||||||
3 | ಶ್ರೀರಾಮನ್ ಕತೆಗಳು | ಮಲೆಯಾಳಂ | ಸಿ.ವಿ.ಶ್ರೀರಾಮನ | ಕನ್ನಡ | 2005 | ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ | ||||||||
4 | ಬೆಳಕು ಚೆಲ್ಲುವ ಹುಡುಗಿ | ಮಲೆಯಾಳಂ | ಟಿ.ಪದ್ಮನಾಭನ್ | ಕನ್ನಡ | 2007 | ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ನವದೆಹಲಿ | ||||||||
5 | ಹಗ್ಗ (೧,೨,೩) | ಮಲೆಯಾಳಂ | ತಕಳಿ ಶಿವಶಂಕರ ಪಿಳ್ಳೈ | ಕನ್ನಡ | 2007 | ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ | ||||||||
6 | ಸೂಫಿ ಹೇಳಿದ ಕಥೆ | ಮಲೆಯಾಳಂ | ಕೆ.ಪಿ.ರಾಮನುಣ್ಣಿ | ಕನ್ನಡ | 2008 | ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ | ||||||||
7 | ಮೃತ್ಯುಯೋಗ | ಮಲೆಯಾಳಂ | ಅಕ್ಕರ್ ಕಕ್ಕಟ್ಟಿಲ್ | ಕನ್ನಡ | 2009 | ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು | ||||||||
8 | ಗುರುತುಗಳು | ಮಲೆಯಾಳಂ | ಸೇತು | ಕನ್ನಡ | 2011 | ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ | ||||||||
9 | ಆಡುಜೀವನ | ಮಲೆಯಾಳಂ | ಬೆನ್ಸಾಮಿನ್ | ಕನ್ನಡ | 2012 | ಹೇಮಂತ ಸಾಹಿತ್ಯ, ಬೆಂಗಳೂರು | ||||||||
10 | ಕುರಿಂಜೆ ಜೇನು | ತಮಿಳು | ರಾಜಮ್ ಕೃಷ್ಣನ್ | ಕನ್ನಡ | 2013 | ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ |
11 ಚುಕ್ಕಿ ಜಿಂಕೆ ಮಲಯಾಳ ಪೊಟ್ಟೆಕ್ಕಾಟ್ ಕನ್ನಡ 2013 ಹೇಮಂತ ಸಾಹಿತ್ಯ
12 ಸಮಗ್ರ ಕಾದಂಬರಿಗಳು ಮಲಯಾಳ ಕಮಲಾ ದಾಸ್ ಕನ್ನಡ 2013 ಹೇಮಂತ ಸಾಹಿತ್ಯ
13 ಕುರಿಂಜಿ ಜೇನು ತಮಿಳು ರಾಜಮ್ ಕೃಷ್ಣಮ್ ಕನ್ನಡ 2013 ಎನ್ ಬಿ ಟಿ
14. ಎಲೆಯುದುರು ಕಾಲ ತಮಿಳು ನೀಲಾ ಪದ್ಮನಾಭನ್ ಕನ್ನಡ 2014 ಸಾಹಿತ್ಯ ಅಕಾಡೆಮಿ ದೆಹಲಿ
15 ಘನವು ಎಂಬುದು ಮಲಯಾಳ ಬಶೀರ್ ಕನ್ನಡ 2016 ಕುವೆಂಪು ಭಾಷಾ ಭಾರತಿ
16 ಮಲಯಾಳಂ ಸಾಹಿತ್ಯ ವಾಚಿಕೆ (ಎರಡು ಲೇಖನಗಳು)ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
17 . ಕೆಂಪು ಚಿಹ್ನೆಗಳು ಮಲಯಾಳ ಕತೆಗಳು ಸುಕುಮಾರನ್ ಕನ್ನಡ
18 ಮನುಷ್ಯನಿಗೆ ಒಂದು ಮುನ್ನುಡಿ ಮಲಯಾಳಂ ಸುಭಾಷ್ ಚಂದ್ರನ್ ಕನ್ನಡ
ಇವರ ನ್ನು ಅರಸಿ ಬಂದ ಪ್ರಶಸ್ತಿಗಳು
ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ - ೧೯೯೭ ೨೦೧೩
ಕೇಂದ್ರ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ೨೦೧೨
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪುಸ್ತಕ ಬಹುಮಾನ ೨೦೧೧.
ಮುಂದೆಯೂ ಅವರ ಸಾಹಿತ್ಯ ಕೃಷಿ ಮುಂದುವರಿಯಲಿ .ಸುಖಸಂತೋಷದಿಂದ ಇರಲಿ ಎಂದು ಹಾರೈಸೋಣ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ