To me, fair friend, you never can be old,
For as you were, when first your eye I ey'd,
Such seems your beauty still. Three winters cold
Have from the forests shook three summers' pride,
Three beauteous springs to yellow autumn turn'd
In process of the seasons have I seen,
Three April perfumes in three hot Junes burn'd,
Since first I saw you fresh, which yet are green.
Ah! yet doth beauty, like a dial-hand,
Steal from his figure and no pace perceiv'd;
So your sweet hue, which methinks still doth stand,
Hath motion and mine eye may be deceiv'd:
For fear of which, hear this, thou age unbred;
Ere you were born, was beauty's summer dead.
Shakespeare
He that is thy friend indeed,
He will help thee in thy need:
If thou sorrow, he will weep;
If thou wake, he cannot sleep:
Thus of every grief in heart
He with thee doth bear a part.
These are certain signs to know
Faithful friend from flattering foe
ನನ್ನನ್ನು ಸಿನಿಕನೆಂದು ಕರೆಯಿರಿ .ಆದರೆ ಒಂದು ಮಾತು ಹೇಳುವೆನು ನಿಜವಾದ ಮಿತ್ರರು ಈಗ ಕಾಣೆಯಾಗುತ್ತಿದ್ದರೆ . ಸಾಫ್ಟ್ವೇರ್ ಕ್ರಾಂತಿಯಿಂದ ಆರ್ಥಿಕವಾಗಿ ಎಲ್ಲರೂ ದಿಢೀರ್ ಸಬಲರಾಗಿ ,ಒಂದು ತರಹ ಸಾಮಾಜಿಕ ಸಮಾನತೆ ಬಂದರೂ ಜೀವದ ಗೆಳೆಯರು ಕಡಿಮೆಯಾಗಿ ,ವೀಕೆಂಡ್ ಪಾರ್ಟಿ ಮಿತ್ರರು(ಇಲ್ಲಿ ಮದ್ಯವೇ ನಿಜ ಸ್ನೇಹಿತ ) ,ವಾಟ್ಸ್ಸಫ್ ,ಫೇಸ್ ಬುಕ್ ಸ್ನೇಹಿತರು ಹುಟ್ಟಿ ಕೊಳ್ಳುತ್ತಿರುವರು .ನನ್ನ ಬಾಲ್ಯದ ದಿವಾಕರ ,ನರಸಿಂಹ ,ವೆಂಕಟ್ರಮಣ ,ಸೂಪಿ ,ಮತ್ತೆ ವೈದ್ಯಕೀಯ ವಿದ್ಯಾರ್ಥಿಯಾಗಿ ಜೋಸ್ ಚೇರಿಯನ್ ,ಬನಕೇಸರಿ ,ಭಜಂತ್ರಿ ,ವಿವೇಕ ವಾಣಿ ,ಜೀವನ್ರಾಮ್ ,ಮುಂದೆ ರೈಲ್ವೆ ಯಲ್ಲಿ ಪ್ರಸನ್ನ ಕುಮಾರ್ ,ರೋಹಿಡೇಕರ್ ,ಮುರುಗನ್ ,ಮುರುಗೇಶನ್ ,ಕಲ್ಯಾಣಿ ,ವಿಜಯನ್ ,ನಾಗರಾಜಪ್ಪ ,ಕಿರಣ್ ಹೀಗೆ ಪುಟಗಟ್ಟಲೆ ಮಿತ್ರರು ಸಾಮಾನ್ಯ ೧೯೯೫ ರ ವರೆಗೆ ಸಿಗುತ್ತಾರೆ .ಆಮೇಲೆ ನಿಸ್ವಾರ್ಥ ಆತ್ಮೀಯತೆ ಕಡಿಮೆಯಾಗುತ್ತಾ ಬಂದು ,ಈಗ ಹಳೇ ಸ್ನೇಹಿತರನ್ನು ನೆನೆಸಿಕೊಳ್ಳುವುದು ಮಾತ್ರ ಭಾಗ್ಯ .
ಅವರಲ್ಲಿ ಒಬ್ಬರು ಡಾ ಶ್ರೀಕೃಷ್ಣ ಭಟ್ . ಇವರು ಕೆ ಎಸ ಹೆಗ್ಡೆ ಮೆಡಿಕಲ್ ಕಾಲೇಜು ರೇಡಿಯಾಲಜಿ ವಿಭಾಗದ ಮುಖ್ಯಸ್ಥರು .ಇವರ ಮನೆ ಮಂಜೇಶ್ವರ ಕೋಳ್ಯೂರು ಸಮೀಪ ಮೆಟ್ಟುಕುಂಡೆ . ಮಣಿಪಾಲ ಕೆಎಂಸಿಯಿಂದ ರೇಡಿಯೋಲೋಜಿ ವಿಭಾಗದಲ್ಲಿ ಎಂಡಿ ಪದವಿ.ಇತ್ತೀಚೆಗೆ ಬಹಳ ಬೇಡಿಕೆ ಇರುವ ವಿಷಯ . ಅಲ್ಟ್ರಾಸೌಂಡ್ ,ಸಿಟಿ ಇತ್ಯಾದಿ.ವಿದ್ಯಾಭ್ಯಾಸ ಮುಗಿಸಿದೊಡನೆ ಆಗ ತಾನೇ ಆರಂಭವಾದ ಕ್ಷೇಮಾ ಕ್ಕೆ ಸೇರಿ ಕೊಂಡರು . ನನ್ನನ್ನು ಅಲ್ಲಿಗೆ ಸೇರಲು ಪ್ರೇರೇಪಿಸಿ ,ಅಪ್ಲಿಕೇಷನ್ ಬರೆಸಿ ಕಾಲೇಜ್ ಗೆ ತಲುಪಿಸಿದವರು .
ಆಗಿನ್ನೂ ಕಾಲೇಜ್ ಆರಂಭದ ಹಂತದಲ್ಲಿ ಇತ್ತು . ವಿದ್ಯಾರ್ಥಿ ಗಳು ,ರೋಗಿಗಳು ಮತ್ತು ಸಿಬ್ಬಂದಿ ಕೂಡಾ ಕಡಿಮೆ ಇದ್ದರು. ಒಂದು ಸಂಸ್ಥೆ ಯ ಏಳಿಗೆಗೆ ಮತ್ತು ಹೆಸರು ನಂಬಿಕೆ ಬರಲು ಅದರ ಮೊದಲ ದಿನಗಳ ಸಿಬ್ಬಂದಿ ಯ ಪ್ರಾಮಾಣಿಕ ದುಡಿಮೆ ಬಹಳ ಪ್ರಮುಖ ಪಾತ್ರ ವಹಿಸುವುದು . ಅದೇ ವೇಳೆ ಒಂದು ಹಂತಕ್ಕೆ ಬರುವ ವರೆಗೆ ಉದ್ಯೋಗಿಗಳಿಗೆ ಒಳ್ಳೆಯ ಸಂಬಳ ಸಾರಿಗೆ ಕೊಡುವುದು ಸಂಸ್ಥೆಯನ್ನು ನಡೆಸುವವರಿಗೂ ಕಷ್ಟ .ರೇಡಿಯೋಲೋಜಿ ವಿಭಾಗ ಗ್ರೌಂಡ್ ಫ್ಲೋರ್ ಒ ಪಿ ಡಿ ಪಕ್ಕವೇ ಇತ್ತು .ಡಾ ರವೀಂದ್ರ ಪ್ರಭು ಮುಖ್ಯಸ್ಥ ರು ,ಇನ್ನು ಡಾ ಶ್ರೀಕೃಷ್ಣ ಭಟ್ ,ಮತ್ತು ಡಾ ಲತಿಕಾ ಶೆಟ್ಟಿ ಇದ್ದರು . ಅದರಲ್ಲಿ ಶ್ರೀಕೃಷ್ಣ ಭಟ್ ಮಾತ್ರ ಪೂರ್ಣ ಕಾಲಿಕರು . ನನಗೆ ಒಂದು ಅಭ್ಯಾಸ ,ಯಾವುದೇ ರೋಗಿಯ ರೋಗ ನಿಧಾನ ಸ್ವಲ್ಪ ಕ್ಲಿಷ್ಟ ಎಂದು ಕಂಡು ಬಂದ ಸಂದರ್ಭ ಲ್ಯಾಬರೇಟರಿ ,ಎಕ್ಸ್ ರೇ ,ಸ್ಕ್ಯಾನ್ ಇತ್ಯಾದಿ ಮಾಡಿಸುವಾಗ ಸ್ವತಃ ಅವರೊಡನೆ ಹೋಗುವೆನು .ಮತ್ತು ಅಲ್ಲಿಯ ತಜ್ನರೊಂದಿಗೆ ವಿಚಾರ ವಿಮರ್ಶೆ ಮಾಡುವೆನು.ಇದರಲ್ಲಿ ಮರ್ಯಾದೆಗೆ ಕೊರತೆಯೋ ಸಮಯದ ಅಭಾವವೋ ಕಾಣಿಸದು .ಈ ಅಭ್ಯಾಸದಿಂದ ಬೇಗ ನಿರ್ಧಾರಕ್ಕೆ ಬರಲು ಸಹಾಯ ಆಗುವುದರೊಂದಿಗೆ ಹಲವರ ಪರಿಚಯ ಆಗುವುದು .ಕ್ಷೇಮಾ ದ ಹಲವು ಸಿಬ್ಬಂದಿ ನನಗೆ ಪರಿಚಯ ಆದುದು ಇದರಿಂದ .
ಶ್ರೀಕೃಷ್ಣ ಭಟ್ ಅವರೂ ನಾನೂ ಮಧ್ಯಾಹ್ನ ಬಿಡುವಿನಲ್ಲಿ ಜತೆಗೇ ಬುತ್ತಿ ಊಟ ಮಾಡುವೆವು. ಸಂಜೆ ಮನೆಗೆ ಹೋಗುವಾಗ ಉಪ್ಪಳ ದ ಆಸ್ಪತ್ರೆಯೊಂದರಲ್ಲಿ ಸ್ಕ್ಯಾನ್ ಮಾಡಲು ಹೋಗುತ್ತಿದ್ದರು ,ನಾನೂ ಕಾಲೇಜ್ ಬಿಟ್ಟ ಮೇಲೆ ಅಲ್ಲಿ ತಜ್ಞ ಸಲಹಾಕಾರ ನಾಗಿ ಹೋಗುತ್ತಿದ್ದೆನು.ಹೆಚ್ಚಾಗಿ ಬಸ್ಸಿನಲ್ಲಿಯೇ ಹೋಗುತ್ತಿದ್ದೆವು ;ತೊಕ್ಕೋಟ್ಟು ವರೆಗೆ ಒಂದು ,ಅಲ್ಲಿಂದ ಕಾಸರಗೋಡು ಬಸ್ .
ಆರಂಭದಲ್ಲಿ ನಮ್ಮ ಸಂಸ್ಥೆಯಲ್ಲಿ ಹೃದ್ರೋಗ ತಜ್ಞರು ಇಲ್ಲದಿದ್ದುದರಿಂದ ಸುಮಾರು ಎರಡು ವರ್ಷ ಹೃದಯದ ಸ್ಕ್ಯಾನ್ (ಏಕೋ ಕಾರ್ಡಿಯೋ ಗ್ರಾಫಿ )ನಾನೇ ಮಾಡುತ್ತಿದ್ದು (ಇದಕ್ಕೆ ನನಗೆ ಪ್ರತ್ಯೇಕ ಸಂಭಾವನೆ ಇಲ್ಲ ,ನನ್ನ ಉಳಿದ ಕೆಲಸಗಳ ಜತೆ ಸಂತೋಷಕ್ಕಾಗಿ ಮಾಡುತ್ತಿದ್ದೆ ) ಅದರ ಉಪಕರಣ ರೇಡಿಯಾಲಜಿ ವಿಭಾಗದಲ್ಲಿಯೇ ಇದ್ದು ಆಗಾಗ ಹೋಗುವುದರಿಂದ ನಮ್ಮ ಬಾಂಧವ್ಯ ಇನ್ನೂ ಗಟ್ಟಿಯಾಯಿತು .
ಶ್ರೀಕೃಷ್ಣ ಭಟ್ ಸರಳ ಜೀವಿ ,ಗೌರವ ವರ್ಣ . ಮಾತನಾಡುವಾಗ ಆಗಾಗ ಷರಟಿನ ಕಾಲರ್ ಹಿಡಿದು ಎಳೆದು ಕೊಳ್ಳುವರು . ಅವರ ಮನೆಗೆ ಅತಿಥಿಯಾಗಿ ಹಲವು ಬಾರಿ ಹೋಗಿದ್ದೇನೆ .ಅವರ ತಂದೆ ನನ್ನ ಪೇಷಂಟ್ ಕೂಡಾ ಆಗಿದ್ದರು .ನನ್ನ ಮೇಲೆ ಪ್ರೀತಿ ವಿಶ್ವಾಸ ಮತ್ತು ಅಭಿಮಾನ . ಇನ್ನೂ ನಗರಕ್ಕೆ ವಲಸೆ ಹೋಗದೆ ಹಳ್ಳಿಯಲ್ಲಿಯೇ ಉಳಿದು ಕೊಂಡಿರುವರು . ಅವರ ಕುಟುಂಬದಲ್ಲಿ ಯಾವುದೇ ಅರೋಗ್ಯ ಸಮಸ್ಯೆ ಬಂದರೆ ನನಗೆ ತಿಳಿಸುವರು . ನಾನು ಕಾಲೇಜು ಬಿಟ್ಟಿದ್ದರೂ ಆಗಾಗ ಫೋನ್ ಮೂಲಕ ಸುಖ ದುಖಃ ವಿಚಾರಿಸುವರು . ಇಂತಹ ಮಿತ್ರರಿಂದಲೇ ಜೀವನ ಸಹ್ಯ ಎನಿಸಿದೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ