ಗಣಪ್ಪಜ್ಜನ ನೀಳ ಕವನದ ಕೆಲವು ಸಾಲುಗಳು
ಆಜ್ನಾನಾನ್ವಯಾ ಶೌಚ ಸೂತಕ ನಿವೃತ್ತಿಗೆ ಸುಜ್ನಾನೇಶ್ವರಾಮೃತ ಗ್ರಂಥ ಬರೆದವರು ಅಂಗ್ರಿ ಗಣಪತಿ ಭಟ್ಚ ,(ಸೂತಕ ನಿವೃತ್ತಿಗೆ ಒಟ್ಟು6 4ಪದ್ಯಗಳು)
(ಆಯ್ದ ಸಾಲುಗಳು ಅನುಕ್ರಮ ವಾಗಿಲ್ಲ )
ಈ ಚರಾಚರ ಜನನ ಮರಣ ಶೌಚ ಭೇದಾ ಭೇದ ವಿವರವ ನಾ ಚತುರ್ಮುಖ ನೊರೆದನಾ ಕಾಶ್ಯಪ ಮುನೀಂದ್ರಗೆ
ಒಂದು ದಿನ ಕೈ ಮುಗಿದು ಕಾಶ್ಯಪ ನೆಂದನಾ ಬ್ರಹ್ಮ0ಗೆ ಜನಿಸಿದ
ರಿಂದ ನಾಶನದಿಂದ ವಂಶಾ ಶೌಚವದು ತನಗೆ
ಒಂದು ದಿನ ಬಿಡಲರಿದು ಸಂಧ್ಯಾ ವಂದನೆಯ ನಿಯಮಕ್ಕೆ ಸೂತಕ
ದ0ಧಕಾರವ ತೆಗೆಯ ಬೇಕೆನೆ ದ್ರುಹಿಣ ನಿಂತೆದಾ
ಏಳು ಮಗ ನೀನೇಳು ಸಂಶಯ ತಾಳದಿರು ತಾಳದಿರು ಶುದ್ದದ
ಕಾಳಗತ್ತಲೆಗೆ ಸಿಲುಕಿದೆಯೋ ಮಹಾದೇವ
ಕೇಳುನೀ ಮನವೊಲಿದು ಮತ್ತೀ ಕೇಳು ಲೋಕಕೆ ಹಿತವೆನುತ ನಾ
ಪೇಳುವೆನು ಗ್ರಹಿಸುತ್ತ ಹುಸಿ ಸೂತಕದ ನಿರ್ಣಯವ .
ಬಂದುದಕೆ ಕುರುಹೇನು ಸೂತಕ ಬಂದುದಕೆ ನಿಜವೇನು ತನು ಹ
ನ್ನೊಂದು ದಿನದಲಿ ,ಶುದ್ಧ ಮೊದಲಿನ ಶುದ್ಧ ಭೇದಗಳ
ಬಂದಿಪರು ಪ್ರಾಣಾಕ್ಷಿ ದೇಹವ ನೊಂದೆರಡು ವರುಷದೆಳೆ ಹಸುಳೆಯ
ಮುಂದೆ ಪಿತ ಗುಮ್ಮೆಂದು ಪೇಳಿದ ತೆರದಿ ಸೂತಕವು .
ರೂಪು ಶಬ್ದ ಸ್ಪರ್ಶ ರಸ ಗಂಧಾ ಪರೀಕ್ಷೆಗಳೆಲ್ಲಾ ಬರಿದೇ
ಪಾಪ ಸೂತಕವೆಂದು ಪೇಳ್ವರು ಮೂಢ ಜನ ಜಗದಿ
ಪಾಪವೆಂದೇ ಗ್ರಹಿಸಿ ಕರ್ಮದ ಲೋಪವನು ಮಾಡುತ್ತಾ ಬರಿದೇ
ಪಾಪಕಿಂಕರರಾಗಿ ನವವರಂ ನರಕದೊಳಗೆಂದ.
ನಿತ್ಯ ವಿಧಿಯನು ಬಿಟ್ಟು ಬಲು ಸಾಹಿತ್ಯವನು ಮಾಡಿದರೆ ಬಹಲನು
ಪಥ್ಯವನು ಕೆಡಿಸುವರು ಹುಸಿ ಸೂತಕವ ನೆರೆ ನಂಬಿ
ಸತ್ಯ ಹೀನರು ಜೀವರನು ಸಹ ಹತ್ಯವನು ಮಾಡಿದರೆ ಪ್ರಾಯ
ಶ್ಚಿತ್ತ ಸಂತಾನಕೆ ಬಾರದು ಗೈದವಗೆ ಹೊರತು
ತಂದೆ ಋಣ ಪಾತಕವ ಗೈದೊಡೆ ನಂದನಂಗಾಸ್ತಿಲ್ಲ ದಿದ್ದರೆ
ಹೊಂದಲರಿಯದು ನಿನಗೆ ಲೇಶ ನಾತ್ರ ಶಾಸ್ತ್ರದಲಿ
ಹಿಂದೆ ಕೂಡಿದರಿಂದ ಶಿಶುವಿನ ತಂದೆ ತಾಯಿಗಳಿಂಗೆ ಮಾತ್ರವು
ಬಂದಪುದು ಸೂತಕವು ಮತ್ತುಳಿದವರಿಂಗಿಲ್ಲೆಂದ .
___-_ __________ _____
ಅನ್ನ ಮಡಕೆಯೊಳಿಹುದು ಎಂದರೆ ನಿನ್ನಯ ಹೊಟ್ಟೆಯು ತುಂಬಲರಿವುದೆ
ಕನ್ನಡಿಯ ವಾರ್ತೆಯನು ಪೇಳ್ದರೆ ಮುಖವು ತೋರುವುದೆ
ಕಣ್ಣು ಕಾಣದ ಕತ್ತಲೆಗೆ ಪ್ರಭೆಯನ್ನು ಪೇಳಿದರಾಯ್ತು ಸೂತಕ
ವನ್ಯರೆಂದರೆ ನಿನಗೆ ಬಪ್ಪುದೆ ಮೂಢ ಹೇಳೆಂದ.
ಧನ ಕುಭೇರನೊಳಿಹುದು ಎಂದರೆ ನಿನಗೆ ಲೆಕ್ಕಕೆ ಸಿಕ್ಕಲರಿವುದೆ
ಜನನ ಮರಣದ ವಾರ್ತೆ ಕೇಳ್ದರ ಶುದ್ಧವಾಗುವುದೆ
ಕನಸಿನಲಿ ತೋರಿದರೆ ದ್ರವ್ಯವು ನೆನಸಿನಲಿ ಸಿಕ್ಕುವುದೆ ಬರಿದೇ
ಮನಸಿನ ಭ್ರಮೆ ಹೊರತು ಸೂತಕವೆಲ್ಲಿ ಹೇಳೆಂದ
----- ----------- ------
ಹಸ್ತ ಮುಟ್ಟೈಜಮಾನ ಹೋಮವ ಮತ್ತೆ ಪೌರೋಹಿತ್ಯ ಗೈದರು
ಕರ್ತೃವಿಗೆ ತತ್ಫಲವು ಬರುವುದು ಗ್ರಹಿಸಿ ನೋಡಿದರೆ
ಮತ್ತು ಅಕ್ಷರ ಶೂನ್ಯವಾದರು ಹಸ್ತ ಮುಟ್ಟಿ ಗೆರೆಯನೆಳೆದರು
ಸುಸ್ತಿರವು ಆಗುವುದು ಕ್ರಯ ಚೀಟಾದಿ ಪತ್ರಗಳು
ಮತ್ತೆ ದಿನ ಗರ್ಭಕೆ ತಾನಲುವತ್ತು ಕಳೆದರೂ ಕಡೆಗೆ ಗಂಡನು
ಸತ್ತು ಹೋದರೆ ಬಾರಪವಾದಗಳು ಹೆತ್ತರೆಯು
ಉತ್ತರೆಯ ಗರ್ಭಕೆ ತಿಂಗಳು ಹತ್ತು ಸಲುವುದ ಮೊದಲೇ ಗಂಡನು
ಸತ್ತು ಹೋದನು ಅದರೊಳಗೆ ಜನಿಸಿದ ಪರೀಕ್ಷಿತನು .
ದಾಯವಾದಿಗಳೊಂಡೆನುವರಾ ದಾಯ ತಪ್ಪಿಸುವದಕೆ ದಾರಿ
ದ್ರಾಯಸದಿ ಕಂಗೆಡಲು ಕೇಳಿದವರಶನ ಕೊಡರು
ಕಾಯ ಕಷ್ಟವ ಬಡಿಸಿದರು ಕೌಂತೇಯರನು ಕೌರವರು ದ್ವಾಪ
ರಾಯುಗ ದಿ ಮುಂದಿನ್ನು ಹೆಚ್ಚೆನೇನುವದೇನಂದ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ