ಬೆಂಬಲಿಗರು

ಭಾನುವಾರ, ಜುಲೈ 18, 2021

ಅಹಮದ್ ಕತ್ರಡ

  ನೆಲ್ಸನ್ ಮಂಡೆಲಾಗೆ ಬ್ರೆಡ್ ಇಲ್ಲ 

                


ನೆಲ್ಸನ್ ಮಂಡೇಲಾ ಗೆ  ಬ್ರೆಡ್ ಇಲ್ಲ - ಇದು ದಕ್ಷಿಣ ಆಫ್ರಿಕಾದ ವರ್ಣ ಭೇದ ನೀತಿ ವಿರುದ್ಧ  ಹೋರಾಡಿದ ಭಾರತ ಮೂಲದ ಶ್ರೀ ಅಹ್ಮದ್ ಕತ್ರಡ ಅವರ ಜೀವನ ಚರಿತ್ರೆ . ಇದರ ಭಾರತೀಯ ಆವೃತ್ತಿ ನ್ಯಾಷನಲ್ ಬುಕ್ ಟ್ರಸ್ಟ್ ಪ್ರಕಟಿಸಿದೆ .. 

೧೯೬೩ ರಲ್ಲಿ ಇವರನ್ನು ದೇಶದ್ರೋಹಕ್ಕಾಗಿ ಬಂಧಿಸಿ ಜೇವಾದಧಿ ಶಿಕ್ಷೆ ವಿಧಿಸಲಾಯಿತು . ರೊಬ್ಬೆನ್ ದ್ವೀಪದ ಜೈಲಿಲ್ಲಿ ೧೯೮೨ ವರೆಗೆ ಮತ್ತು  ೧೯೮೯ ರ ವರೆಗೆ    ಪೊಲ್ಸ್ಮೂರ್  ಸೆರೆಮನೆಯಲ್ಲಿ ಸೆರೆವಾಸ ಅನುಭವಿಸಿ ಬಿಡುಗಡೆ ಹೊಂದಿದ ಇವರು ನೆಲ್ಸನ್ ಮಂಡೇಲಾ ಜೈಲು ಸಂಗಾತಿ .. ವರ್ಣ ಭೇದದಲ್ಲಿಯೂ ವರ್ಗೀಕರಣ ಇತ್ತು . ನೆಲ್ಸನ್ ಮಂಡೇಲರಿಗೆ ಕೊಡದ ಕೆಲ ಸವಲತ್ತುಗಳನ್ನು ಜೈಲಿನಲ್ಲಿ ಇವರಿಗೆ ಕೊಡುತ್ತಿದ್ದರು .ಉದಾಹರಣೆಗೆ ಕತ್ರಡ ಅವರಿಗೆ ಬ್ರೆಡ್ ಕೊಡುತ್ತಿದ್ದರು ,ಮಂಡೇಲಾಗೆ ಇಲ್ಲ .ಇವರ ಆತ್ಮ ಚರಿತ್ರೆಯ ಹೆಸರು ಬರಲು ಕಾರಣ . ತಮಗೆ ಉಳಿದವರಿಗೆ ಇಲ್ಲದ ಸವಲತ್ತು ಬೇಡ ಎಂದು ನಿರಾಕರಿಸಿದರು . 

ಮಿತ್ರರಿಂದ  ಕ್ಯಾಟಿ ಎಂದು ಕರೆಯಲ್ಪಡುತ್ತಿದ್ದ ಇವರು ತಾವು ನಂಬಿದ  ತತ್ವಗಳಿಗಾಗಿ 

ಬಹುಪಾಲು ಜೀವನ  ಸೌಕರ್ಯ ,ತಮ್ಮ  ಪ್ರೀತಿಸಿದ ಹುಡುಗಿ ಮತ್ತು ಕುಟುಂಬ ಎಲ್ಲಕ್ಕೂ ಎರವಾಗ ಬೇಕಾಯಿತು . ಜೈಲಿನಿಂದ ಬಿಡುಗಡೆ ಆಗಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಮಂತ್ರಿ ಪದವಿ ನಯವಾಗಿ ತಿರಸ್ಕರಿದ ಅವರು ಮಂಡೇಲಾ ಅವರಿಗೆ ಸಲಹೆಗಾರರಾಗಿ ಇದ್ದರು . ಮಂಡೇಲಾ ಮತ್ತು ಕತ್ರಡ ಅವರ  ಹೃದಯ ವೈಶಾಲ್ಯ ಎಷ್ಟು ಇತ್ತೆಂದರೆ ತಮ್ಮನ್ನು ಜೈಲಿಗೆ ಹಾಕಿದ ವರ್ಗದ ಮೇಲೆ  ಕಿಂಚಿತ್ತೂ  ದ್ವೇಷ ಪ್ರಕಟಿಸಲಿಲ್ಲ ಮತ್ತು ಪ್ರತಿಕಾರದ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ . ಆದರೆ ಮಂಡೇಲಾ ನಂತರ ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವ ಅಡ ತೊಡಗಿದಾಗ ಕತ್ರಡ ಬಹಳ ನೊಂದಿದ್ದರು ಮಾತ್ರವಲ್ಲ ವಿರೋದಿಸಿದರು . 

ರೊಬ್ಬೆನ್ ದ್ವೀಪದ ಜೈಲು ಸ್ಮಾರಕದ  ಮುಖ್ಯಸ್ಥರಾಗಿ ಸೇವೆ ಸಲ್ಲಿಸುತಿದ್ದ ಇವರು ೨೦೧೭ ರ ಮಾರ್ಚ್ ತಿಂಗಳಲ್ಲಿ ತೀರಿ ಕೊಂಡರು ೨೦೦೫ ರಲ್ಲಿ ಪ್ರವಾಸಿ ಭಾರತೀಯ ಸಮ್ಮಾನ ಭಾರತ ಸರಕಾರ ಇವರಿಗೆ ನೀಡಿ ಗೌರವಿಸಿತ್ತು  . ಅವರ ಕೆಲ ನುಡಿಮುತ್ತುಗಳು .

 

1. Hatred, revenge, bitterness: these are negative emotions. The person harboring those emotions suffers more

ದ್ವೇಷ ,ಪ್ರತೀಕಾರ ,ಕಹಿ ಮನ ;ಇವು ಋಣಾತ್ಮಕ ಭಾವ ಗಳು . ತಮ್ಮೊಳಗೆ ಇವುಗಳಿಗೆ ಆಶ್ರಯ ಕೊಟ್ಟವರು ಹೆಚ್ಚು ಬಳಲುವರು .


2. The hardest thing to open is a closed mind.

ಮುಚ್ಚಿದ ಮನ ತೆರೆಯುವುದು ಬಲು ಕಠಿಣ

3. Mandela was a complex character,both the aristocrat, and royalty, and the peasant; the intellectual and the ordinary person; he was a combination of so many different characteristics, you cannot just put him into one box and say ‘this is him’.

ಮಂಡೇಲಾ ಅವರದು ಸಂಕೀರ್ಣ ವ್ಯಕ್ತಿತ್ವ .ಸಂಪನ್ನ ,ಪ್ರಭುತ್ವ ಮತ್ತ್ತು ರೈತ . ಬುದ್ದಿ ಜೀವಿ ಮತ್ತು ಜನ ಸಾಮಾನ್ಯ ;ಅವರು ಬಹುಮುಖ ವ್ಯಕ್ತಿತ್ವದವರಾಗಿದ್ದು ಒಂದೇ ಪೆಟ್ಟಿಗೆಯಲ್ಲಿ ಹಾಕಿ ಇದು ಅವನು ಎನ್ನುವಂತಿಲ್ಲ .

4. To build a strong foundation for a new country. the elements of forgiveness, absence of wickedness, absence of hatred, absence of revenge, is very crucial.

ನೂತನ ದೇಶದ ಗಟ್ಟಿ ಬುನಾದಿ ಹಾಕುವುದಕ್ಕೆ ,ಕ್ಷಮೆ ,ಕುಟಿಲತೆ ಇಲ್ಲದಿರುವುದು ,ದ್ವೇಷ ಮತ್ತು ಪ್ರತೀಕಾರ ಭಾವ ಇಲ್ಲದಿರುವಿಕೆ ಬಹಳ ಮುಖ್ಯ

5. While we will not forget the brutality of apartheid, we will not want Robben Island to be a monument of our hardship and suffering. We would want it to be a triumph of the human spirit against the forces of evil; a triumph of wisdom and largeness of spirit against small minds and pettiness; a triumph of courage and determination over human frailty and weakness; a triumph of the new South Africa over the old

ನಾವು ವರ್ಣ ಬೇಧ ನೀತಿಯನ್ನು ಮರೆಯಲಾರೆವು .ಆದರೆ ರೋಬ್ಬೆನ್ ದ್ವೀಪ ನಮ್ಮ ಕಷ್ಟ ಕಾರ್ಪಣ್ಯಗಳ ಸ್ಮಾರಕವಾಗುವುದು ಬೇಡ . ಅದು ದುಷ್ಟ ಶಕ್ತಿಗಳ ವಿರುದ್ದ ಮಾನವ ಚೈತನ್ಯ ದ , ಅಲ್ಪ ಮತಿಗಳ ವಿರುದ್ದ ವಿವೇಕದ ,ಮನುಜ ದೌರ್ಬಲ್ಯದ ವಿರುದ್ದ ಧೈರ್ಯ  ಮತ್ತು ದೃಢತೆಯ ,ಹಳೆಯ ದಕ್ಷಿಣ ಆಫ್ರಿಕಾದ ಮೇಲೆ ಹೊಸತರ ವಿಜಯದ ಸಂಕೇತ ಆಗಲಿ .

6. In terms of deprivation, the worst deprivation was the lack of children on the island… I saw a child, and touched a child, after 20 years. So it was the worst deprivation, absence of children. But you couldn’t escape, you had to accept the fact that you are a prisoner

 ದೀರ್ಘ ಜೈಲು ವಾಸದ ಸಮಯದಲ್ಲಿ ನಾನು ಕಳೆದುಕೊಂಡ ಅತ್ಯಮೂಲ್ಯ ವಿಷಯ ಎಂದರೆ ಮಕ್ಕಳು .20 ವರ್ಷಗಳ ನಂತರ ನಾನು ಮಗುವನ್ನು ನೋಡಿದೆ ,ಮಕ್ಕಳನ್ನು ಸ್ಪರ್ಶಿಸಿದೆ . ಆದರೆ ಏನು ಮಾಡೋಣ ಜೈಲು ವಾಸ ,ನೀವು ಒಪ್ಪಿ ಕೊಳ್ಳೆಲೇ ಬೇಕು ;

(ಕತ್ರಡ ಅವಿವಾಹಿತರು ,ಇದು ತಮ್ಮ ಮಕ್ಕಳ ಬಗ್ಗೆ ಅಲ್ಲ )

7. The first thing we achieved on April 27, 1994 was dignity, dignity and equal human rights. Prior to that, all over South Africa there were signs saying “Europeans only” in libraries, restaurants, hotels, parks, railways, everywhere you go, and signs that said “non-Europeans not allowed”. There were even signs that said “non-Europeans and dogs not allowed”, which reduced human beings who were not white to the level of animals.

ಏಪ್ರಿಲ್ 27,1994 ರಂದು ನಾವು ಸಮಾನತೆ ,ಘನತೆ ಮತ್ತು ಸಮಾನ ಮಾನವೀಯ ಹಕ್ಕುಗಳನ್ನು ಪಡೆದೆವು .ಅದಕ್ಕೂ ಮುನ್ನ 'ಯುರೋಪಿಯನ್ನರು ಮಾತ್ರ 'ಎಂಬ ಫಲಕಗಳು ವಾಚನಾಲಯ ,ಹೋಟೆಲುಗಳು ,ಉದ್ಯಾನವನಗಳು ,ರೈಲುಗಳು ಇತ್ಯಾದಿ ಹೋದಲ್ಲೆಲ್ಲ ಕಾಣ ಸಿಗುತ್ತಿದ್ದವು . ಯುರೋಪಿಯನ್ನರಲ್ಲದವರು ಮತ್ತು ನಾಯಿಗಳಿಗೆ ಪ್ರವೇಶವಿಲ್ಲ ಎಂಬ ಬೋರ್ಡ್ ಗಳೂ ಇದ್ದು ಬಿಳಿಯರಲ್ಲದವರನ್ನು ಪ್ರಾಣಿಗಳ ಮಟ್ಟಕ್ಕೆ ಇಳಿಸಲಾಗಿತ್ತು .

8. We don’t hold it against people who broke down under torture. I don’t know what I would have done under torture. I can never say. As brave as I can talk today, I can’t guarantee it.

ಚಿತ್ರಹಿಂಸೆಗೆ ಸ್ಥೈರ್ಯ ಕಳೆದುಕೊಂಡವರ ಬಗ್ಗೆ  ವಿರೋಧಭಾವ  ಇಲ್ಲ . ಅಂತಹ  ಸಂದರ್ಭದಲ್ಲಿ  ನಾನು  ಏನು  ಮಾಡುತ್ತಿದ್ದೆ  ಎಂದು ಹೇಳಲಾರೆ . ಈಗ  ಮಾತನಾಡುವ  ಧೈರ್ಯ ದಂತೆಯೇ  ಆ ಬಗ್ಗೆ ಖಾತರಿ ನೀಡ ಲಾರೆ . 

 .When I say we have achieved dignity as human beings, we must always still be aware that the challenges are no longer apartheid. The challenges are poverty, hunger, malnutrition, unemployment, housing – those are the challenges. And there is no dignity in poverty, there is no dignity in hunger, so we cannot be satisfied in what we have achieved. 

ಮನುಷ್ಯನ ಘನತೆಯನ್ನು ಎತ್ತಿ ಹಿಡಿಯುವುದನ್ನು ಸಾದಿಸಿದರೂ ವರ್ಣ ಭೇದ ನೀತಿಯೊಂದೇ ಸವಾಲು ಅಲ್ಲ . ಬಡತನ ,ಹಸಿವು ,ಅಪೌಷ್ಟಿಕತೆ ,ನಿರುದ್ಯೋಗ ಮತ್ತು ವಸತಿ ಇವು ನೈಜ ಸವಾಲುಗಳು . ಬಡತನ ,ಹಸಿವು ಇವುಗಳಲ್ಲಿ ಘನತೆ ಎಂಬುದು ಇಲ್ಲ .ಆದುದರಿಂದ ನಮ್ಮ ಇದುವರೆಗಿನ ಸಾಧನೆಗಳ ಬಗ್ಗೆ ಪೂರ್ಣ ತೃಪ್ತಿ ಇಲ್ಲ .

 ಬಾಲಂಗೋಚಿ:ಈಗ ದಕ್ಷಿಣ ಆಫ್ರಿಕಾದಲ್ಲಿ ಪ್ರಕ್ಷುಬ್ಡ   ವಾತಾವರಣ   ಸೃಷ್ಟಿಸಿರುವ ಮಾಜಿ ಅಧ್ಯಕ್ಷರ ಭ್ರಷ್ಟಾಚಾರ ಪ್ರಕರಣ ಹಿಂದೆಯೂ ಭಾರತೀಯ  ಮೂಲದವರ ಹೆಸರು ಕೇಳಿ ಬರುತ್ತಿರುವುದು ದುರ್ದೈವ್ಯ.

                                         

https://youtu.be/C7c_Kg2hp5c


 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ