೯೦ ರ ದಶಕದಲ್ಲಿ ಮಹಾನದಿ ಎಂಬ ಕಮಲ ಹಾಸನ್ ಅವರ ಸಿನಿಮಾ ಬಂದಿತ್ತು . ಹೃದಯ(ಕಲಕುವ ) ಸ್ಪರ್ಷಿ ಕಥನ . ಬೇಸರ ಆದಾಗ ಮನಸು ಹಗುರ ಮಾಡಲು ನೋಡುವ ಚಿತ್ರ ಖಂಡಿತಾ ಅಲ್ಲ . ಮಹಾನದಿ ಎಂದರೆ ಕಾವೇರಿ .ಇದರ ಆರಂಭ ಭಾಗದಲ್ಲಿ ಶ್ರೀರಂಗ ನಾಥನ ಸನ್ನಿಧಿಯಲ್ಲಿ ಚಿತ್ರೀಕರಣ ಗೊಂಡ ಹಾಡಿದೆ . ಇದರಲ್ಲಿ ಬಾಲ ನಟಿಯಾಗಿ ಅಭಿನಯಿಸಿದ ಶೋಭನಾ ಈಗ ಪ್ರಸಿದ್ಧ ಕರ್ನಾಟಕ ಸಂಗೀತ ಕಲಾವಿದೆ . ದಕ್ಷಿಣ ಭಾರತದಲ್ಲಿ ಆಗಲೇ ಶೋಭನಾ ಹೆಸರಿನ ಪ್ರಸಿದ್ಧ ನಟಿ ಇದ್ದ ಕಾರಣ ಈಕೆಗೆ ಮಹಾನದಿ ಶೋಭನಾ ಎಂಬ ಹೆಸರೇ ಖಾಯಂ ಆಯಿತು . ಈ ಚಿತ್ರ ಯು ಟ್ಯೂಬ್ ನಲ್ಲಿ ಲಭ್ಯವಿರ ಬೇಕು .ಆಸಕ್ತರು ನೋಡಿ .
ಈ ಚಿತ್ರದಲ್ಲಿ ಒಂದು ಖಳನಾಯಕ ಪಾತ್ರ ಇದೆ .ಅದರಲ್ಲಿ ನಟಿಸಿದವರು ಮಲಯಾಳಂ ನಟ ಕೊಚಿನ್ ಹನೀಫಾ . ಅವರ ಅಭಿನಯ ಎಷ್ಟು ಸಹಜ ಆಗಿತ್ತು ಎಂದರೆ ಅವರ ಪಾತ್ರ ನೆನೆಸಿಗೊಂಡರೆ ಮೈ ಉರಿಯುವುದು . ಈ ನಟ ನಿಗೆ ಖಳ ನಾಯಕನಿಗೆ ಬೇಕಾದ ಶರೀರ ಮತ್ತು ಮುಖ ಚಹರೆ ಇತ್ತು . ಆದರೆ ಮಲಯಾಳಂ ಚಿತ್ರ ರಂಗದಲ್ಲಿ ಈತ ಖಳ ಹಾಸ್ಯ ನಟನಾಗಿ (hilarious villain )ಮಿಂಚಿ ಜನಪ್ರಿಯರಾದರು .ರಾಜನ್ ಪಿ ದೇವ್ ಎಂಬವರು ಕೂಡಾ ಸ್ವಲ್ಪ ಹೀಗೆಯೇ ..
ಕಿರೀಡಂ ಎಂಬ ಮೋಹನಲಾಲ್ ಸಿನೆಮಾದಲ್ಲಿ ಹೈಡ್ರೋಸ್ ಎಂಬ ಖಳನಾಯಕನ ಪಾತ್ರ ಇವರಿಗೆ ಪ್ರಸಿದ್ದಿ ಕೊಟ್ಟಿತು .ಮನ್ನಾರ್ ಮಥಾಯಿ ಸ್ಪೀಕ್ಕಿಂಗ್ ಹಾಸ್ಯ ನಟನಾಗಿ ನಿರೂಪಿಸಿತು .ಮುಂದೆ ದಿಲೀಪ್ ,ಜಗದಿ ಜತೆ ಮೀಶೆ ಮಾಧವನ್ ,ಸಿ ಐ ಡಿ ಮೂಸಾ ,ಮತ್ತು ದಿಲೀಪ್ ನಟನೆಯ ಪಂಜಾಬಿ ಹೌಸ್ ಚಿತ್ರಗಳ ಪಾತ್ರಗಳು ಜನಪ್ರಿಯತೆ ತಂದು ಕೊಟ್ಟವು .ಪ್ರಸಿದ್ಧ ಕೊಚಿನ್ ಕಲಾಭವನ್ ನಲ್ಲಿ ರೂಪಿತ ಗೊಂಡ ಈ ನಟ ಚಲನ ಚಿತ್ರ ನಿರ್ದೇಶನ ದಲ್ಲಿಯೂ ಕೈಯಾಡಿಸಿದ್ದರು .
೨೦೧೦ರಲ್ಲಿ ಅನಾರೋಗ್ಯದಿಂದ ನಿಧನ ರಾದರು .
ಬಾಲಂಗೋಚಿ :ಕೊಡವರಷ್ಟೇ ಕಾವೇರಿಯನ್ನು ತಮಿಳರೂ ಪೂಜಿಸುವರು . ತಲಕಾವೇರಿಗೆ ಬರುವ ಭಕ್ತರನ್ನು ತಮಿಳರ ಸಂಖ್ಯೆ ನೋಡಿದರೆ ನಮಗೆ ತಿಳಿಯುವುದು . ಮಹಾನದಿ ಚಿತ್ರೆದ ಒಂದು ಹಾಡು ನೋಡಿ ಕೇಳಲು ಕೆಳಗಿನ ಲಿಂಕ್ ಬಳಸಿರಿ .
https://youtu.be/qIJ1ZggO1n8
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ